ಟೆಲ್ ಅವಿವ್: ಸುಮಾರು ವರ್ಷಗಳಿಂದೀಚೆಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳ ದಿಗ್ಬಂಧನಕ್ಕೆ ಒಳಗಾಗಿ, ಯಾವುದೇ ರಫ್ತು ವಹಿವಾಟು ನಡೆಸಲು ಸಾಧ್ಯವಾಗದೇ, ತಾನಾಯಿತು ತನ್ನ ಪಾಡಾಯಿತು ಎಂಬ ನೆಲೆಯಲ್ಲಿ ಮುಂದುವರಿಯುತ್ತಿದ್ದ ಇರಾನನ್ನು ಕೆಣಕಿದ ಇಸ್ರೇಲ್ ಇದೀಗ ಭಿಕ್ಷಾಟನೆಗೆ ಇಳಿದಿರುವ ಬಗ್ಗೆ ವರದಿಯಾಗಿದೆ.
ಜೂನ್ 13 ರಂದು ಇಸ್ರೇಲ್ ನಡೆಸಿದ ದಾಳಿಯ ನಂತರ ಇರಾನ್ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಇಸ್ರೇಲ್‌ನಲ್ಲಿ 40,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯವಹಾರ ಕೇಂದ್ರಗಳು ನಾಶವಾಗಿವೆ ಮತ್ತು 10,600 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇವರಿಗೆ ಧನ ಸಹಾಯದ ಮನವಿಯೊಂದಿಗೆ ಇಸ್ರೇಲಿ ಸಹಾಯ ಸಮಿತಿ ಓಜೆನ್ ನಿಧಿಸಂಗ್ರಹಣೆ ಪ್ರಾರಂಭಿಸಿದೆ. ನಷ್ಟದ ಅಂಕಿಅಂಶಗಳನ್ನು ಅವರ ವೆಬ್‌ಸೈಟ್‌ನಲ್ಲಿ ಮತ್ತು ‘ಟೈಮ್ಸ್ ಆಫ್ ಇಸ್ರೇಲ್’ ನ ಸುದ್ದಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಜೂನ್ 13 ರಂದು ಇಸ್ರೇಲ್ ನಡೆಸಿದ ಆಪರೇಷನ್ ರೈಸಿಂಗ್ ಲಯನ್‌ಗೆ ಪ್ರತೀಕಾರವಾಗಿ, ಇರಾನ್ ಇಸ್ರೇಲ್‌ನಾದ್ಯಂತ ನಗರಗಳ ಮೇಲೆ ದೈನಂದಿನ ಕ್ಷಿಪಣಿ ದಾಳಿಗಳನ್ನು ನಡೆಸಿತು. ಇರಾನಿನ ಕ್ಷಿಪಣಿಗಳು ಇಡೀ ನಗರದ ನೆರೆಹೊರೆಗಳನ್ನೂ ನೆಲಸಮಗೊಳಿಸಿವೆ. 10,600 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. 40,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯವಹಾರಗಳು ನಾಶವಾಗಿವೆ. ಪ್ರತಿಯೊಂದರ ಹಿಂದೆಯೂ ಒಂದು ಕುಟುಂಬ ಆರ್ಥಿಕವಾಗಿ ಧ್ವಂಸಗೊಂಡಿದೆ. ಬೀದಿಗಳು ಹಾಳಾಗಿವೆ. ಜೀವನೋಪಾಯಗಳು ನಾಶವಾಗಿವೆ. ಅಂಗಡಿಗಳು ಮುಚ್ಚಲ್ಪಟ್ಟಿವೆ. ವೇತನ ನಿಲ್ಲಿಸಲಾಗಿದೆ. ಬಾಕಿ ಉಳಿದಿರುವ ಮನೆಗಳೂ ವಾಸಯೋಗ್ಯವಾಗಿಲ್ಲ. ಭಾರಿ ಹಾನಿಯುಂಟಾಗಿದೆ. 300,000 ಕ್ಕೂ ಹೆಚ್ಚು ಮೀಸಲು ಸೈನಿಕರನ್ನು ಕರೆಸಲಾಗಿದೆ. ಅನೇಕರು ತಮ್ಮ ಕುಟುಂಬಗಳು ಮತ್ತು ಸಣ್ಣ ವ್ಯವಹಾರಗಳನ್ನು ಬಿಟ್ಟು ಮಿಲಿಟರಿಗೆ ಸೇರಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ಆರ್ಥಿಕ ವಹಿವಾಟುಗಳು ಸ್ಥಗಿತಗೊಂಡಿವೆ.”
“ಸಾವಿರಾರು ವ್ಯವಹಾರಗಳು ಮುಚ್ಚುತ್ತಿವೆ ಅಥವಾ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಸಂಖ್ಯೆಗಳು ಪ್ರತಿದಿನ ಹೆಚ್ಚುತ್ತಿವೆ. ಸ್ಥಳೀಯ ಸರ್ಕಾರಿ ವ್ಯವಸ್ಥೆಗಳು ಭೌತಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಹೆಣಗಾಡುತ್ತಿವೆ” ಎಂದು ವರದಿ ಹೇಳುತ್ತದೆ.
ಪರಿಹಾರ ಒದಗಿಸಲು OGEN ಆರಂಭದಲ್ಲಿ 100 ಮಿಲಿಯನ್ ಇಸ್ರೇಲಿ ಶೆಕೆಲ್‌ಗಳನ್ನು (252.72 ಕೋಟಿ ಭಾರತೀಯ ರೂಪಾಯಿಗಳು) ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಯುದ್ಧದಲ್ಲಿ ಹೆಚ್ಚು ಹಾನಿಗೊಳಗಾದ ಮನೆಗಳು ಮತ್ತು ಸಣ್ಣ ವ್ಯವಹಾರಗಳಿಗೆ ತಕ್ಷಣದ ಸಹಾಯವನ್ನು ಒದಗಿಸಲಾಗುವುದು ಎಂದು ಅವರು ಹೇಳುತ್ತಾರೆ.
















ಇನ್ನಷ್ಟು ಸುದ್ದಿಗಳು
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ
ಇರಾನ್ ಜೊತೆಗಿನ ಸಂಧಾನಕ್ಕೆ ಬ್ರೇಕ್? – ಅಮೆರಿಕ ನಿಯೋಗದ ಪ್ರವಾಸ ರದ್ದುಪಡಿಸಿದ ಟ್ರಂಪ್
ಇಸ್ರೇಲ್ ಪ್ರಧಾನಿಗೆ ಕ್ಯಾನ್ಸರ್: ಇರಾನ್ ಭಯದಿಂದ ವಿಷಯ ಮುಚ್ಚಿಟ್ಟಿದ್ದಾಗಿ ಸ್ಪಷ್ಟನೆ
ಇರಾನ್ ಪರ ಗುಂಪುಗಳ ದಾಳಿ ಹಿನ್ನೆಲೆ: ಇರಾಕ್ಗೆ ಸೇರಬೇಕಿದ್ದ 500 ಮಿಲಿಯನ್ ಡಾಲರ್ ನಗದು ಸಾಗಾಟವನ್ನು ತಡೆದ ಅಮೆರಿಕ
ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಮೂರು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ
ನಾಳೆ ಮಾತುಕತೆ: ಒಪ್ಪಂದಕ್ಕೆ ಬಾರದಿದ್ದರೆ ಇರಾನ್ನ ವಿದ್ಯುತ್ ಸ್ಥಾವರ, ಸೇತುವೆಗಳ ಧ್ವಂಸ- ಟ್ರಂಪ್ ಎಚ್ಚರಿಕೆ
ಯುಎಸ್-ಇರಾನ್ ಕದನ ವಿರಾಮ ಅಂತ್ಯಕ್ಕೆ ದಿನಗಣನೆ- ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ
ನೌಕಾ ದಿಗ್ಬಂಧನವನ್ನು ಹಿಂಪಡೆಯದ ಅಮೆರಿಕ- ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದ ಇರಾನ್