janadhvani

Kannada Online News Paper

ಖುರ್ರತುಸ್ಸಾದಾತ್ ಉರೂಸ್: ಯಶಸ್ವಿಗೊಳಿಸುವಂತೆ ಎಸ್ ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಕರೆ

ಕರ್ನಾಟಕಕ್ಕೆ ಧಾರ್ಮಿಕ ಬೆಳಕು ಚೆಲ್ಲಿದ ತಾಜುಲ್ ಉಲಮಾರ ಧೀಮಂತ ಪುತ್ರರೂ, ಉಳ್ಳಾಲ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದ, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುತ್ತಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಕೂರತ್ ಅವರ ಪ್ರಥಮ ಉರೂಸ್ ಕಾರ್ಯಕ್ರಮವು 2025 ಜೂನ್ 26,27,28,29 ದಿನಾಂಕಗಳಲ್ಲಿ ಕಡಬ ತಾಲೂಕಿನ ಕೂರತ್ ಎಂಬಲ್ಲಿ ನಡೆಯಲಿದೆ.

ಪತಾಕೆ ಜಾಥಾ, ಖತ್ಮುಲ್ ಖುರ್‌ಆನ್, ಉದ್ಘಾಟನಾ ಸಮಾರಂಭ, ಸ್ವಲಾತ್ ಮಜ್ಲಿಸ್, ಬುರ್ದಾ ಮಜ್ಲಿಸ್, ಅಹ್ಲುಲ್ ಅಬಾಅ್ ಮೌಲಿದ್, ‘ನೂರೇ ಫಝಲ್’ ಕಾನ್ಫರೆನ್ಸ್, ಮಂಕೂಸ್ ಮೌಲಿದ್, ತಾಜುಲ್ ಉಲಮಾ ಮೌಲಿದ್, ರಿಫಾಈ ರಾತೀಬ್ ಮಜ್ಲಿಸ್‌, ಮೊಹಲ್ಲಾ ಸಂಗಮ, ಸಾಮಾಜಿಕ ಕಾರ್ಯಕ್ರಮ, ಉರೂಸ್ ಸಮಾರೋಪ ಸಮಾರಂಭ ಮತ್ತು ಮಹಾ ಅನ್ನದಾನ ಸಹಿತ ವಿಭಿನ್ನ ಕಾರ್ಯಕ್ರಮಗಳು ನಡೆಯಲಿದ್ದು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್, ರ‌ಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದ್, ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ತಂಙಳ್ ಕಡಲುಂಡಿ, ಅಸ್ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಸಹಿತವಿರುವ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ನಾಯಕರು ಭಾಗವಹಿಸಲಿರುವ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲೆ ಕರೆ ನೀಡಿದೆ.