ದಮ್ಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಎಸೋಸಿಯೇಷನ್ (ಕೆಎಂವೈಎ) ಈಷ್ಟರ್ನ್ ಝೋನ್ ವಾರ್ಷಿಕ ಮಹಾಸಭೆ 09, ಫೆಬ್ರವರಿ 2024 ಶುಕ್ರವಾರ ಉಮ್ಮು ಸಾಹಿಕ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮುಸ್ಥಫ ಇಬ್ರಾಹೀಂ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಹಾದಿ ತಂಙಳ್ ರವರ ದುಆ ದ ಬಳಿಕ ಮುಹಮ್ಮದ್ ಅಮಾನುದ್ದೀನ್ ಸೂರ: ಮುಲ್ಕ್ ಪಠಿಸಿದರು. ಜೊತೆ ಕಾರ್ಯದರ್ಶಿ ಸೈಫುಲ್ಲಾ ಮುಹ್ಯಿದ್ದೀನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ವಾರ್ಷಿಕ ವರದಿ ವಾಚಿಸಿದರು ಹಾಗೂ ಕೋಶಾಧಿಕಾರಿ ಪಿ.ಎಂ. ತಾಜುದ್ದೀನ್ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿದರು.
ಮ್ಯಾನ್ ಆಫ್ ದಿ ಇಯರ್ ಅವಾರ್ಡನ್ನು ಪಿ.ಎ. ಮುಹಮ್ಮದ್ ಬಶೀರ್ ರವರಿಗೆ ನೀಡಲಾಯಿತು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮುಸ್ಥಫ ಇಬ್ರಾಹೀಂ ಮಾತನಾಡಿ ಕೆಎಂವೈಎ ಗಾಗಿ ದುಡಿದವರಿಗೆ ಕ್ರತಜ್ಞತೆಯನ್ನು ಅರ್ಪಿಸಿ ಮುಂದಕ್ಕೂ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ನಮ್ಮೊಂದಿಗಿರಲಿ ಎಂದು ಭಿನ್ನವಿಸಿದರು.
2024-25 ನೇ ಸಾಲಿಗೆ ನೂತನ ಸಮಿತಿಯನ್ನು ರಿಯಾದ್ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಮತ್ತು ಚೇರ್ಮ್ಯಾನ್ ಸುಲೈಮಾನ್ ರವರ ಉಸ್ತುವಾರಿಯಲ್ಲಿ ಆರಿಸಲಾಯಿತು.
ಅಧ್ಯಕ್ಷರಾಗಿ ಮುಸ್ಥಫ ಇಬ್ರಾಹೀಂ, ಗೌರವಾಧ್ಯಕ್ಷರಾಗಿ ನೌಶಾದ್ ರಶೀದ್, ಕೋಶಾಧಿಕಾರಿಯಾಗಿ ಪಿ.ಎಂ. ತಾಜುದ್ದೀನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಕಾಟಿಪಳ್ಳ ರವರನ್ನು ನೇಮಕಗೊಳಿಸಲಾಯಿತು. ಉಪಾಧ್ಯಕ್ಷರಾಗಿ ಪಿ.ಎಂ.ಆರಿಫ್ ಮತ್ತು ಸೈಫುಲ್ಲಾ ಮುಹ್ಯಿದ್ದೀನ್, ಜೊತೆ ಕಾರ್ಯದರ್ಶಿಗಳಾಗಿ ಪಿ.ಎ. ಶಬೀರ್ ಮತ್ತು ನೌಫಲ್ ಜುಬೈಲ್, ಉಪಕೋಶಾಧಿಕಾರಿಯಾಗಿ ಆಸಿಫ್ ಹಮ್ಮಬ್ಬ ಆಯ್ಕೆಗೊಂಡರು. ಸಂಘಟನಾ ಕಾರ್ಯದರ್ಶಿ ಯಾಗಿ ಶಕೀಲ್ ಆದಂ, ಆಡಿಟರ್ ಆಗಿ ಅಬ್ದುಲ್ ಗಫ್ಫಾರ್, ಮೀಡಿಯಾ ವಿಭಾಗಕ್ಕೆ ಶಾಫಿ ಇಮ್ರಾನ್ (ಮುನ್ನ), ಸಲಹಾ ಸಮಿತಿಗೆ ಪಿ.ಎ.ರಹ್ಮಾನ್, ಪಿ.ಎ.ಮುಹಮ್ಮದ್ ಬಶೀರ್, ಪಿ.ಎಂ.ಹನೀಫ್, ಹಂಝ, ನಝೀರ್ ಗುಲಾಂ ಹಾಗೂ ಶುಐಬ್ ಮತ್ತು 20 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಮರು ನೇಮಕಗೊಂಡ ಮುಸ್ಥಫಾ ಇಬ್ರಾಹೀಂ ರವರು ಮಾತನಾಡುತ್ತಾ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರವಿದ್ದರೆ ಮಾತ್ರ ಅಭಿವ್ರಧ್ಧಿ ಸಾಧಿಸಲು ಸಾಧ್ಯ. ನಮ್ಮೊಂದಿಗೆ ಕೈ ಜೋಡಿಸಿ ಯಶಸ್ವಿಗೊಳಿಸಿರಿ ಎಂದು ವಿನಂತಿಸಿದರು.
ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಧನ್ಯವಾದ ಗೈದರು.
All the best for the new working committee.