ರಿಯಾದ್: ಸೌದಿ ಅರೇಬಿಯಾದಿಂದ ರಜೆಯ ಮೇಲೆ ಮನೆಗೆ ತೆರಳಿದವರು, ಅವಧಿಯೊಳಗೆ ಹಿಂತಿರುಗದಿದ್ದಲ್ಲಿ ಮೂರು ವರ್ಷಗಳವರೆಗೆ ದೇಶಕ್ಕೆ ಮರಳಲು ಸಾಧ್ಯವಿಲ್ಲ ಎಂದು ಪಾಸ್ಪೋರ್ಟ್ ಅಧಿಕಾರಿಗಳು ಪುನಃ ಎಚ್ಚರಿಸಿದ್ದಾರೆ.
ಎಕ್ಸಿಟ್ ರೀ-ಎಂಟ್ರಿ ವೀಸಾದಲ್ಲಿ ದೇಶವನ್ನು ತೊರೆದು ವೀಸಾ ಮುಕ್ತಾಯ ದಿನಾಂಕದ ನಂತರ ಹಿಂತಿರುಗದವರಿಗೆ ಮೂರು ವರ್ಷಗಳವರೆಗೆ ಸೌದಿ ಅರೇಬಿಯಾವನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ,ಹಳೆಯ ಪ್ರಾಯೋಜಕರ ಹೊಸ ವೀಸಾದೊಂದಿಗೆ ಹಿಂತಿರುಗಬಹುದು.
ಮೂರು ವರ್ಷಗಳ ಅವಧಿಯನ್ನು ಮರು-ಪ್ರವೇಶ ವೀಸಾದ ಮುಕ್ತಾಯ ದಿನಾಂಕದಿಂದ ಹಿಜ್ರಾ ಕ್ಯಾಲೆಂಡರ್ ಅನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಈ ನಿಯಮವು ಅವಲಂಬಿತ (ಕುಟುಂಬ) ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಅಂತಹ ವೀಸಾಗಳನ್ನು ಹೊಂದಿರುವವರು ರೀ-ಎಂಟ್ರಿ ವೀಸಾದಲ್ಲಿ ಮನೆಗೆ ತೆರಳಿ, ನಿಗದಿತ ಸಮಯದೊಳಗೆ ಹಿಂದಿರುಗದಿದ್ದರೂ ಮರು-ಪ್ರವೇಶಕ್ಕೆ ನಿರ್ಬಂಧವಿರುವುದಿಲ್ಲ. ಅಂತಹ ಜನರು ಅವಲಂಬಿತ ವೀಸಾ ಹೊಂದಿರುವವರನ್ನು ವ್ಯವಸ್ಥೆಯಿಂದ ತೆಗೆದುಹಾಕಲು ಅಬ್ಶಿರಿನ ತವಾಸುಲ್ ಸೇವೆಯನ್ನು ಬಳಸಬಹುದು ಎಂದು ಜವಾಝಾತ್ ಹೇಳಿದೆ.
ಮರು-ಪ್ರವೇಶದ ಮೇಲೆ ದೇಶಕ್ಕೆ ಹಿಂತಿರುಗದ ವಿದೇಶಿಯರನ್ನು ವೀಸಾ ಅವಧಿ ಮುಗಿದ ಎರಡು ತಿಂಗಳ ನಂತರ ಸ್ವಯಂಚಾಲಿತವಾಗಿ ಸಿಸ್ಟಮ್ನಿಂದ ತೆಗೆದುಹಾಕಲಾಗುತ್ತದೆ ಎಂದು ಜವಾಝಾತ್ ಹೇಳಿದೆ.
















ಇನ್ನಷ್ಟು ಸುದ್ದಿಗಳು
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು