ಮಂಗಳೂರು: ಎಸ್.ವೈಎಸ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು,ದ.ಕ ವೆಸ್ಟ್ ,ದ.ಕ ಈಸ್ಟ್,ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸೆಕಂಡರಿ ಟ್ರೈನಿಂಗ್ (ಎಸ್.ಟಿ.ಸಿ) ಕ್ಯಾಂಪ್ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗುರವರ ಅಧ್ಯಕ್ಷತೆಯಲ್ಲಿ ಮಿಸ್ಬಾಹುಲ್ ಹುದಾ ಕಾಲೇಜು ಕ್ಯಾಂಪಸ್ ಕಾಟಿಪಳ್ಳದಲ್ಲಿ ನಡೆಯಿತು.
ಎಸ್.ವೈ.ಎಸ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಸಯ್ಯಿದ್ ಅಬೂಬಕ್ಕರ್ ಸಿದ್ಧೀಖ್ ತಂಙಳ್ ಮುರ ದುಆ: ಗೈದರು. ಸುನ್ನೀ ಜಂಇಯ್ಯತುಲ್ ಮುಅಲ್ಲಿಂಮೀನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಕೆಯಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೇರಳ ಮುಸ್ಲಿಂ ಜಮಾಅತ್ ನಾಯಕರಾದ ಅಬ್ದುರ್ರಹ್ಮಾನ್ ದಾರಿಮಿ ಕೂಟಂಬಾರ ಉಸ್ತಾದರು ನಾಯಕರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದರು. ಎಸ್.ವೈ.ಎಸ್ ರಾಜ್ಯ ದ ಅವಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ,ಎಸ್.ವೈ.ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ,ರಾಜ್ಯ ಕೋಶಾಧಿಕಾರಿ ಹಂಝತ್ ಉಡುಪಿ ಮಾತನಾಡಿದರು.
ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದಿಖ್ ಮಾಸ್ಟರ್ ಮಲೆಬೆಟ್ಟು ಜನವರಿ 1ರಿಂದ 20 ರ ತನಕ ರಾಜ್ಯ ವ್ಯಾಪಿ ನಡೆಯಲಿರುವ ಸದಸ್ಯತ್ವ ಅಭಿಯಾನ ಹಾಗೂ ವಿವಿಧ ಘಟಕಗಳ ಪುನರ್ರಚನೆಯ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಾಯಕರಾದ ಅಶ್ರಫ್ ಸ ಅದಿ ಮಲ್ಲೂರು,ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿಗಳಾದ ಸಯ್ಯಿದ್ ಮಹಮ್ಮದ್ ಶಾಫಿ ನಈಮಿ ತಂಙಳ್ ಮಾರ್ನಹಳ್ಳಿ ತಂಙಳ್,ಇಬ್ರಾಹಿಂ ಖಲೀಲ್ ಮಾಲಿಕಿ,ರಾಜ್ಯ ಕ್ಯಾಬಿನೆಟ್ ನಾಯಕರಾದ ಮಹಮ್ಮದಲಿ ಸಖಾಫಿ ಅಶ್ಅರಿಯ್ಯಾ ರಾಜ್ಯ ನಾಯಕರಾದ ಅಶ್ರಫ್ ಸಖಾಫಿ ಮೂಡಡ್ಕ, ಹಂಝ ಮದನಿ, ಮುಸ್ತಫಾ ಕೋಡಪದವು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ರಾಜ್ಯ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಸ್ವಾಗತಿಸಿದರು.ಮನ್ಸೂರು ಅಲಿ ಶಿವಮೊಗ್ಗ ಕಾರ್ಯಕ್ರಮ ನಿರೂಪಿಸಿದರು.ಆಸಿಫ್ ಹಾಜಿ ಕೃಷ್ಣಾಪುರ ವಂದಿಸಿದರು.