ಕೆಸಿಎಫ್ ದಮ್ಮಾಮ್ ಝೋನ್ ಆಯೋಜಿಸಿದ ಗ್ರ್ಯಾಂಡ್ ಇಫ್ತಾರ್ ಮೀಟ್ ಬಹಳಷ್ಟು ಜನರ ಸ್ಪಂದನೆ ಹಾಗೂ ಕಾರ್ಯಕರ್ತರ ಆಹೋ ರಾತ್ರಿಯ ಪರಿಶ್ರಮದ ಫಲದಿಂದ ಬಹಳ ವಿಜೃಂಭಣೆಯಿಂದ ಅಲ್ ರಯ್ಯಾನ್ ಅಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ದಮ್ಮಾಮ್ ಝೋನ್ ಅಧ್ಯಕ್ಷರಾದ ಬಹು ಫಾರುಕು ಮುಸ್ಲಿಯಾರ್ ಕುಪ್ಪೆಟ್ಟಿ ವಹಿಸಿದರು , ಸ್ವಾಗತ ಸಮಿತಿ ಕನ್ವೀನರ್ ಹನೀಫ್ ಮೂಡಬಿದ್ರೆ ಸ್ವಾಗತಿಸಿ, ಉದ್ಘಾಟನೆಯನ್ನು ದಮ್ಮಾಮ್ ಝೋನ್ ದಾಯಿ ರಹೀಮ್ ಸಖಾಫಿ ಉಸ್ತಾದ್ ನೆರವೇರಿಸಿದರು.
ಸಭೀಕರನ್ನುದ್ದೇಶಿಸಿ ರಶೀದ್ ಸಖಾಫಿ ಉಸ್ತಾದ್ ಕೆಸಿಎಫ್ ನ ಇಹ್ಸಾನ್, ಸಾಂತ್ವನ, ಹಾಗೂ ಇತರ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮನದಟ್ಟಾಗುವ ಶೈಲಿಯಲ್ಲಿ ವಿವರಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಎಸ್ ವೈ ಎಸ್ ಸಂಘಟನಾ ಕಾರ್ಯದರ್ಶಿ ಕೆ ಎಮ್ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ನೆರೆದ ಸಭಿಕರಿಗೆ ಉಪದೇಶ ನೀಡಿ ಸಹಕರಿಸಿದ ಎಲ್ಲರಿಗೂ ದುಆ ನೇರವೇರಿಸಿದರು.
ಸೌದಿ ಅರೇಬಿಯಾ ರಾಷ್ಟ್ರೀಯ ಅಧ್ಯಕ್ಷರಾದ ಬಹು ನಝೀರ್ ಹಾಜಿ ಕಾಶಿಪಟ್ನರವರು ದಮ್ಮಾಮ್ ಝೋನ್ ಕಾರ್ಯಕರ್ತರ ಉತ್ಸಾಹ ಹಾಗೂ ಕಾರ್ಯಕ್ರಮದ ಶಿಸ್ತು ಬದ್ಧತೆಯನ್ನು ಪ್ರಶಂಸೆ ಮಾಡಿ ಸಭೆಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ IC ನೇತಾರ ರೈಸ್ಕೋ ಅಬೂಬಕ್ಕರ್ ಹಾಜಿ, ಸೌದಿ ರಾಷ್ಟ್ರೀಯ ನೇತಾರ ಎನ್ ಎಸ್ ಅಬ್ದುಲ್ಲಾ ಹಾಜಿ, ಹಾಗೂ ಜುಬೈಲ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಕಾಟಿಪಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಭೆಯ ಕೊನೆಯಲ್ಲಿ ನಮ್ಮಿಂದ ಅಗಲಿದ ಸುಲೈಮಾನ್ ಮಳ್ಳೂರು ಇವರಿಗೆ ಮಯ್ಯಿತ್ ನಮಾಝ್ ಹಾಗು ತಹ್ಲೀಲ್ ದುಅ ಮಜ್ಲಿಸ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಹಬೀಬ್ ಸಖಾಫಿಯವರ ನೇತ್ರತ್ವದಲ್ಲಿ ನೆರವೇರಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷರಾದ ಉಮರ್ ಹಾಜಿ ಅಳಕೆಮಜಲ್ ಅತಿಥಿಗಳಿಗೆ ಧನ್ಯವಾದ ಸಲ್ಲಿಸಿದರು.