ಕಿನ್ಯಾ: ಪುಣ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಅನುಗ್ರಹೀತ ಜನ್ಮ ತಿಂಗಳಾದ ಪವಿತ್ರ ರಬೀವುಲ್ ಅವ್ವಲ್ ಪ್ರಯುಕ್ತ ಅಕ್ಟೋಬರ್ 23 ಕ್ಕೆ ಕಿನ್ಯ ದಲ್ಲಿ SჄS ಮತ್ತು SSF ವತಿಯಿಂದ ಐತಿಹಾಸಿಕ “ಹುಬ್ಬುರ್ರಸೂಲ್ ಸಮಾವೇಶ ಹಾಗೂ ಬೃಹತ್ ಮೀಲಾದ್ ರ‌್ಯಾಲಿ” ನಡೆಯಲಿದೆ.
ಈ ಸಂಬಂಧ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ಸೇರಿದ್ದ ಸಭೆಯಲ್ಲಿ, ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಗೆ ರೂಪು ನೀಡಲಾಯಿತು.
ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ಚಯರ್ಮಾನ್, ಬಷೀರ್ ಕೂಡಾರ ಜನರಲ್ ಕನ್ವೀನರ್, ರಹ್ಮತ್ ನಗರ ಇಬ್ರಾಹೀಂ ಹಾಜಿ ಕೋಶಾಧಿಕಾರಿ ಯಾಗಿ ಆರಿಸಲಾಯಿತು.ಇರ್ಫಾನ್ ಸಖಾಫಿ ಖುತುಬಿನಗರ ವೈಸ್ ಚಯರ್ಮಾನ್ ಆಶಿಖ್ ಮೀಂಪ್ರಿ ವೈಸ್ ಕನ್ವೀನರ್ ಆಗಿ ಆಯ್ಕೆ ಮಾಡಲಾಯಿತು.
ಅಕ್ಟೋಬರ್ 23 ಆದಿತ್ಯವಾರ ಮಧ್ಯಾಹ್ನ ಎರಡು ಗಂಟೆಗೆ ಕಿನ್ಯ ಖುತುಬಿನಗರದಿಂದ ಹೊರಡುವ ಕಾಲ್ನಡಿಗೆ ಜಾಥಾ ರಹ್ಮತ್ ನಗರ, ಕುರಿಯ ಮೂಲಕ ಸಾಗಿಬಂದು ಕಿನ್ಯ ಕೇಂದ್ರ ಮಸ್ಜಿದ್ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಹಝ್ರತ್ ಹುಸೈನ್ ವಲಿಯುಲ್ಲಾಹಿ ರವರ ದರ್ಗಾ ಝಿಯಾರತ್ ನಡೆಸಿ ಮುಂದೆ ಸಾಗುವ ಜಾಥಾ ಉಕ್ಕುಡ, ಮೀಂಪ್ರಿ ಮಾರ್ಗವಾಗಿ ಬದ್ರಿಯ್ಯಾನಗರ ಮೂಲಕ ಬೆಳರಿಂಗೆ ಯಲ್ಲಿ ಸಮಾಪ್ತಿ ಗೊಳ್ಳಲಿದೆ. ಸಂಜೆ 4.30 ಕ್ಕೆ ಮದ್ಹುರ್ರಸೂಲ್ ಕಾರ್ಯಕ್ರಮ ನಡೆಯಲಿದೆ,
ಕಾರ್ಯಕ್ರಮದಲ್ಲಿ ಊರಿನ ಸುನ್ನೀ ಸಂಘ ಕುಟುಂಬದ ನಾಯಕರು, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸುವರು.
ಎಸ್.ವೈ.ಎಸ್ ಕಿನ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್ ಸ್ವಾಗತಿಸಿದ ಸಭೆಯನ್ನು ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ನೌಫಲ್ ಅಹ್ಸನಿ ಉದ್ಘಾಟಿಸಿದರು, ಎಸ್.ವೈ.ಎಸ್ ಕಿನ್ಯ ಸೆಂಟರ್ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ‌್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ