ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತರ್ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 20-12-24 ರಂದು ಏಷ್ಯನ್ ಟೌನ್ ಮೆಸ್ ಕೆಫೆ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು. ಕೆಸಿಎಫ್ ಖತರ್ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಪಾತೂರುರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯು ಯೂಸುಫ್ ಸಖಾಫಿ ಅಯ್ಯಂಗೇರಿಯವರ ದುಆದೊಂದಿಗೆ ಆರಂಭಗೊಂಡಿತು. ವಾರ್ಷಿಕ ಕೌನ್ಸಿಲ್ ಮೇಲ್ವಿಚಾರಕರಾಗಿ ಆಗಮಿಸಿದ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಫೈನಾನ್ಸ್ ಸೆಕ್ರೆಟರಿ ಅಲೀ ಮುಸ್ಲಿಯಾರ್ ಬಹರೈನ್ ರವರು ಸಭೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಕೆಸಿಎಫ್ ಖತರ್ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸಂಘಟನೆಯು ಕಳೆದ ಒಂದು ವರ್ಷ ನಡೆಸಿದ ಕಾರ್ಯಚಟುವಟಿಕೆಗಳ ವಾರ್ಷಿಕ ವರದಿ ವಾಚಿಸಿದರು. ನಂತರ ಪ್ರತೀ ವಿಭಾಗಗಳ ವಾರ್ಷಿಕ ವರದಿಯನ್ನು ಆಯಾ ವಿಭಾಗದ ಕಾರ್ಯದರ್ಶಿಗಳು ಮಂಡಿಸಿದರು. ಸಂಘಟನಾ ವಿಭಾಗ ರಿಶಾದ್ ಮಧುವನ, ಶಿಕ್ಷಣ ವಿಭಾಗ ಸಿದ್ದೀಕ್ ಹಂಡುಗುಳಿ, ಇಹ್ಸಾನ್ ವಿಭಾಗ ಫಾರೂಖ್ ಜೆಪ್ಪು, ಆಡಳಿತ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗ ಸತ್ತಾರ್ ಅಶ್ರಫಿ ಮಠ, ಸಾಂತ್ವನ ಮತ್ತು ಪ್ರಕಾಶನ ವಿಭಾಗ ಹಕೀಮ್ ಪಾತೂರುರವರು ಮಂಡಿಸಿದರು. ಕೋಶಾಧಿಕಾರಿ ಮುನೀರ್ ಹಾಜಿ ಮಾಗುಂಡಿಯವರು ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಮಂಜೂರು ಮಾಡಿ ಪ್ರಸ್ತುತ ಸಮಿತಿಯನ್ನು ಬರ್ಕಾಸ್ತು ಗೊಳಿಸಲಾಯಿತು.
ನಂತರ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯಿಂದ ಮೇಲ್ವಿಚಾರಕ(ಆರ್.ಒ)ರಾಗಿ ಬಂದ ಅಂತಾರಾಷ್ಟ್ರೀಯ ಸಮಿತಿ ಫೈನಾನ್ಸ್ ಸೆಕ್ರೆಟರಿ ಬಹು ಅಲೀ ಮುಸ್ಲಿಯಾರ್ ಬಹರೈನ್ ಹಾಗೂ ಕೆಸಿಎಫ್ ಐಸಿ ಸಂಘಟನಾ ಕಾರ್ಯದರ್ಶಿ ಹಾಫಿಳ್ ಫಾರೂಖ್ ಸಖಾಫಿ ಎಮ್ಮೆಮಾಡುರವರು ನೂತನ ಸಮಿತಿಯನ್ನು ರಚಿಸಿ ಘೋಷಿಸಿದರು.
ಕೆಸಿಎಫ್ ಖತರ್ ನೂತನ ಸಮಿತಿಯ ಅಧ್ಯಕ್ಷರಾಗಿ ಮುನೀರ್ ಹಾಜಿ ಮಾಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಉಮರ್ ಫಾರೂಖ್ ಕೃಷ್ಣಾಪುರ, ಕೋಶಾಧಿಕಾರಿಯಾಗಿ ಮಿರ್ಶಾದ್ ಹಾಜಿ ಕನ್ಯಾನ, ಸಂಘಟನಾ ಅಧ್ಯಕ್ಷರಾಗಿ ಅಬ್ದುಸ್ಸತ್ತಾರ್ ಅಶ್ರಫಿ ಮಠ, ಸಂಘಟನಾ ಕಾರ್ಯದರ್ಶಿಯಾಗಿ ಉಮರ್ ಫಾರೂಖ್ ಜೆಪ್ಪು, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಸದಖತುಲ್ಲಾ ಕೂಳೂರು, ಕಾರ್ಯದರ್ಶಿಯಾಗಿ ರಿಶಾದ್ ಮಧುವನ, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ನೌಫಲ್ ನೇರಳಕಟ್ಟೆ, ಕಾರ್ಯದರ್ಶಿಯಾಗಿ ಆಶಿಖ್ ಬೈರಿಕಟ್ಟೆ, ಪ್ರೊಫೆಷನಲ್ ವಿಭಾಗದ ಅಧ್ಯಕ್ಷರಾಗಿ ಹನೀಫ್ ಪಾತೂರು, ಕಾರ್ಯದರ್ಶಿಯಾಗಿ ಸಮ್ಜಾದ್ ಝಕರಿಯಾ ಮಜೀರ್ಪಳ್ಳ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಲೀ ಕೊಡಗು, ಸಾಂತ್ವನ ಕಾರ್ಯದರ್ಶಿಯಾಗಿ ಇಮ್ರಾನ್ ಕೂಳೂರು, ಆಡಳಿತ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ಅಧ್ಯಕ್ಷರಾಗಿ ಸಿದ್ದೀಖ್ ಹಂಡುಗುಳಿ, ಕಾರ್ಯದರ್ಶಿಯಾಗಿ ಹಕೀಮ್ ಪಾತೂರು, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಬಶೀರ್ ಉಪ್ಪಳ್ಳಿ, ಕಾರ್ಯದರ್ಶಿಯಾಗಿ ಹಸೈನಾರ್ ಕಾಟಿಪಳ್ಳ, ಅಂತಾರಾಷ್ಟೀಯ ಸಮಿತಿ ಕೌನ್ಸಿಲರ್ ಹಾಫಿಳ್ ಫಾರೂಖ್ ಸಖಾಫಿ ಎಮ್ಮೆಮಾಡು, ಯೂಸುಫ್ ಸಖಾಫಿ ಅಯ್ಯಂಗೇರಿ, ಮುಹಮ್ಮದ್ ಕಬೀರ್ ಹಾಜಿ ಪನೀರ್ ಹಾಗೂ ಹನೀಫ್ ಪಾತೂರುರವರನ್ನು ಆರಿಸಲಾಯಿತು.
ನಂತರ ನಡೆದ ಸಭೆಯಲ್ಲಿ ವಹ್ಹಾಬ್ ಸಖಾಫಿ ಮಂಬಾಡ್ ರವರು ಸಂಘಟನೆಯ ಪ್ರಾಮುಖ್ಯತೆಯ ಬಗ್ಗೆ ಕಾರ್ಯಕರ್ತರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಇಂಡಿಯನ್ ಕಲ್ಚರಲ್ ಫೌಂಡೇಶನ್(ಐಸಿಎಫ್) ಕಾರ್ಯದರ್ಶಿ ಸಿರಾಜ್ ಚೆವ್ವ ಹಾಗೂ ರಿಸಾಲ ಸ್ಟಡೀ ಸರ್ಕಿಲ್(ಆರ್ ಎಸ್ ಸಿ) ಕಾರ್ಯದರ್ಶಿ ಹಾರಿಸ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನಂತರ ಕೌನ್ಸಿಲ್ ಮೇಲ್ವಿಚಾರಕ(ಆರ್.ಒ)ರಾಗಿ ಬಂದ ಅಂತಾರಾಷ್ಟ್ರೀಯ ಸಮಿತಿ ಫೈನಾನ್ಸ್ ಸೆಕ್ರೆಟರಿ ಬಹು ಅಲೀ ಮುಸ್ಲಿಯಾರ್ ಬಹರೈನ್ ರವರಿಗೆ ಕೆಸಿಎಫ್ ಖತರ್ ವತಿಯಿಂದ ಸ್ಮರಣಿಕೆ ನೀಡಲಾಯಿತು. ಕೆಸಿಎಫ್ ಡೆಸೆನೀಯಂ ಮಹಾ ಸಮ್ಮೇಳನದ ಪ್ರಚಾರಾರ್ಥ ನಡೆದ ಚಾಲೆಂಜ್’24 ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯಾಚರಣೆ ನಡೆಸಿದ ಸೆಕ್ಟರ್ ಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ಕೆಸಿಎಫ್ ಖತರ್ ವತಿಯಿಂದ ಮುದ್ರಿಸಿದ 2025 ನೇ ಸಾಲಿನ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.
ಕೆಸಿಎಫ್ ಖತರ್ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸ್ವಾಗತಿಸಿ, ನೂತನ ಸಂಘಟನಾ ಕಾರ್ಯದರ್ಶಿ ಫಾರೂಖ್ ಜೆಪ್ಪು ವಂದಿಸಿದರು.