ಮಕ್ಕಾ: ಪವಿತ್ರ ಉಮ್ರಾ ಕರ್ಮ ನಿರ್ವಹಿಸಲು ಮಂಗಳೂರಿನ ಗಲ್ಫ್ ಟೂರ್ಸ್ & ಟ್ರಾವೆಲ್ಸ್ ಮೂಲಕ ಮಕ್ಕಾ ತಲುಪಿದ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಉಸ್ಮಾನ್ ಎಂಬವರು ಉಮ್ರಾ ನಿರ್ವಹಿಸುತ್ತಿರುವ ವೇಳೆ ಹೃದಯಘಾತಗೊಂಡು ಮಕ್ಕಾದ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆಯಲ್ಲಿದ್ದು, ಮಾರ್ಚ್ 31 ರಂದು ರಾತ್ರಿ ಕೊನೆಯುಸಿರೆಳೆದರು.

ಕಳೆದ ಫೆಬ್ರವರಿ ತಿಂಗಳಿನಿಂದ ಆಸ್ಪತ್ರೆಯಲ್ಲಿರುವಾಗ ಅವರನ್ನು ಎಲ್ಲಾ ದಿನಗಳಲ್ಲಿ ಮಕ್ಕಾ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ನೇತಾರರು ಹೋಗಿ ಕಂಡು ಬರುತ್ತಿದ್ದರು, ಇದೀಗ ಮರಣ ಹೊಂದಿದ ವಿಷಯ ತಿಳಿದು ಕಾರ್ಯಪ್ರವೃತರಾದ ಮಕ್ಕಾ ಸೆಕ್ಟರ್ ಸಾಂತ್ವನ ಇಲಾಖೆ ಹಾಗೂ ಜಿದ್ದಾ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷರಾದ ಮೂಸಾ ಹಾಜಿ ಕಿನ್ಯ ಮತ್ತು ಕೆಸಿಎಫ್ ಮದೀನತುಲ್ ಮುನವ್ವರ ಝೋನ್ ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಝ್ಝಾಖ್ ಉಳ್ಳಾಲರವರು ಮೃತರ ಅಂತ್ಯಕ್ರಿಯೆಗೆ ಬೇಕಾದ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಚೇರಿಗೆ ಕಡತಗಳು ಹಾಗೂ ಇನ್ನಿತರ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಲು ಪ್ರಮುಖ ಪಾತ್ರ ವಹಿಸಿದ್ದರು.
ಮಯ್ಯಿತ್ ದಫನ ಕಾರ್ಯದಲ್ಲಿ ಮೃತರ ಮಗ ಕುವೈತ್ ನಿಂದ ಆಗಮಿಸಿದ ಶಮೀಉಲ್ಲಾ, ಸಹೋದರ ಶರೀಫ್, ಬಾವ ಹಮೀದ್ ಮತ್ತು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝ್ಝಾಖ್ ರಂತಡ್ಕ, ಪ್ರಧಾನ ಕಾರ್ಯದರ್ಶಿ ಹನೀಫ್ ಕೋಳ್ಯೂರು, ಇಹ್ಸಾನ್ ಇಲಾಖೆ ಅಧ್ಯಕ್ಷರು ಅಬ್ದುಲ್ ಲತೀಫ್ ನೆಲ್ಯಾಡಿ, ಕೆಸಿಎಫ್ ಕುದೈ ಯೂನಿಟ್ ಅಧ್ಯಕ್ಷರು ರಫೀಕ್ ಬೆಳಂದೂರು, ಸದಸ್ಯರಾದ ಇಕ್ಬಾಲ್ ಗಬ್ಗಲ್, ಹಾಗೂ ಸಾಮಾಜಿಕ ಕಾರ್ಯಕರ್ತ ಶಾಕಿರ್ ಹಕ್ಕ್ ಮೊದಲಾದವರು ಭಾಗವಹಿಸಿದ್ದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು
ರಂಜಾನ್ ತಿಂಗಳಲ್ಲಿ 3.6 ಲಕ್ಷ ಉಮ್ರಾ ಯಾತ್ರಿಕರಿಗೆ ಉಚಿತ (ತಹಲ್ಲುಲ್) ಕ್ಷೌರ ಸೇವೆ