ಶಾರ್ಜಾ: ಯುಎಇಯ ಉತ್ತರ ಎಮಿರೇಟ್ಸ್‌ನಲ್ಲಿ ಮರಣ ಹೊಂದುವ ವಲಸಿಗರ ಮೃತ ದೇಹಗಳಿಗಾಗಿ ಶಾರ್ಜಾದಲ್ಲಿ ಹೊಸ ಎಂಬಾಮಿಂಗ್ ಕೇಂದ್ರವು(Embalming Centre) ಶೀಘ್ರದಲ್ಲೇ ಕಾರ್ಯಾಚರಣೆಗೊಳ್ಳಲಿದೆ.
ಈ ಬಗ್ಗೆ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವ. ವೈ.ಎ. ರಹೀಮ್ ಮಾಹಿತಿ ನೀಡಿದರು. ಶಾರ್ಜಾದ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಅವರ ವಿಶೇಷ ಆದೇಶದ ಮೇಲೆ ಹೊಸ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ.
ಶಾರ್ಜಾ, ಅಜ್ಮಾನ್, ಉಮ್ ಅಲ್-ಖುವೈನ್ ಮತ್ತು ಫುಜೈರಾದಲ್ಲಿನ ಮೃತ ದೇಹಗಳನ್ನು ಎಂಬಾಮ್ ಮಾಡಲು ಹೊಸ ಕೇಂದ್ರವು, ಶಾರ್ಜಾ ವಿಮಾನ ನಿಲ್ದಾಣ (Sharjah International Airport) ಸಮೀಪದ ವಿಧಿವಿಜ್ಞಾನ ಪ್ರಯೋಗಾಲಯದ (Forensic Laboratory) ಕಟ್ಟಡದಲ್ಲಿ (ಅಲ್ ರಿಫಾ ಪಾರ್ಕ್ ಬಳಿ) ಕಾರ್ಯನಿರ್ವಹಿಸಲಿದೆ.
ಪ್ರಸ್ತುತ ಅಬುಧಾಬಿ, ದುಬೈ, ಅಲ್ ಐನ್ ಮತ್ತು ರಾಸ್ ಅಲ್ ಖೈಮಾದಲ್ಲಿ ಎಂಬಾಮಿಂಗ್ ಕೇಂದ್ರಗಳಿವೆ. ಯುಎಇಯಲ್ಲಿನ ಐದನೇ ಎಂಬಾಮಿಂಗ್ ಕೇಂದ್ರವನ್ನು ಶಾರ್ಜಾದಲ್ಲಿ ತೆರೆಯಲಾಗುತ್ತಿದೆ. ಶಾರ್ಜಾದ ಕೇಂದ್ರವ ಒಂದು ಮೃತ ದೇಹವನ್ನು ಎಂಬಾಮ್ ಮಾಡಲು 2200 ದಿರ್ಹಮ್‌ಗಳನ್ನು ವಿಧಿಸುತ್ತದೆ. ವೈದ್ಯರು, ನರ್ಸ್, ತಂತ್ರಜ್ಞರು ಮತ್ತು ಸಹಾಯಕರು ಸೇರಿದಂತೆ
ಹೊಸ ಎಂಬಾಮಿಂಗ್ ಕೇಂದ್ರದಲ್ಲಿ ಸರ್ಕಾರ ಏಳು ನೌಕರರನ್ನು ನೇಮಿಸಿದೆ.
ಪ್ರಸ್ತುತ, ದುಬೈ ಸೋನಾಪುರ ಎಂಬಾಮಿಂಗ್ ಕೇಂದ್ರದಲ್ಲಿ ಎಂಬಾಮಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಉತ್ತರ ಎಮಿರೇಟ್ಸ್‌ನ ಮೃತದೇಹಗಳನ್ನು ಶಾರ್ಜಾ ವಿಮಾನ ನಿಲ್ದಾಣ ಮತ್ತು ಇತರ ಸ್ಥಳಗಳ ಮೂಲಕ ಮನೆಗೆ ಕೊಂಡೊಯ್ಯಲಾಗುತ್ತಿದೆ. ಅದೂ ಅಲ್ಲದೇ, ದುಬೈನಲ್ಲಿ ಎಂಬಾಮಿಂಗ್ ಪ್ರಕ್ರಿಯೆಯು ಪೂರ್ಣಗೊಳ್ಳಲು ಬಹಳಷ್ಟು ವಿಳಂಬವಾಗುತ್ತಿದೆ.
ಶಾರ್ಜಾದಲ್ಲಿ ಕೇಂದ್ರವನ್ನು ತೆರೆಯುವುದರೊಂದಿಗೆ, ಉತ್ತರ ಎಮಿರೇಟ್ಸ್‌ನಲ್ಲಿರುವ ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಸೋನಾಪುರವನ್ನು ತಲುಪಬೇಕಾದ ಸಮಯವನ್ನು ಉಳಿಸಲಿದ್ದಾರೆ.
ಸೋನಾಪುರಕ್ಕೆ ಹೋಲಿಸಿದರೆ, ಮೃತ ದೇಹವನ್ನು ಎಂಬಾಮಿಂಗ್ ಮಾಡಲು ಶಾರ್ಜಾ ಅಗ್ಗವಾಗಿದೆ.ಇತರ ಕೇಂದ್ರಗಳ ದರಗಳೆಂದರೆ, ಅಬುಧಾಬಿ -1000 ದಿರ್ಹಮ್‌ಗಳು, ಅಲ್ ಐನ್ – 1000, ದುಬೈ – 3120 ದಿರ್ಹಮ್‌ಗಳು ಮತ್ತು ರಾಸ್ ಅಲ್ ಖೈಮಾ – 4000 ದಿರ್ಹಮ್‌ಗಳಾಗಿವೆ.
ಶಾರ್ಜಾದಲ್ಲಿ ಎಂಬಾಮಿಂಗ್ ಕೇಂದ್ರ ಆರಂಭಿಸಬೇಕೆಂಬ ವಲಸಿಗರ ಬಹುಕಾಲದ ಬೇಡಿಕೆಯು ಹತ್ತು ವರ್ಷಗಳ ಬಳಿಕ, ಇದೀಗ ಸಫಲವಾಗಿದೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ