ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಅಲ್ ಖೋಬರ್ ಘಟಕದಲ್ಲಿ 30 ನೇ ಗ್ರಾಂಡ್ ಇಫ್ತಾರ್ ಕೂಟ 15, ಮಾರ್ಚ್ 2025 ಶನಿವಾರ ಅಲ್ ಖೋಬರ್ ನಲ್ಲಿ ಬಹಳ ಯಶಸ್ವಿಯಾಗಿ ನೆರವೇರಿತು.
ಡಿಕೆಯಸ್ಸಿ ಅಲ್ ಖೋಬರ್ ಘಟಕದ ನೂತನ ಅಧ್ಯಕ್ಷರಾದ ಇರ್ಶಾದ್ ಅಬ್ದುರ್ರಹ್ಮಾನ್ ಪುತ್ತೂರುರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಉಸ್ತಾದ್ ಯೂಸುಫ್ ಸಅದಿ ಅಯ್ಯಂಗೇರಿ ರವರು ಸಮಾರಂಭಕ್ಕೆ ದುಆ ಮೂಲಕ ಚಾಲನೆ ನೀಡಿ ಬದ್ರ್ ಸಂದೇಶ ನೀಡಿದರು.

ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳರವರು ಡಿಕೆಯಸ್ಸಿ ವಿಷನ್ 30 ಯ ಸಾರ್ಥಕ ಸಾಧನೆ ಮತ್ತು ಮುಂದಿನ ಅಭಿವೃಧ್ಧಿಗೋಸ್ಕರ ನಮ್ಮ ಮುಂದಿರುವ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಈ ಶುಭ ಸಮಾರಂಭದಲ್ಲಿ ಡಿಕೆಯಸ್ಸಿ ವಿಷನ್ 30 ಯ ಬ್ರೋಶರನ್ನು ಬಿಡುಗಡೆ ಗೊಳಿಸಲಾಯಿತು.
ಡಿಕೆಯಸ್ಸಿ ಅಲ್ ಖೋಬರ್ ಘಟಕದ ಡೆವಲಪ್ಮೆಂಟ್ ಚೆಯರ್ಮ್ಯಾನ್ ಮುಹಮ್ಮದ್ ಶರೀಫ್ ಬಜ್ಪೆ, ದಮ್ಮಾಂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ, ಅಲ್ ಖೋಬರ್ ಮಾಜಿ ಅಧ್ಯಕ್ಷ ಅಶ್ರಫ್ ಚಿಕ್ಕಮಗಳೂರು, ಸದಸ್ಯ ಅಬ್ದುರ್ರಶೀದ್ ಬೆಳಾರೆ ಕಾರ್ಯಕ್ರಮದ ಮುಖ್ಯ ಪಾತ್ರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದಮ್ಮಾಂ ಘಟಕದ ಡೆವಲಪ್ಮೆಂಟ್ ಚೆಯರ್ಮ್ಯಾನ್ ಸಯ್ಯಿದ್ ಬಾವ ಬಜ್ಪೆ, ಹಣಕಾಸು ಕಾರ್ಯದರ್ಶಿ ಅಬೂಬಕ್ಕರ್ ಅಜಿಲಮೊಗರು, ಸದಸ್ಯ ಉಮರಬ್ಬ ಮರವೂರು, ತುಖ್ಬ ಘಟಕದ ಅಧ್ಯಕ್ಷ ಮುಹಮ್ಮದ್ ಹಂಡೇಲು, ಪ್ರಧಾನ ಕಾರ್ಯದರ್ಶಿ ಸಲೀಂ ಉಪ್ಪಿನಂಗಡಿ, ಹಣಕಾಸು ಕಾರ್ಯದರ್ಶಿ ಮುಹಮ್ಮದ್ ಹನೀಫ್ ಜೆಪ್ಪು,ಜುಬೈಲ್ ನಿಂದ ಮುಸ್ಥಫಾ ಮೈನಾ, ಸ್ಥಾಪಕ ಸದಸ್ಯರಾದ ಎನ್. ಎಸ್. ಅಬ್ದುಲ್ಲ ಮಂಜನಾಡಿ, ಅಶ್ರಫ್ ಮೈನಾ ಮಕ್ಕಾ ವಲಯ ಆಗಮಿಸಿದ್ದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸಲಹೆಗಾರ ಉಸ್ಮಾನ್ ಹೊಸಂಗಡಿ, ಅಶ್ರಫ್ ನಾವುಂದ, ಮುಹಮ್ಮದ್ ಮಲೆಬೆಟ್ಟು, ಸದಸ್ಯರಾದ ಅಬ್ದುಲ್ ಹಮೀದ್ ಸುಳ್ಯ, ಅಬ್ದುಲ್ ಜಬ್ಬಾರ್ ಪುತ್ತೂರು, ಸಹಕರಿಸಿದ ಹನೀಫ್ ಬಜ್ಪೆ, ಶಮ್ಮಿ ಕಣ್ಣಂಗಾರ್, ಮುಹಮ್ಮದ್ ಹನೀಫ್ ದೇರಳಕಟ್ಟೆ ರವರಿಗೆ
ಕೃತಜ್ಞತೆಗಳನ್ನು ಅರ್ಪಿಸಲಾಯಿತು.ಸಮಾರಂಭದ ಕೊನೆಯಲ್ಲಿ ಡಿಕೆಯಸ್ಸಿ ಅಲ್ ಖೋಬರ್ ಘಟಕ ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು ಧನ್ಯವಾದಗೈದರು.
ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ