janadhvani

Kannada Online News Paper

ಕೊಳತ್ತಮಜಲ್ ಅಬ್ದುಲ್ ರಹ್ಮಾನ್ ಹತ್ಯೆ- ಐವತ್ತು ಲಕ್ಷ ಪರಿಹಾರ ನೀಡಲು ಉಲಮಾ ಕೋ ಆರ್ಡಿನೇಷನ್ ಒತ್ತಾಯ

ಉಗ್ರಗಾಮಿ ಕೋಮುವಾದಿಗಳಿಗೆ ಸರಕಾರ ಪೊಲೀಸರ ಮೂಲಕ ರಕ್ಷಣೆ ನೀಡುತ್ತಿದ್ದು, ಇದರಿಂದಾಗಿ ಹಂತಕರು, ರೌಡಿಗಳು ನಿರ್ಭೀತವಾಗಿದ್ದಾರೆ.

ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಅಬ್ದುಲ್ ರಹ್ಮಾನ್ ಎಂಬ ಅಮಾಯಕ ಯುವಕನನ್ನು ಅಮಾನವೀಯವಾಗಿ ಕೊಂದು ಹಾಕಿದ ಕೋಮುವಾದಿಗಳ ರಕ್ಕಸ ಕೃತ್ಯವನ್ನು ಉಲಮಾ ಕೋರ್ಡಿನೇಶನ್ ಕರ್ನಾಟಕ ತೀವ್ರವಾಗಿ ಖಂಡಿಸಿದ್ದು ಮೃತರ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಹಾಗೂ ಗಾಯಾಳು ಖಲಂದರ್ ಶಾಫಿ ಅವರಿಗೆ ಉಚಿತ ಚಿಕಿತ್ಸೆ ಹಾಗೂ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಕರ್ನಾಟಕ ಉಲಮಾ ಕೋಆರ್ಡಿನೇಷನ್ ಕಮಿಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಕೋಮುವಾದಿ ಹಂತಕ ಪರಿವಾರವು ನಡೆಸುತ್ತಿರುವ ಅಮಾಯಕರ ಹತ್ಯಾಸರಣಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮುಂದುಯುತ್ತಿದೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ, ಕೊಲೆಗೆ ಪ್ರಚೋದಿಸುವ ಭಾಷಣಗಳು ಎಗ್ಗಿಲ್ಲದೆ ಮುಂದುವರೆಯುತ್ತಿದ್ದು, ಇದಕ್ಕೆ ಅಂಕುಶ ಹಾಕಬೇಕಾದ ಸರ್ಕಾರವು ಕಣ್ಣು ಮುಚ್ಚಿ ಕುಳಿತು ಬಾಹ್ಯ ಬೆಂಬಲ ನೀಡುತ್ತಿದೆ. ಉಗ್ರಗಾಮಿ ಕೋಮುವಾದಿಗಳಿಗೆ ಸರಕಾರ ಪೊಲೀಸರ ಮೂಲಕ ರಕ್ಷಣೆ ನೀಡುತ್ತಿದ್ದು, ಇದರಿಂದಾಗಿ ಹಂತಕರು, ರೌಡಿಗಳು ನಿರ್ಭೀತವಾಗಿದ್ದಾರೆ. ಆದ್ದರಿಂದ ಕೊಲೆ ಪ್ರಕರಣಗಳು ನಿರಂತರ ಮುಂದುವರೆಯುತ್ತಿದ್ದು, ಇದಕ್ಕೆ ಸರ್ಕಾರವೇ ಹೊಣೆಯಾಗಿದೆ.

ದ.ಕ.ಜಿಲ್ಲೆಯಲ್ಲಿ ಕಾನೂನ್ ರಕ್ಷಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ‘ಆಂಟಿ ಕಮ್ಯುನಲ್ ಫೋರ್ಸ್’ ಕೇವಲ ಗೃಹ ಸಚಿವರ ಕಾಟಾಚಾರದ ಘೋಷಣೆಗೆ ಸೀಮಿತವಾಗಿದ್ದು, ಸರಕಾರವು ಮುಸ್ಲಿಮರ ಬದುಕಿನೊಂದಿಗೆ ಆಟ ಆಡುತ್ತಿದೆ. ಎಂದು ಉಲಮಾ ಸಮನ್ವಯ ಸಮಿತಿ ದೂರಿದೆ. ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಗಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ವೆರ್ಚುಯಲ್ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಉಸ್ಮಾನುಲ್ ಫೈಝಿ ತೋಡಾರ್, ಕಾರ್ಯದರ್ಶಿಗಳಾದ ಡಾ ಝೖನೀ ಕಾಮಿಲ್, ಅಬ್ದುಲ್ ಅಝೀಝ್ ದಾರಿಮಿ, ಕೋಶಾಧಿಕಾರಿ ಶಾಫಿ ಸಅದಿ ಬೆಂಗಳೂರು, ಸದಸ್ಯರಾದ ಉಮರ್ ದಾರಿಮಿ ಸಾಲ್ಮರ, ಸಿದ್ದೀಕ್ ದಾರಿಮಿ ಕಡಬ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಹಮೀದ್ ದಾರಿಮಿ ಸಂಪ್ಯ, ಕೆ ಎಲ್ ದಾರಿಮಿ ಪಟ್ಟೋರಿ, ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಪಿ ಪಿ ಅಹ್ಮದ್ ಸಖಾಫಿ ಕಾಶೀಪಟ್ನ, ಸಿದ್ದೀಖ್ ಕೆ. ಎಂ. ಮೊಂಟುಗೋಳಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬ್ದುಲ್ ರಹ್ಮಾನ್ ರಝ್ವಿ ಉಡುಪಿ, ಮಲ್ಲೂರು ಅಶ್ರಫ್ ಸಅದಿ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಮುಂತಾದವರು ಪಾಲ್ಗೊಂಡರು