ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ವತಿಯಿಂದ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಧ್ಯೇಯ ವಾಕ್ಯದೊಂದಿಗೆ ಬೃಹತ್ ಮೀಲಾದ್ ಸಮಾವೇಶವು ಸೆ.29 ಶುಕ್ರವಾರ ಅಲ್ ಫವಾನ್ ಬಾಲ್ರೂಮ್, ಝಾಕಿರ್ ಮಾಲ್ ಅಲ್ ಖುವೈರ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮವು ಸಂಜೆ 4 ಕ್ಕೆ ಪ್ರಾರಂಭವಾಗಲಿದ್ದು , ಮಕ್ಕಳ ಮೀಲಾದ್ ಸಾಂಸೃತಿಕ ಕಲರವ ನಡೆಯಲಿದೆ. ಸಮಯ ಸಂಜೆ 7 ರಿಂದ 8 ರವರೆಗೆ ಮೌಲಿದ್ ಹಾಗೂ ಬುರ್ಧಾ ಮಜ್ಲಿಸ್ ನಡೆಯಲಿದೆ.
ರಾತ್ರಿ 8 ಕ್ಕೆ ಸಭಾಕಾರ್ಯಕ್ರಮ ನಡೆಯಲಿದ್ದು, ಜನಾಬ್ ಅಯ್ಯೂಬ್ ಕೋಡಿಯವರು ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಸಯ್ಯಿದ್ ಆಬಿದ್ ಅಲ್ ಐದರೂಸಿ ತಂಗಳ್ ರವರು ದುಆಕ್ಕೆ ನೇತೃತ್ವ ನೀಡಲಿದ್ದಾರೆ.
ಉಮರ್ ಸಖಾಫಿ ಎಡಪ್ಪಾಲ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,
ಕಾರ್ಯಕ್ರಮದಲ್ಲಿ ಜುನೈದ್ ಹಿಮಮಿ ಸಖಾಫಿ – ಇಹ್ಸಾನ್ ದಾಈ ಚಿತ್ರದುರ್ಗ ಇವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಹಾಗೂ ನಅ್’ತೇ ಶರೀಫ್ ಮೂಲಕ ಪ್ರಖ್ಯಾತಿ ಪಡೆದ ಮುಈನ್ ಖಾದ್ರಿ ಬೆಂಗಳೂರು ಇವರಿಂದ ನಅ್’ತೆ ಶರೀಫ್ ಕಾರ್ಯಕ್ರಮ ನಡೆಯಲಿದೆ. ಸ್ವಾದಿಕ್ ಹಾಜಿ ಸುಳ್ಯ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿರುವರು.
ಕಾರ್ಯಕ್ರಮದಲ್ಲಿ ಜನಾಬ್ ಆರಿಫ್ ಕೋಡಿ, ಇಕ್ಬಾಲ್ ಬೊಳ್ಮಾರ್ ಬರ್ಕ, ಇಬ್ರಾಹೀಂ ಹಾಜಿ ಅತ್ರಾಡಿ, ಉಬೈದುಲ್ಲಾ ಸಖಾಫಿ, ಹಂಝ ಹಾಜಿ ಕನ್ನಂಗಾರ್, ಜನಾಬ್ ಆಬಿದ್ ಪಾಷ, ಮೋನಬ್ಪ ಹಾಜಿ, ಹನೀಫ್ ಮನ್ನಾಪು, ಅಬ್ದಲ್ಲತೀಫ್ ಮಂಜೇಶ್ವರ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿರುವರು. ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ