ಅಲ್ ಮದೀನತುಲ್ ಮುನವ್ವರ, ಮೂಡಡ್ಕ, ಮಸ್ನಾ ಇದರ 7ನೇ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಾಖ್ ಉಜಿರೆ ಇವರ ಘನ ಅಧ್ಯಕ್ಷತೆಯಲ್ಲಿ ತಾರೀಖು 11-05-2018ರ ಶುಕ್ರವಾರ ಜುಮಾ ನಮಾಝಿನ ಬಳಿಕ ಶಿಫಾದಲ್ಲಿರುವ ಅಲೀಫ್ ಇಂಟರ್-ನೇಷನಲ್ ಸ್ಕೂಲಿನಲ್ಲಿ ಜರಗಿತು.
ಸಭೆಯು ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಜನರಲ್ ಮ್ಯಾನೇಜರ್ ಜನಾಬ್ ಅಶ್ರಫ್ ಸಖಾಫಿ ಮಾಡಾವು ಇವರ ದುಆದೊಂದಿಗೆ ಶುಭಾರಂಭಗೊಂಡಿತು.ಅಲ್ ಮುರೂಜ್ ಘಟಕದ ಪ್ರಧಾನ ಕಾರ್ಯದರ್ಶಿ ಜನಾಬ್ ದಾವೂದ್ ಸಅದಿ ಖಿರಾಆತ್ ಪಠಿಸಿದರು.ದಾರುಲ್ ಇರ್ಷಾದ್ ಇದರ ರಿಸೀವರರಾದ ಉಸ್ತಾದ್ ರಶೀದ್ ಮದನಿಯವರು ಸ್ವಾಗತಿಸಿದರು.
ಕೆ.ಸಿ.ಎಫ್. ರಿಯಾಧ್ ಝೋನಲ್ ಅಧ್ಯಕ್ಷರಾದ ಜನಾಬ್ ಹನೀಫ್ ಬೆಳ್ಳಾರೆ ಪವಿತ್ರ ಖುರ್’ಆನಿನ ಸೂಕ್ತವನ್ನು ಪಠಿಸಿ ಸಭೆಯನ್ನು ಉದ್ಘಾಟಿಸಿದರು.
ಬತ್ತಾ ಘಟಕದ ಪ್ರಧಾನ ಕಾರ್ಯದರ್ಶಿ ಜನಾಬ್ ಹಬೀಬ್ ಟಿ.ಹೆಚ್ 2017-2018ರ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸವಿಸ್ತಾರವಾಗಿ ಸಭೆಯಲ್ಲಿ ಮಂಡಿಸಿ ಸಭೆಯ ಅಂಗೀಕಾರವನ್ನು ಪಡೆದುಕೊಂಡರು.
2018-2019ರ ಸಾಲಿಗೆ ಈ ಕೆಳಗಿನಂತೆ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರು:ಅಬ್ದುಲ್ ರಝಾಖ್ ಉಜಿರೆ,ಅಧ್ಯಕ್ಷರು:ದಾವೂದ್ ಕಜಮಾರ್,ಉಪಾಧ್ಯಕ್ಷರುಗಳು:1. ಯೂಸುಫ್ ಕಳಂಜಿಬೈಲ 2. ಹೈದರ್ ಸರಳೀಕಟ್ಟೆ
ಪ್ರಧಾನ ಕಾರ್ಯದರ್ಶಿ:ಶರೀಫ್ ಗುಂಪಕಲ್ಲು, ಜೊತೆ ಕಾರ್ಯದರ್ಶಿಗಳು:1. ಉವೈಸ್ ಜೋಗಿಬೆಟ್ಟು 2. ಹಕೀಂ ಪಾತೂರು.ಕೋಶಾಧಿಕಾರಿ: ಖಾಸಿಂ ಕನರಾಜೆ
ಸದಸ್ಯರು: ಅಬ್ಬಾಸ್ ಮಾಣಿ, ಇಬ್ರಾಹಿಂ ಮಾಣಿ, ಇಬ್ರಾಹಿಂ ಮುರ, ಅಬ್ದುಲ್ ಕಾದರ್ ಮಠ, ಶೇಕಬ್ಬ ಜೋಗಿಬೆಟ್ಚು, ಉಸ್ಮಾನ್ ಮುರ, ಕರೀಂ ಕೊಡ್ಲುಪೇಟೆ, ದಾವೂದ್ ಮಡಿಕೇರಿ, ಇಬ್ರಾಹಿಂ ಬೇಂಗಿಲ
ಮುಖ್ಯ ಅತಿಥಿಗಳಾಗಿ ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಜನರಲ್ ಮ್ಯಾನೇಜರ್ ಉಸ್ತಾದ್ ಅಶ್ರಫ್ ಸಖಾಫಿ ಮಾಡಾವು ಹಾಗೂ ಖಮರುಲ್ ಉಲಮಾ ಎ.ಪಿ. ಉಸ್ತಾದರ ಸುಪುತ್ರ ಉಸ್ತಾದ್ ಅಬ್ದುಲ್ ಹಕೀಂ ಅಝ್ಹರಿ ಸಭೆಯಲ್ಲಿ ಹಾಜರಿದ್ದರು.
ನೂತನ ಪ್ರಧಾನ ಕಾರ್ಯದರ್ಶಿ ಜನಾಬ್ ಶರೀಫ್ ಗುಂಪಕಲ್ಲು ಸಭಿಕರಿಗೆ ಧನ್ಯವಾದಗೈದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ