ಪುತ್ತೂರು :ಆಧ್ಯಾತ್ಮಿಕ ನೇತಾರರಾದ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ನ.ಮ.) ರವರ ಪ್ರಥಮ ಉರೂಸ್ ಕಾರ್ಯಕ್ರಮವು 2025 ಜೂನ್ 26 ರಿಂದ 29 ತನಕ ಫಝಲ್ ನಗರ ಕೂರಾದಲ್ಲಿ ನಡೆಯಲಿದೆ.
ಧ್ವಜಾರೋಹಣ, ಖತಮುಲ್ ಕುರ್ಆನ್, ಸ್ವಲಾತ್ ಮಜ್ಲಿಸ್, ಶಾದುಲಿ ರಾತೀಬ್, ರಿಫಾಯಿ ರಾತೀಬ್, ಬುರ್ಧಾ ಮಜ್ಲಿಸ್, ಮಂಕೂಸು ಮೌಲಿದ್, ತಾಜುಲ್ ಉಲಮಾ ಮೌಲಿದ್, ಬದ್ರ್ ಮೌಲಿದ್, ಅಹ್ಲ್ಲು ಅಬಾಅ್ ಮೌಲಿದ್, ಮೊಹಲ್ಲಾ ಸಂಗಮ, ನೂರೇ ಫಝಲ್ ಕಾನ್ಫರೆನ್ಸ್, ಸಾಮಾಜಿಕ ಸಮಾವೇಶ ಹೀಗೆ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದ್ದು, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್, ರಈಸುಲ್ ಉಲಮಾ ಇ ಸುಲೈಮಾನ್ ಉಸ್ತಾದ್, ಅಸ್ಸೆಯ್ಯಿದ್ ಅಲಿ ಭಾಫಕಿ ತಂಙಳ್, ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಬುಖಾರಿ ಕಡಲುಂಡಿ ತಂಙಳ್, ಖುದುವತುಸ್ಸಾದಾತ್ ಕೆ ಎಸ್ ಆಟಕೋಯ ತಂಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಮುಹಿಸ್ಸುನ್ನ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಖುರ್ರತುಸ್ಸಾದಾತ್ ಸುಪುತ್ರ ಸಯ್ಯಿದ್ ಮಸ್ಊದ್ ತಂಙಳ್ ಅಲ್ ಬುಖಾರಿ, ಡಾ| ಅಬ್ದುಲ್ ಹಕೀಂ ಅಝ್ಹರಿ, ಮೌಲಾನಾ ಶಾಫಿ ಸಅದಿ, ಕರ್ನಾಟಕ ಸ್ಪೀಕರ್ ಹಾಜಿ ಯು ಟಿ ಖಾದರ್, ಪುತ್ತೂರು ಶಾಸಕ ಅಶೋಕ್ ರೈ ಮೊದಲಾದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ನಾಯಕರು ಭಾಗವಹಿಸಿ ವಿವಿಧ ಕಾರ್ಯಕ್ರಮಗಳಿಗೆ ನೇತೃತ್ವ ನೀಡಲಿದ್ದಾರೆ. ಕಾರ್ಯಕ್ರಮದ ಕೊನೆಯ ದಿವಸ ಬೆಳಿಗ್ಗೆಯಿಂದ ಸಂಜೆಯ ತನಕ ಸಾರ್ವಜನಿಕ ಅನ್ನದಾನ ನಡೆಯಲಿದೆ.
ಖುರ್ರತುಸ್ಸಾದಾತ್ ಉರೂಸ್ ಪ್ರಯುಕ್ತ ನಾಲ್ಕು ದಿನಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸುನ್ನಿ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಕರೆ ನೀಡಿದೆ.








