ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಮ್ ಝೋನ್ ಅಧೀನದ ದಮ್ಮಾಮ್ ಘಟಕದ 31ನೇ ವಾರ್ಷಿಕ ಮಹಾಸಭೆ ದಿನಾಂಕ 29, ಜನವರಿ 2026 ಗುರುವಾರ ಅಸ್ತ ಶುಕ್ರವಾರ ರಾತ್ರಿ 10.30 ಗಂಟೆಗೆ ಸರಿಯಾಗಿ ದಮ್ಮಾಮ್ ಅಡಿಟೋರಿಯಂ ನಲ್ಲಿ ಜರಗಿತು.
ದಮ್ಮಾಮ್ ಘಟಕದ ಉಪಾಧ್ಯಕ್ಷ ಜಮಾಲ್ ಮುಹ್ಯಿದ್ದೀನ್ ಉಚ್ಚಿಲ ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು.


ಶೌಕತ್ ಅಲೀ ತೀರ್ಥಹಳ್ಳಿ ಸೂರ: ಅರ್ರಹ್ಮಾನ್ ಪಾರಾಯಣ ಗೈದರು. ಅಬ್ದುಲ್ ಅಝೀಝ್ ಮೂಡುತೋಟ ಸಭೆಗೆ ಆಗಮಿಸಿದ ಡಿಕೆಯಸ್ಸಿ ಯ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ ಡಿಕೆಯಸ್ಸಿ ನಡೆದು ಕೊಂಡು ಬಂದ ದಾರಿಯನ್ನು ವಿವರಿಸಿ ಅಲ್ಲಾಹನ ಪವಿತ್ರ ನಾಮ ದೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು.
ಇಸ್ಮಾಯೀಲ್ ಕಾಟಿಪಳ್ಳ ವಾರ್ಷಿಕ ವರದಿ ಹಾಗೂ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಚೊಕ್ಕಬೆಟ್ಟು ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.


ಉಪಾಧ್ಯಕ್ಷ ಜಮಾಲ್ ಉಚ್ಚಿಲ ರವರು ಮಾತನಾಡಿ ಡಿಕೆಯಸ್ಸಿ ಗಾಗಿ ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತಕ್ಕುದಾದ ಪ್ರತಿಫಲ ಅಲ್ಲಾಹು ದ್ವಿಲೋಕದಲ್ಲೂ ಅನುಗ್ರಹಿಸಲಿ ಆಮೀನ್ ಎಂದು ಪ್ರಾರ್ಥಿಸಿದರು.
2026-27 ನೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ದಮ್ಮಾಮ್ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ರಚಿಸಿದರು.
ಅಧ್ಯಕ್ಷರಾಗಿ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ಡೆವಲಪ್ ಮೆಂಟ್ ಚಯರ್ಮ್ಯಾನ್ ಹಸನ್ ಬಾವ ಕುಪ್ಪೆಪದವು, ಪ್ರಧಾನ ಕಾರ್ಯದರ್ಶಿ ಶೌಕತ್ ತೀರ್ಥ ಹಳ್ಳಿ, ಹಣಕಾಸು ಕಾರ್ಯದರ್ಶಿಯಾಗಿ ಶಾಕಿರ್ ಬೊಳ್ಳಾಯಿ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ
ಜಮಾಲ್ ಮುಹ್ಯಿದ್ದೀನ್ ಉಚ್ಚಿಲ,
ಉಮರಬ್ಬ ಮರವೂರು, ಅಬೂಬಕ್ಕರ್ ಅಜಿಲಮೊಗರು , ಕಾರ್ಯದರ್ಶಿಗಳಾಗಿ ಜುರೈಜ್ ರವರನ್ನು ನೇಮಿಸಲಾಯಿತು.
ಸಲಹಾ ಸಮಿತಿಗೆ ಮತ್ತು 20 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಫ್ಯಾಮಿಲಿ ಮುಲಾಖಾತ್ ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು, ಮದದ್ ವಿಂಗ್ ಅಧ್ಯಕ್ಷ ಅಶ್ರಫ್ ಚಿಕ್ಕಮಗಳೂರು ಉಪಸ್ಥಿತರಿದ್ದರು.

ಶುಭಾ ಶಂಸೆಗೈದವರು:
ಡಿಕೆಯಸ್ಸಿಯ ದಮ್ಮಾಂ ಘಟಕದ ಮಾಜಿ ಅಧ್ಯಕ್ಷರುಗಳಾದ
ಸಿದ್ದೀಖ್ ಕೊಂಚಾರ್,
ಸಯ್ಯಿದ್ ಬಾವ ಬಜ್ಪೆ,
ಹಸನ್ ಬಾವ ಬೆಂಗಳೂರು (ಊರಿನಿಂದ)
ಅಬ್ದುಲ್ ಹಮೀದ್ ಕೊಂಚಾರ್
(ಊರಿನಿಂದ)
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಜಮಾಲ್ ಸ್ವಾಲಿಹ್ ಕಣ್ಣಂಗಾರ್ ಮಾತನಾಡುತ್ತಾ ತಾವುಗಳೆಲ್ಲರೂ ಡಿಕೆಯಸ್ಸಿ ಗಾಗಿ ಹೆಚ್ಚಿನ ಮುತುವರ್ಜಿಯಿಂದ ಪ್ರವರ್ತನೆಗೈದು ಡಿಕೆಯಸ್ಸಿಯ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಬೇಕೆoದು ವಿನಂತಿಸಿದರು.
ಕಮ್ಯುನಿಕೇಷನ್ ಸೆಕ್ರೆಟರಿ ಇಸ್ಮಾಯೀಲ್ ಕಾಟಿಪಳ್ಳ ಸಭೆಯ ಕೊನೆಯಲ್ಲಿ ಧನ್ಯವಾದ ಗೈದರು.
ವರದಿ: ಇಸ್ಮಾಯೀಲ್ ಕಾಟಿಪಳ್ಳ
(ಮೀಡಿಯಾ ವಿಂಗ್)
ದಮ್ಮಾಂ, ಸೌದಿ ಅರೇಬಿಯ
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ