ಇತಿಹಾಸ ಪ್ರಸಿದ್ದ ಕನ್ಯಾನ ರಹ್ಮಾನಿಯಾ ಜಮಾಅತ್ ಮತ್ತು ಆಧೀನದ 7 ಮೊಹಲ್ಲಾಗಳ ನೂತನ ಖಾಝಿಯಾಗಿ (ದಾರ್ಮಿಕ ನ್ಯಾಯಧೀಶರು) ಬಹು ಸುಲ್ತಾನುಲ್ ಉಲಮಾ ಏ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಆಗಸ್ಟ್ 17 ರಂದು ಉಳ್ಳಾಲದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಕನ್ಯಾನ ಖಾಝಿಗಳಾಗಿದ್ದ ಬಹುಮಾನ್ಯ ಸೈಯ್ಯದ್ ಪಝಲ್ ಕೋಯಮ್ಮ ಕೂರತ್ ತಂಙಲ್ ರವರ ಅಗಲುವಿಕೆಯಿಂದ ತೆರವಾಗಿದ್ದ ಖಾಝಿ ಸ್ಥಾನಕ್ಕೆ ಜಾಗತೀಕ ಮಟ್ಟದಲ್ಲಿ ಚಿರಪರಿಚಿತರಾದ ಹಿರಿಯ ಸುನ್ನೀ ವಿಧ್ವಾಂಸರೂ, ಬಾರತದ ಗ್ರ್ಯಾಂಡ್ ಮುಫ್ತಿಯೂ ಆದ ಕಾಂತಪುರಂ ಉಸ್ತಾದರನ್ನು ಜಮಾಅತ್ ಸಮಿತಿ ಒಕ್ಕೊರಲಿನಿಂದ ತೀರ್ಮಾನಿಸಿದರು.
ಕನ್ಯಾನ ರಹ್ಮಾನಿಯಾ ಜಮಾಅತ್ ಮತ್ತು ಆಧೀನದ 7 ಮೊಹಲ್ಲಾಗಳ ಪ್ರತಿನಿಧಿಯಾಗಿ ಕನ್ಯಾನ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ ಬೈಅತ್ ಮಾಡಿದರು, ಕನ್ಯಾನ ಮುದರ್ರೀಸ್ ಶೈಖುನಾ ಇಬ್ರಾಹಿಂ ಫೈಝಿ ಪ್ರ.ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮಂಡ್ಯೂರು ಸಹಿತ ಜಮಾಅತ್ ಕಮಿಟಿ ಪದಾದಿಕಾರಿಗಳು, ಸದಸ್ಯರೂ, ಜಮಾಅತರು ಭಾಗವಹಿಸಿದರು.
ಕೇರಳ, ಕರ್ನಾಟಕದಲ್ಲಿ ನೂರಕ್ಕಿಂತಲೂ ಹೆಚ್ಚು ಮೊಹಲ್ಲಾಗಳ ಖಾಝಿಗಳಾಗಿರುವ ಉಸ್ತಾದರು ಅಖಿಲ ಭಾರತ ಸುನ್ನೀ ಜಂಇಯತ್ತುಲ್ ಉಲಮಾ ಪ್ರ.ಕಾರ್ಯದರ್ಶಿ, ಮರ್ಕಝ್ ವಿಶ್ವ ವಿದ್ಯಾನಿಲಯದ ಕುಲಪತಿ, ಸಹಿತ ಹಲವಾರು ಸಂಘ ಸಂಸ್ಥೆಗಳ ನೇತೃ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ
ಸರಿ ಸುಮಾರು 5 ದಶಕಗಳಿಗಿಂತಲೂ ಹೆಚ್ಚು ಬಹುಮಾನ್ಯ ತಾಜುಲ್ ಉಲಮಾ ಉಳ್ಳಾಲ್ ತಂಙಲ್ ನಂತರ ಅವರ ಮಗ ಕೂರತ್ ತಂಙಲ್ ಕನ್ಯಾನ ಜಮಾಅತಿನ ಖಾಝಿಗಳಾಗಿದ್ದರು.
ಖಾಝಿ ಸ್ವೀಕಾರ ಸಮಾರಂಭಕ್ಕೆ ಅವಕಾಶ ಮಾಡಿಕೊಟ್ಟ ಉಳ್ಳಾಲ ಸೆಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮತ್ತು ಉಳ್ಳಾಲ ಜಮಾಅತ್ತರಿಗೆ ಕನ್ಯಾನ ಜಮಾಅತ್ತಿನ ಪರವಾಗಿ ದನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ