janadhvani

Kannada Online News Paper

ಬದುಕು ಮರಣ ಸ್ಮರಣೆಯೊಂದಿಗಿರಲಿ- ಬಹ್ರೇನ್‌ನಲ್ಲಿ ಬಾಯಾರ್ ತಂಙಳ್

ಮನಾಮ: ಶಾಲಾ ಮಕ್ಕಳು ಮಾದಕ ವ್ಯಸನಿಗಳಾಗುತ್ತಿರುವ ಈ ಯುಗದಲ್ಲಿ ಪ್ರತಿಯೊಬ್ಬರು ಪ್ರವಾದಿ ﷺ ರವರ ಮೇಲೆ ಸಲಾತ್ ಹೆಚ್ಚಿಸುತ್ತಾ ಇಸ್ಲಾಮೀ ಆಚರಣೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬಾಯಾರ್ ತಂಙಳ್ ಹೇಳಿದರು.

ಮುಜಮ್ಮ‌ಅ್ ಸ್ಸಖಾಫತಿ ಸುನ್ನಿಯ್ಯ ಬಾಯಾರ್, ಬಹರೈನ್ ಸಮಿತಿಯ ಸ್ವಲಾತ್ ವಾರ್ಷಿಕ ಮತ್ತು ಆಧ್ಯಾತ್ಮಿಕ ಸಮ್ಮೇಳನದಲ್ಲಿ ತಂಙಳ್ ಮುಖ್ಯ ಭಾಷಣ ಮಾಡುತ್ತಿದ್ದರು.ಬಾಯಾರ್ ಮುಜಮ್ಮ‌ಅ್ ಬಹರೈನ್ ಸಮಿತಿ ಉಪಾಧ್ಯಕ್ಷ ಮಜೀದ್ ಸಅದಿ ಅಧ್ಯಕ್ಷತೆ ವಹಿಸಿದ್ದರು.ಐಸಿ ಎಫ್ ಬಹರೈನ್ ರಾಷ್ಟ್ರೀಯ ಅಧ್ಯಕ್ಷ ಝೈನುದ್ದೀನ್ ಸಖಾಫಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸೈಯದ್ ಬಾಫಕಿ ತಂಙಳ್, ಐ.ಸಿ.ಎಫ್. ಪ್ರಧಾನ ಕಾರ್ಯದರ್ಶಿ ಎಂ.ಸಿ. ಅಬ್ದುಲ್ ಕರೀಂ ಹಾಜಿ, ದಅವಾ ಅಧ್ಯಕ್ಷ ಅಬೂಬಕರ್ ಲತೀಫಿ, ಕೆಸಿಎಫ್ ಬಹರೈನ್ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ ಮತ್ತು ಆರ್‌ ಎಸ್ ಸಿ ಗಲ್ಫ್ ಕೌನ್ಸಿಲ್ ಕಾರ್ಯನಿರ್ವಾಹಕ ರಹೀಮ್ ಸಖಾಫಿ ವರವೂರು ಸ್ವಾಗತಿಸಿದರು. ICF, KCF, RSC ಸಂಘಟನೆಗಳ ಬಹರೈನ್ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಮತ್ತು ಇತರ ಪಧಾಧಿಕಾರಿಗಳು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಂದರ್ ಶರೀಫ್ ಎಂ.ಸಿ, ನೌಶಾದ್ ಮುಟ್ಟುಂತಲ ಸ್ವಾಗತಿಸಿ, ಅಬ್ದುಲ್ಲ ಪಯೋಟ ವಂದಿಸಿದರು.