janadhvani

Kannada Online News Paper

1

ನಾಳೆ KCF ಒಮಾನ್ ವತಿಯಿಂದ ಅಲ್ ಮುಬಾಶಿರ ಗ್ರ್ಯಾಂಡ್ ಫ್ಯಾಮಿಲಿ ಮೀಟ್

ಬರ್ಕ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ವತಿಯಿಂದ ದಿನಾಂಕ 17-02-2023 ನಾಳೆ KCF ‘ಅಲ್ ಮುಬಾಶಿರ ಗ್ರ್ಯಾಂಡ್ ಫ್ಯಾಮಿಲಿ ಮೀಟ್’ ಬರ್ಕಾದ ಅಲ್ ರಿಯಾಮ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮವು ಬೆಳಿಗ್ಗೆ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಉದ್ಘಾಟನೆಗೆೊಳ್ಳಲಿದ್ದು, ವಾರ್ಷಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದೊಂದಿಗೆ ಮರ್ಹೂಂ ಝಾಕಿರ್ ಸೂರಿಂಜೆ, ಮರ್ಹೂಂ ಅಬ್ಬಾಸ್ ಮಿತ್ತೂರು, ಮರ್ಹೂಂ ಹಮೀದಾಕ ಕನ್ನಂಗಾರ್ ಇವರ ಅನುಸ್ಮರಣಾ ಮಜ್ಲಿಸ್ ಅದೇ ವೇದಿಕೆಯಲ್ಲಿ ನಡೆಯಲಿದೆ. ನಂತರ 10 ಗಂಟೆಗೆ ಗಲ್ಫ್ ನಾಡಲ್ಲಿ ಹೊಸ ಇತಿಹಾಸ ಬರೆದ ಅನಿವಾಸಿ ಕನ್ನಡಿಗರ ಸಂಘಟನೆ KCF ಇದರ 10 ನೇ ವರ್ಷದ KCF ಫೌಂಡೇಷನ್ ಡೇ ಕಾರ್ಯಕ್ರಮವು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
ಹಾಗೂ ಸಂಜೆಯವರೆಗೆ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಯುವಕರಿಗೆ, ವಯಸ್ಕರಿಗೆ ಹಾಗೂ ಸ್ತ್ರೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು,

ಹಾಗೂ ಕೆಸಿಎಫ್ ಒಮಾನಿನಲ್ಲಿದ್ದು ಮೂವತ್ತು ವರ್ಷಗಳಿಂದ ಅನಿವಾಸಿ ಜೀವನವನ್ನು ಕಳೆಯುತ್ತಿರುವ ಪ್ರವಾಸಿ ಸಾಧಕರಿಗೆ ಹಾಗೂ ವಿವಿಧ ರಂಗದಲ್ಲಿ ಗುರುತಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಒಮಾನಿನ ಪ್ರಮುಖ ಆಸ್ಪತ್ರೆಗಳಲ್ಲೊಂದಾದ ಬದರ್ ಅಲ್ ಸಮಾ ಇದರ ಸಹಯೋಗದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 5 ರ ತನಕ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಡಾ. ಅಬ್ದುಲ್ ರಝಾಕ್ ಕಾಪು (senior cardiologist MOH oman ) ಇವರ ನೇತೃತ್ವದಲ್ಲಿ ಹೆಲ್ತ್ ಎವರ್ನೆಸ್ ಕಾರ್ಯಕ್ರಮ, ಸಲೀಮ್ ಅಲ್ತಾಫ್ ಸುಳ್ಯ(National Director BNI Oman) ಇವರ ನೇತೃತ್ವದಲ್ಲಿ ಸೆಲ್ಫ್ ಬಿಸಿನೆಸ್ ತರಬೇತಿ ನಡೆಯಲಿದೆ.

ಸಂಜೆ ಸಮಯ ಸಮಯ 7:30 ಕ್ಕೆ ಬ್ರೈಟ್ ಆಫ್ ಮದೀನ ಎಂಬ ಶೀರ್ಷಿಕೆಯೊಂದಿಗೆ ಬುರ್ದಾ ಹಾಗೂ ನಅ್ತೇ ಶರೀಫ್ ಹಾಗೂ ದಫ್ ಕಾರ್ಯಕ್ರಮ ನಡೆಯಲಿದೆ.

ಕೊನೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಇವರ ದುಆದೊಂದಿಗೆ ನಡೆಯುವ ಕಾರ್ಯಕ್ರಮವನ್ನು ಜನಾಬ್ ಅಯ್ಯೂಬ್ ಕೋಡಿಯವರು ಅಧ್ಯಕ್ಷತೆ ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಇದರ ಅಧೀನದಲ್ಲಿ ಉತ್ತರ ಕರ್ನಾಟಕಕ್ಕೆ ಮತ್ತೊಂದು ಗರಿಯಾಗಿ ಶಿಕಾರಿಪುರ ಮದ್ರಸ ಕಟ್ಟಡ ಇದರ ಅಧಿಕೃತ ಚಾಲನೆಯು ನಡೆಯಲಿದೆ.
ಕೆಸಿಎಫ್ ಒಮಾನ್ ದಶಮಾನೋತ್ಸವ ವಿಶೇಷಾಂಕ ಇದರ ಸಂಚಿಕೆಯ ಮುಖಪುಟ ಬಿಡುಗಡೆಯು ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಆಬಿದ್ ಪಾಷ ಬಾಳೆಹೊನ್ನೂರು, ಮುಹಮ್ಮದ್ ಸಾಜಿದ್ ಅತ್ತರ್ ಮುಂಬಯಿ,ಅಬ್ಬಾಸ್ ಫೈಝಿ ದೇವಿ ಪಟ್ನಂ , ಜನಾಬ್ ಇಕ್ಬಾಲ್ ಬೊಳ್ಮಾರ್ ಬರ್ಕ, ಸ್ವಾದಿಕ್ ಹಾಜಿ ಸುಳ್ಯ, ಜನಾಬ್ ಆರಿಫ್ ಕೋಡಿ, ಇಬ್ರಾಹೀಂ ಹಾಜಿ ಅತ್ರಾಡಿ, ಅಬ್ದುಲ್ ಸಲಾಂ ಸಖಾಫಿ ಅರಿಕ್ಕಾಡಿ, ಉಬೈದುಲ್ಲಾ ಸಖಾಫಿ ಮಿತ್ತೂರು, ಸಲೀಮ್ ಮಿಸ್ಬಾಹಿ ಕನ್ಯಾನ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಚೇರ್ಮೇನ್ ಸಿದ್ದೀಕ್ ಮಾಂಬ್ಳಿ ಸುಳ್ಯ ಹಾಗೂ ಕನ್ವೀನರ್ ಹಂಝ ಹಾಜಿ ಕನ್ನಂಗಾರ್ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

1
1
1

error: Content is protected !! Not allowed copy content from janadhvani.com