ವಾಷಿಂಗ್ಟನ್: ಇರಾನ್ ಮತ್ತು ಇಸ್ರೇಲ್ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ತಮ್ಮ ಹಸ್ತಕ್ಷೇಪವು ಅನೇಕ ಸಂಘರ್ಷದ ದೇಶಗಳ ನಡುವೆ ಶಾಂತಿ ನೆಲೆಸಿದೆ ಎಂದು ಟ್ರಂಪ್ ಹೇಳಿದ್ದು ಆದರೆ ಅವುಗಳಿಗೆ ಯಾವುದೇ ಕ್ರೆಡಿಟ್ ಸಿಗಲಿಲ್ಲ. ಆದರೂ ಓಕೆ. ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಕ್ಕೆ ವ್ಯಾಪಾರ ಮತ್ತು ರಾಜತಾಂತ್ರಿಕತೆ ಬಳಸಿದ್ದೆ ಎಂದು ಟ್ರೂತ್ ಸೋಷಿಯಲ್‌ನ ಪೋಸ್ಟ್‌ನಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.
ಸೆರ್ಬಿಯಾ ಮತ್ತು ಕೊಸೊವೊ, ಈಜಿಪ್ಟ್ ಮತ್ತು ಇಥಿಯೋಪಿಯಾದಂತಹ ದೇಶಗಳ ನಡುವಿನ ಶಾಂತಿಯನ್ನು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ತಾವು ಬಹಳಷ್ಟು ಮಾಡುತ್ತೇನೆ ಮತ್ತು ಯಾವುದಕ್ಕೂ ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಇರಾನ್ ಮತ್ತು ಇಸ್ರೇಲ್ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ನಾನು ಭಾರತ ಮತ್ತು ಪಾಕಿಸ್ತಾನದೊಂದಿಗೆ ಮಾಡಿದಂತೆ, ಇಸ್ರೇಲ್ ಮತ್ತು ಇರಾನ್ ಕೂಡ ಆ ಸಂದರ್ಭದಲ್ಲಿ ತರ್ಕ, ಸುಸಂಬದ್ಧತೆ ಮತ್ತು ವಿವೇಕವನ್ನು ಬಳಸಬೇಕು ಎಂದರು.
ನನ್ನ ಮೊದಲ ಅವಧಿಯಲ್ಲಿ, ಸೆರ್ಬಿಯಾ ಮತ್ತು ಕೊಸೊವೊ ದಶಕಗಳ ನಡುವೆ ಬಹಳ ವರ್ಷಗಳಿಂದ ಸಂಘರ್ಷ ನಡೆಯುತ್ತಿತ್ತು. ಈ ದೀರ್ಘಕಾಲದ ಸಂಘರ್ಷವು ಯುದ್ಧವಾಗಿ ಬದಲಾಗಲು ಸಿದ್ಧವಾಗಿತ್ತು. ನಾನು ಅದನ್ನು ನಿಲ್ಲಿಸಿದೆ. ಮತ್ತೊಂದು ಪ್ರಕರಣವೆಂದರೆ ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆ ಭವ್ಯವಾದ ನೈಲ್ ನದಿಯ ಮೇಲೆ ಬೃಹತ್ ಅಣೆಕಟ್ಟು ಕಟ್ಟುವ ಕುರಿತಂತೆ ಸಂಘರ್ಷ ಶುರುವಾಯಿತು. ನನ್ನ ಹಸ್ತಕ್ಷೇಪದಿಂದಾಗಿ ಇಂದು ಶಾಂತಿ ನೆಲೆಸಿದೆ. ಅದು ಹಾಗೆಯೇ ಉಳಿಯುತ್ತದೆ! ಅದೇ ರೀತಿ, ಇಸ್ರೇಲ್ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಅವರು ಹೇಳಿದರು. ಈ ಸಮಯದಲ್ಲಿ ಅನೇಕ ಕರೆಗಳು ಮತ್ತು ಸಭೆಗಳು ನಡೆಯುತ್ತಿವೆ ಎಂದು ಟ್ವೀಟಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ
ನಕಲಿ ವೆಬ್ಸೈಟ್ಗಳ ವಿರುದ್ಧ ಜಾಗ್ರತೆ- ಸೌದಿ ವಾಣಿಜ್ಯ ಸಚಿವಾಲಯ ಎಚ್ಚರಿಕೆ
ಹಾರ್ಮುಜ್ ಜಲಸಂಧಿ ಸಂಘರ್ಷ: ಇರಾನ್ ಮೇಲೆ ಮತ್ತೆ ಅಮೆರಿಕ ಸೇನೆ ದಾಳಿ
ಇಸ್ರೇಲ್ ಸೈನ್ಯ ಗಾಜಾದಲ್ಲಿ ನಡೆಸಿದ ನರಮೇಧ : ಎರಡು ವರ್ಷಗಳಲ್ಲಿ 20,000 ಮಕ್ಕಳ ಹತ್ಯೆ- ವಿಶ್ವಸಂಸ್ಥೆ ವರದಿ
ಮಕ್ಕಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಧೂಳಿನ ಬಿರುಗಾಳಿ ಮುಂದುವರಿಕೆ- ಹಲವು ಭಾಗಗಳಲ್ಲಿ ಮಳೆ
ಶಾಂತಿ ಮರೀಚಿಕೆ…?: ಲೆಬನಾನ್ನಲ್ಲಿ ದಾಳಿ ತೀವ್ರಗೊಳಿಸಿದ ಇಸ್ರೇಲ್- ಮತ್ತೆ ಹಾರ್ಮುಝ್ ಬಂದ್!
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ