janadhvani

Kannada Online News Paper

ಕಾನೂನು ತೊಡಕು ನಿವಾರಣೆ: ಇನ್ಮುಂದೆ ವಖ್ಫ್ ಮಂಡಳಿಯಿಂದ ಮ್ಯಾರೇಜ್ ಸರ್ಟಿಫಿಕೇಟ್ ಲಭ್ಯ

ಈ ಹಿಂದೆ ಉತ್ತರಕರ್ನಾಟಕದ ಮೌಲ್ವಿ ಒಬ್ಬರು ಕರ್ನಾಟಕ ಉಚ್ಚನ್ಯಾಯಾಲಯವನ್ನು ಸಂಪರ್ಕಿಸಿ ತಡೆಯಾಜ್ಞೆ ಪಡೆದಿದ್ದರು.

ಮಂಗಳೂರು: ಈ ಹಿಂದೆ ಮುಸ್ಲಿಮ್ ವಿವಾಹಿತ ಜೋಡಿಗಳು ವಕ್ಫ್ ಕಚೇರಿಯಿಂದ ಅಪೇಕ್ಷಿಸಲಾಗುತಿದ್ದ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಣೆಯನ್ನು ದ.ಕ.ಜಿಲ್ಲಾ ವಕ್ಫ್ ಕಚೇರಿಯು ಪುನರಾರಂಭಗೊಳಿಸಿದೆ ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ನಾಸಿರ್ ಲಕ್ಕಿಸ್ಟಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಉತ್ತರಕರ್ನಾಟಕದ ಮೌಲ್ವಿ ಒಬ್ಬರು ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಣೆಯ ವ್ಯಾಪ್ತಿ ವಕ್ಫ್ ಇಲಾಖೆಗೆ ಇಲ್ಲ ಎಂಬುದಾಗಿ ಕರ್ನಾಟಕ ಉಚ್ಚನ್ಯಾಯಾಲಯವನ್ನು ಸಂಪರ್ಕಿಸಿ ತಡೆಯಾಜ್ಞೆ ಪಡೆದಿದ್ದರು. ಇದರಿಂದಾಗಿ, ಕರಾವಳಿ ಜಿಲ್ಲೆಗಳಲ್ಲಿನ ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡುವ ಅಸಂಖ್ಯಾತ ವಿವಾಹಿತ ಕುಟುಂಬಕ್ಕೆ ವಕ್ಫ್ ಪ್ರಮಾಣ ಪತ್ರದ ಅಲಭ್ಯತೆಯಿಂದಾಗಿ ಸಮಸ್ಯೆ ಸೃಷ್ಟಿಯಾಗಿತ್ತು.

ಪ್ರಸ್ತುತ, ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಗೆ ಇರುವ ಅಡೆತಡೆ ನಿವಾರಣೆಯಾಗಿದ್ದು, ವಕ್ಫ್ ಕಚೇರಿ ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವುದನ್ನು ಪುನರ್ ಆರಂಭ ಗೊಳಿಸಲಾಗಿದೆ ಎಂದು ಸಲಹಾ ಸಮಿತಿ ಅಧ್ಯಕ್ಷರು,ಸಲಹಾ ಸಮಿತಿ ಸಭೆಯ ನಂತರ ಹೇಳಿಕೆ ನೀಡಿದ್ದಾರೆ.