janadhvani

Kannada Online News Paper

ಶಹೀದ್ ಅಬ್ದುಲ್ ರಹೀಮ್ ಮನೆಗೆ ಭೇಟಿ ನೀಡಿ ಸಾಂತ್ವನ ಮತ್ತು ಭರವಸೆ ನೀಡಿದ ಜಿ ಏ ಬಾವಾ

ದುಷ್ಕರ್ಮಿಗಳ ತಲವಾರು ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಫಿಯನ್ನೂ ಸಂದರ್ಶಿಸಿ, ಸಾಂತ್ವನ ಪಡಿಸಿದರು

ಬಂಟ್ವಾಳ: ಅಮಾಯಕ ಯುವಕನ ಕೊಲೆಯನ್ನು ಖಂಡಿಸಿ ಈಗಾಗಲೇ ರಾಜ್ಯದ ಗೃಹಮಂತ್ರಿಯೊಂದಿಗೆ ಮಾತನಾಡಿ ಬೆಂಗಳೂರಿನಿಂದ ಆಗಮಿಸಿದ ಜಿ ಏ ಬಾವಾ ಅವರು ಹತ್ಯೆಯಾದ ಶಹೀದ್ ಅಬ್ದುಲ್ ರಹೀಂ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ದುಷ್ಕರ್ಮಿಗಳಿಗೆ ಕಠಿಣ ಕಾನೂನಿನಡಿಯಲ್ಲಿ ಶಿಕ್ಷೆ ವಿಧಿಸುವ ಬಗ್ಗೆ ಭರವಸೆ ನೀಡಿದರು.

ದುಷ್ಕರ್ಮಿಗಳ ತಲವಾರು ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಫಿಯನ್ನೂ ಸಂದರ್ಶಿಸಿ, ಸಾಂತ್ವನ ಪಡಿಸಿದರು. ಇದೇ ವೇಳೆ, ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಎಲ್ಲಾ ಅರೋಪಿಗಳು ಮತ್ತು ಇದಕ್ಕೆ ಕುಮ್ಮಕ್ಕು ನೀಡೀದವರನ್ನು ಪತ್ತೆ ಹಚ್ಚುವಂತೆ ತಿಳಿಸಿದ್ದಾರೆ.
ಇನ್ನು ಮುಂದಕ್ಕೆ ಈ ರೀತಿಯ ಘಟನೆ ಮರುಕಳಿಸದಂತೆ ಕಾನೂನು ಶಕ್ತಿಗೊಳಿಸಲು ಗೃಹಮಂತ್ರಿಯೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಜಲೀಲ್ ಸುರತ್ಕಲ್ ಜೊತೆಗಿದ್ದರು.