

ಕುವೈತ್ ಸಿಟಿ : ಮುತ್ತು ನಬಿ (ﷺ) ಮಾನವೀಯತೆಯ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ದಿನಾಂಕ ಸೆಪ್ಟೆಂಬರ್ 06 ಶುಕ್ರವಾರ 5:30pm ಸರಿಯಾಗಿ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ ಹಾಗೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ಪ್ರಚಾರ ವಿಭಾಗದ ಅಧ್ಯಕ್ಷರಾದ ಸಾಹುಲ್ ಹಮೀದ್ ಸಹದಿ ಝುಹ್ರಿ ಹಾಗೂ ಕೆಸಿಎಫ್ ಕುವೈಟ್ ಉಲಮಾ, ಉಮರಾ ನಾಯಕರ ಉಪಸ್ಥಿತಿಯಲ್ಲಿ ಮೌಲೂದ್ ಪರಾಯಣದೊಂದಿಗೆ ಆರಂಭವಾಯಿತು.
ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧ್ಯಕ್ಷ ರಾದ ಜನಾಬ್ ಕಲಂದರ್ ಶಾಫಿ ಕಿರಾಹತ್ ಪಠಿಸಿದರು.ಕೆಸಿಎಫ್ ಕುವೈಟ್ ಉರ್ದು ವಿಂಗ್ ಕಾರ್ಯಕರ್ತ ಮುಹಮ್ಮದ್ ಸಬಾಝ್ ನಾತ್ ಹಾಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ರಾಷ್ಟ್ರೀಯ ನಾಯಕರಾದ ಬಹು ಫಾರೂಕ್ ಸಖಾಫಿ ಉದ್ಘಾಟನೆ ಗೈದರು, ಕೆಸಿಎಫ್ ಕುವೈಟ್ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ ಸ್ವಾಗತಿಸಿ ಕೆಸಿಎಫ್ ಸಂಘಟನೆಯು ಅಹ್ಲ್ ಸುನ್ನತ್ ವಲ್ ಜಮಾ ಇದರ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹು ಹುಸೈನ್ ಮುಸ್ಲಿಯಾರ್ ಏರುಮಾಡ್ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಯೋಜನೆಯನ್ನು ನಾವೆಲ್ಲರೂ ನೋಡಿದ್ದೇವೆ ಉತ್ತರ ಕನ್ನಡ ಜಿಲ್ಲೆಯ ಮುಸ್ಲಿಂ ಹಿಂದುಳಿದ ಮಕ್ಕಳ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಕ್ಕೆ ಕೆಸಿಎಫ್ ಉದಾರ ಕೊಡುಗೆ ಯನ್ನು ನೀಡುತ್ತಲೇ ಇದೆ ಎಂದರು.
ಈದ್ ಮೀಲಾದ್ ಕಾರ್ಯಕ್ರಮದ ಛೇರ್ಮನ್ ಬಹು ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿ ಈದ್ ಮೀಲಾದ್ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಮರೆವಂತಿಲ್ಲ ಅವರನ್ನು ಶುಭಹಾರೈಸಿದರು.
ಹಾಗೂ ಮುಖ್ಯ ಅತಿಥಿ, ಹಂಝ ಮುಸ್ತಫಾ CEO MMC ಹಾಗೂ TVS ಕಾರ್ಗೋ ಮಾಲಕರಾದ ಹೈದರ್ ಹಾಜಿ ಹೈದರ್ ಗ್ರೂಪ್, ಶೈಖ್ ಹಸನ್ ಬಾದಾಷ ಇವರಿಗೆ KCF ನೆನಪಿನ ಕಾಣಿಕೆ ಕೊಟ್ಟು ಸನ್ಮಾನ ಮಾಡಲಾಯಿತು.ಕೆಸಿಎಫ್ IC ನಾಯಕರಾದ ಜನಾಬ್ ಝಕರ್ರಿಯ್ಯಾ ಆನೆಕಲ್ ಅವರ ನೇತ್ರತ್ವದಲ್ಲಿ ನಡೆಸಿದ ಡಿಜಿಟಲ್ ಇ ಸುವನಿಯರ್ ಈ ಸಂಧರ್ಭದಲ್ಲಿ ಅನಾವರಣ ಗೊಳಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯದ್ ತ್ವಾಹ ತಂಞಳ್ ಅವರು ಬುರ್ದಾ ಮಜ್ಲಿಸ್ ಹಾಗೂ ನಾತ್ ಮೂಲಕ ಕೇಳುಗರ ಕಿವಿಗಳನ್ನು ಝೇಂಕಾರದ ಮೂಲಕ ಮದೀನಾಕ್ಕೆ ಕೊಂಡೊಯಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ತೈಬಾ ಗಾರ್ಡನ್ ಎಜುಕೇಸನ್ ಸೆಂಟರ್ ಬಂಗ್ಲೆಗುಡ್ಡೆ ಕಾರ್ಕಳ ಇದರ ಚೆಯರ್ಮ್ಯಾನ್ ಸೈಯದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಬಾಅಲವಿ
ಅವರ ಉಪದೇಶ ಹಾಗೂ ಭಕ್ತಿನಿರ್ಭಯ ದುವಾ ಎಲ್ಲರ ಮನಸ್ಸನ್ನು ಪುಲಕಿತಗೊಳಿಸಿತು.
ಶೈಕ್ಷಣಿಕವಾಗಿ SSLC ಹಾಗೂ ದ್ವಿತೀಯ PU ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಕೆಸಿಎಫ್ ಕುವೈಟ್ ಕಾರ್ಯಕರ್ತರ ಮಕ್ಕಳಿಗೆ ಸ್ಟೂಡೆಂಟ್ ಅವಾರ್ಡ್ ಕೊಟ್ಟು ಸನ್ಮಾನಿಸಲಾಯಿತು, ICF ಅಧ್ಯಕ್ಷರು ಅಲವಿ ತಂಜೇರಿ ಶುಭ ಹಾರೈಸಿದರು, KCF ದಪ್ಪು ತಂಡದ ಪ್ರದರ್ಶನ ಎಲ್ಲರ ಮನ ಮುಟ್ಟಿತು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರು ಉಮರ್ ಝಹ್ರಿ, ಕಾಸಿಂ ಉಸ್ತಾದ್ ಬೆಲ್ಮಾ ಯೂಸುಫ್ ಮಂಚಕಲ್ಲ್,ಇಕ್ಬಾಲ್ ಕಂದಾವರ, ಮೂಸಾ ಇಬ್ರಾಹಿಂ, ಇಬ್ರಾಹಿಂ ವೇಣೂರ್, ಅಬ್ದುಲ್ ಮಲಿಕ್,ಶೌಕತ್ ಶಿರ್ವ,ತೌಫೀಕ್ ಕಾರ್ಕಳ,ಮುಸ್ತಫಾ ಉಳ್ಳಾಲ,ಉಸ್ಮಾನ್ ಕೊಡಿ ಹಾಗೂ ರಾಷ್ಟ್ರೀಯ, ಝೋನ್, ಸೆಕ್ಟರ್ ಸಮಿತಿಯ ನಾಯಕರು ಉಪಸ್ಥಿತರಿದ್ದರು.
ಕೆಸಿಎಫ್ ಕುವೈಟ್ EYE ಟೀಮ್ ಅಚ್ಚು ಕಟ್ಟಾದ ಸ್ವಯಂಸೆವಕರೆಂದು ಎಲ್ಲಾರ ಪ್ರೀತಿಗೆ ಪಾತ್ರರಾದರು, ಕಾರ್ಯಕ್ರಮದ ನಿರೂಪಣೆಯನ್ನು ಜಹರ ಸೆಕ್ಟರ್ ಅಧ್ಯಕ್ಷರು ಶಫೀಕ್ ಅಹ್ಸನಿ ನಿರೂಪಿಸಿ ದರು.ಕೆಸಿಎಫ್ ಕುವೈಟ್ ರಾಷ್ಟ್ರೀಯ ಆಡಳಿತ ಅಧ್ಯಕ್ಷರಾದ ಅಬ್ಬಾಸ್ ಬಳಂಜ ಧನ್ಯವಾದಗೈದರು. ಕೊನೆಯಲ್ಲಿ ಆಗಮಿಸಿದ ಎಲ್ಲರಿಗೂ ತಬರುಕ್ ನೀಡಲಾಯಿತು.
ವರದಿ : ಪ್ರಕಾಶನ ಮತ್ತು ಪ್ರಸಾರ ವಿಭಾಗ ಕೆಸಿಎಫ್ ಕುವೈಟ್


















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು