ಸುಳ್ಯ: ಎಲಿಮಲೆ ಇಕ್ರಾಮುಸ್ಸುನ್ನ ಸನದುದಾನ ಮಹಾಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭವು ನಾಳೆ ಜನವರಿ 29 ಮತ್ತು 30 ರಂದು ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಸೈಯಿದ್ ಮುಹ್ಸಿನ್ ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್ ಮುದರ್ರಿಸ್ ಎಲಿಮಲೆ ಯವರ ನೇತೃತ್ವದಲ್ಲಿ ನಡೆಸುತ್ತಿರುವ ಇಕ್ರಾಮುಸ್ಸುನ್ನ ದರ್ಸ್ ಎಲಿಮಲೆ ಇದರ ಎರಡನೇ ಸನದುದಾನ ಮಹಾಸಮ್ಮೇಳನ ಹಾಗೂ ಎಲಿಮಲೆ ಯುವಕರ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭ ಕಾರ್ಯಕ್ರಮವು ನಾಳೆ ಗುರುವಾರ ಮತ್ತು ಶುಕ್ರವಾರ ಇಕ್ರಾಮುಸ್ಸುನ್ನ ಕ್ಯಾಂಪಸ್ ಎಲಿಮಲೆಯಲ್ಲಿ ಜರುಗಲಿದೆ.
ನಾಳೆ ಜನವರಿ 29 ಗುರುವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ಮಹಿಳೆಯರಿಗಾಗಿ ವಿಶೇಷ ತರಬೇತಿ ಶಿಬಿರ, ಎಲಿಮಲೆ ತಂಗಳ್ ರವರ ಪಿತಾಮಹರ ಆಂಡ್ ನೇರ್ಚೆ, ಬೃಹತ್ ಬುರ್ಧಾ ಮಜ್ಲಿಸ್, ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ, ಜಿಸಿಸಿ ಎಲಿಮಲೆ ಗಲ್ಫ್ ಮೀಟ್, ಹಳೆ ವಿಧ್ಯಾರ್ಥಿಗಳ ಅಲುಮ್ನಿ ಮೀಟ್ ಧಾರ್ಮಿಕ ಉಪನ್ಯಾಸ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬಹು: ನೂರುಸ್ಸಾದಾತ್ ಬಾಯಾರ್ ತಂಙಳ್, ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ, ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್, ಮಾಣಿ ಉಸ್ತಾದ್, ಕರ್ನಾಟಕ ವಿಧಾನಸಬಾಧ್ಯಕ್ಷರಾದ ಜನಾಬ್ ಯುಟಿ ಖಾದರ್ ಫರೀದ್, ಟಿಎಂ ಶಹೀದ್, ಪ್ರಖ್ಯಾತ ಬುರ್ದಾ ಗಾಯಕರಾದ ಕಾಸಿಮ್ ಕಾಮಿಲ್ ಸಖಾಫಿ, ಸಮದ್ ಸಖಾಫಿ, ಅಝರ್ ಕಲ್ಲೂರು, ಆಸಿಫ್, ಮಿಕ್ದಾದ್ ಹಾಗೂ ಕರ್ನಾಟಕದ ಪ್ರಖ್ಯಾತ ನಅತ್ ಗಾಯಕರಾದ ನಬೀಲ್ ಬರಕಾತಿ ಬೆಂಗಳೂರು ಹಾಗೂ ಸಾಮಾಜಿಕ ರಾಜಕೀಯ ಧಾರ್ಮಿಕ ನೇತಾರರು ಭಾಗವಹಸದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ