ಮಂಗಳೂರು: ಇಲ್ಲಿನ, ಸುರತ್ಕಲ್ ಟೋಲ್(Suratkal Toll Gate) ವಿರುದ್ಧದ ಹೋರಾಟದ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚಣೆ ಘಟನೆಗೆ ಸಂಬಂಧಿಸಿ ಪ್ರತಿಭಾ ಕುಳಾಯಿಯ ವಿರುದ್ಧ ಶ್ಯಾಮ್ ಸುದರ್ಶನ್ ಭಟ್ ರವರು, ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ, ಅಶ್ಲೀಲವಾಗಿ, ಅವಹೇಳನಾತ್ಮಕವಾಗಿ, ನಿಂದಿಸಿರುವುದನ್ನು ಮಾಜಿ ಮೇಯರ್, ಕೆ.ಅಶ್ರಫ್ ರವರು ಖಂಡಿಸಿದ್ದಾರೆ.
ಪ್ರತಿಭಾ ಕುಳಾಯಿರವರು ತನ್ನ ಪ್ರಜಾಸತ್ತಾತ್ಮಕ ಹೋರಾಟದ ಸಂದರ್ಭದಲ್ಲಿ ಓರ್ವ ಸ್ತ್ರೀ ಹೋರಾಟಗಾರಳಾಗಿ ಇದ್ದುಕೊಂಡು, ನ್ಯಾಯದ ಬೇಡಿಕೆ, ಪರಿಸ್ಥಿತಿಯ ಸವಾಲು, ಕಾನೂನಿಗೆ ಗೌರವ, ನೈತಿಕತೆಯ ಪರಿಪಾಲನೆ ಯೊಂದಿಗೆ ತನ್ನ ವ್ಯಕ್ತಿ ಗೌರವವನ್ನು ಸಂರಕ್ಷಿಸುವ ಪದಗಳನ್ನು ಆಡಿದ್ದಕ್ಕೆ, ಅದನ್ನೇ ದೊಡ್ಡ ಸೂಕ್ಷ್ಮ ಘಟನೆಯಾಗಿಸಿ ದ್ವಂದ ದೃಷ್ಟಿಯ ಮನಸ್ಥಿತಿಯಲ್ಲಿ ಕಂಡು, ಓರ್ವ ಸ್ತ್ರೀ ಸಹೋದರಿಯನ್ನು , ಸಾಮಾಜಿಕ ಜಾಲ ತಾಣಗಳ ಮೂಲಕ ಅಶ್ಲೀಲ ಮತ್ತು ಲೈಂಗಿಕ ದೌರ್ಜನ್ಯದ ಭಾಷೆಯಲ್ಲಿ ನಿಂದಿಸುವುದು ಅಪರಾಧ.
ಇಂತಹ ನೀಚ ಮನಸ್ಥಿತಿಯ ವ್ಯಕ್ತಿ ಪತ್ರಿಕಾ ವೃತ್ತಿಯಲ್ಲಿ ಇರುವುದು, ಸಾಮಾಜಿಕ ಸ್ವಾಸ್ಥ್ಯ ವನ್ನು ಕೆಡಿಸುವುದಕ್ಕಾಗಿದೆ. ಪತ್ರಕರ್ತರು ಸಮಾಜದ ದರ್ಪಣವಾಗಿ ವೃತ್ತಿ ಗೌರವವನ್ನು ಪಾಲಿಸುವುದರೊಂದಿಗೆ, ಸಮಾಜದಲ್ಲಿನ ಶೋಷಣೆಯ ವಿರುದ್ಧ ಹೋರಾಡುವ ಸ್ತ್ರೀವರ್ಗದ ಗೌರವವನ್ನು ಸಂರಕ್ಷಿಸುವ ಮಾತುಗಳನ್ನು ಆಡುವ ಬದಲು ಶ್ಯಾಮ್ ಸುದರ್ಶನ್ ಭಟ್, ಸ್ತ್ರೀ ಅಪಮಾನವನ್ನು ಮಾಡುವ ಮೂಲಕ, ಸ್ತ್ರೀಯರ ಬಗ್ಗೆಗಿನ ತನ್ನ ಮನಸ್ಥಿತಿಯನ್ನು ಹೊರಗೆಡಹಿರುವುದು, ಅವರ ನೈಜ ದೃಷ್ಟಿ ಏನು ಎಂದು ಬಿಂಬಿಸುತ್ತದೆ.ಇಂತಹ ವ್ಯಕ್ತಿಯಿಂದ ಸ್ತ್ರೀಪರ ಬರಹಗಳನ್ನು ನಿರೀಕ್ಷಿಸುವುದು ವ್ಯರ್ಥ.
ಸಹೋದರಿ ಪ್ರತಿಭಾ ಕುಳಾಯಿ ಅವರು ಬಲ್ಕೀಸ್ ಬಾನು ಸಂತ್ರಸ್ತೆಯ ಮತ್ತು ಈ ಹಿಂದೆ ಆಸಿಫಾ ಅತ್ಯಾಚಾರ ವಿರುದ್ಧ ನೇರ ದ್ವನಿ ಎತ್ತಿದ ಓರ್ವ ಧೀರ ಮಹಿಳೆ, ಅವರ ಅವಹೇಳನ ವಿರುದ್ಧದ ಸ್ತ್ರೀ ಶಕ್ತಿ ಹೋರಾಟಕ್ಕೆ ಮುಸ್ಲಿಮ್ ಒಕ್ಕೂಟ ಸಂಪೂರ್ಣ ಬೆಂಬಲವಿದೆ. ಸಹೋದರಿ ಕುಳಾಯಿರವರ ಅವಹೇಳನದ ಆರೋಪಿಯ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಜಿಲ್ಲೆಯಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ನೀಡಬೇಕು ಎಂದು ಕೆ.ಅಶ್ರಫ್
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಆಗ್ರಹಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್