ದರ್ಸ್ ರಂಗದಲ್ಲಿ ನಾಲ್ಕು ದಶಕ ಪೂರೈಸಿದ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರಿಗೆ ಶಿಷ್ಯಂದಿರು ನೀಡುವ ‘ಅತ್ತಕ್‌ರೀಮ್’ ಗೌರವಾರ್ಪಣೆಯ ಪ್ರಚಾರಾರ್ಥ ಮದನೀಯಂ ಅಬ್ದುಲ್ಲತೀಫ್ ಸಖಾಫಿ ಮುನ್ನಡೆಸುವ ‘ಸಫರೇ ತಕ್‌ರೀಮ್’ ಗೆ ಕಾಜೂರು ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು.
ಕಾಜೂರು ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಝಿಯಾರತ್ ನೇತೃತ್ವ ನೀಡಿದರು. ನಂತರ ಮಾತನಾಡಿದ ಅಬ್ದುಲ್ಲತೀಫ್ ಸಖಾಫಿ, ಹಸನುಲ್ ಅಹ್ದಲ್ ತಂಙಳರವರು ಸೇವಾ ಬದುಕಿಗೆ ಕಾಲಿಟ್ಟದ್ದು ಈ ಕಾಜೂರಿನಿಂದಲೇ. ಆ ಕಾರಣದಿಂದಲೇ ಈ ಯಾತ್ರೆಗೆ ಕಾಜೂರನ್ನೇ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ರಹ್ಮಾನಿಯಾ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಅಧ್ಯಕ್ಷರಾದ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಜೆ.ಎಚ್, ಕೋಶಾಧಿಕಾರಿ ಕಮಾಲ್ ರವರ ನೇತೃತ್ವದಲ್ಲಿ ಅಬ್ದುಲ್ಲತೀಫ್ ಸಖಾಫಿಯನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಜೂರು ಆಡಳಿತ ಸಮಿತಿ ಮಾಜಿ ಕೋಶಾಧಿಕಾರಿ ಅಬ್ಬಾಸ್ ಜೆ.ಎಚ್, ಆಡಳಿತ ಮಂಡಳಿ ಸದಸ್ಯರಾದ ಸಿದ್ದೀಕ್ ಕೆ.ಎಚ್, ಎಸ್‌ವೈಎಸ್ ಕಾಜೂರು ಯುನಿಟ್ ಅಧ್ಯಕ್ಷ ಹೈದರಲಿ ಕಾಜೂರು, ಎಸ್ಸೆಸ್ಸೆಎಫ್ ಕಾಜೂರು ಸೆಕ್ಟರ್ ಅಧ್ಯಕ್ಷ ನಿಝಾಮುದ್ದೀನ್ ಜೆ.ಎಚ್, ಎಸ್ಸೆಸ್ಸೆಎಫ್ ಕಾಜೂರು ಯೂನಿಟ್ ಅಧ್ಯಕ್ಷ ಜಬ್ಬಾರ್ ಕಾಜೂರು ಮುಂತಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ