ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗೋಡ್ಸೆ ಸಂತತಿಯವರಿಂದ ಮೋದಿ ನಾಮಜಪ ಮಾಡಿಸಿ, ನೋಟು ಅಮಾನ್ಯ, ಬ್ಯಾಂಕ್ ಖಾಸಗೀಕರಣ, ಸರಕಾರಿ ಸಂಸ್ಥೆಗಳ ಖಾಸಗೀಕರಣ, ಜಿಲ್ಲೆಯ ಕೇಂದ್ರ ಉದ್ಯಮಗಳಲ್ಲಿ ಉತ್ತರ ಭಾರತದವರ ನೇಮಕ, ವ್ಯವಸ್ಥಿತವಾಗಿ ಮುಸ್ಲಿಮರ ವಿರುದ್ದ ದ್ವೇಷ ಸಾಧನೆ, ಹಿಂದುಳಿದವರು, ದಲಿತರು, ಪರಿಶಿಷ್ಟರ ಮನಸಲ್ಲಿ ಮುಸ್ಲಿಮರನ್ನು ವೈರಿಯಂತೆ ಬಿಂಬನೆ, ಮುಸ್ಲಿಮೇತರರಲ್ಲಿ ಮುಸ್ಲೀಮರ ಬಗ್ಗೆ ಭಯ ಸೃಷ್ಟಿಸುವುದು ,ಇತ್ಯಾದಿ ನಂತರ, ಪ್ರಸ್ತುತ ಜಿಲ್ಲೆಯ ಭಯದ ಕಾವನ್ನು ಜೀವಂತ ಇರಿಸಲು, ಚಿತ್ಪಾವನ ಗೋಡ್ಸೆ ಸಂತತಿಯವರು, ಕೊಡಗಿನಲ್ಲಿ, ಬಿಲ್ಲವ ಮತ್ತು ಒಕ್ಕಲಿಗ, ಹಿಂದುಳಿದ ಜಾತಿ ಹುಡುಗರಿಗೆ ಮತ್ತು ಹುಡುಗಿಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದಾರೆ.
ಆ ಮೂಲಕ ಕೇಶವ ಕೃಪಾದಿಗಳು, ರಾಜ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ ಜನಾಂಗದ ಹುಡುಗ, ಹುಡುಗಿಯರನ್ನು, ಭಯೋತ್ಪಾದನೆ ಕೃತ್ಯಕ್ಕೆ ಬಳಸಿ, ಅವರನ್ನು ಸಮಾಜ ವಿರೋಧಿ ಸ್ಥಿತಿಗೆ ತರಲು ಸಂಪೂರ್ಣ ತಯಾರಿ ನಡೆಸಿದೆ. ಈಗಾಗಲೇ ಶೈಕ್ಷಣಿಕ ಪಠ್ಯದಿಂದ ಈ ನಾಡಿನ ಮಹಾ ಪುರುಷರ ಆದರ್ಶಗಳನ್ನು ತೆರವು ಗೊಳಿಸಿದ ಕೇಸರಿ ಆಡಳಿತ,ಮುಂದುವರಿದು, ಶೈಕ್ಷಣಿಕ ಸ್ಥಳಗಳಲ್ಲಿ, ಒಂದು ಸ್ವಾಭಿಮಾನಿ ಜನಾಂಗವಾದ ಬಿಲ್ಲವ ಮತ್ತು ಈಡಿಗ ಸಮುದಾಯದ ಹುಡುಗರನ್ನು ಇಂತಹ ದೇಶ ವಿರೋಧಿ ಕೃತ್ಯಕ್ಕೆ ಬಳಸಿ ರಾಜ್ಯಾದ್ಯಂತ ವಿದ್ವಂಸಕ ನಡೆಯನ್ನು ಸೃಷ್ಟಿಸಲು ತಯಾರಿ ನಡೆಸಿದೆ.
ಆ ಮೂಲಕ ಇಂತಹ ಹುಡುಗರನ್ನು ಮುಸ್ಲಿಮರು ಮತ್ತು ದಲಿತ ಸಮುದಾಯದ ವಿರುದ್ಧ ಛೂ ಬಿಟ್ಟು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರದಲ್ಲಿ ಶಾಶ್ವತವಾಗಿ ಇರಲು ಬಯಸಿದೆ. ಈ ಕೃತ್ಯದ ಹಿಂದೆ, ಆರ್ಯ ವೈದಿಕರು, ಬನಿಯಗಳು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಈ ವಿದ್ವಂಸಕ ತರಬೇತಿಗೆ ಪಕ್ಕದ ರಾಜ್ಯ ಕೇರಳದಿಂದ ತರಬೇತು ದಾರರನ್ನು ತರಿಸಲಾಗಿದೆ.
ಮುಖ್ಯ ವಾಹಿನಿಯಲ್ಲಿ ಬರಬೇಕಿದ್ದ ಈ ಸಮುದಾಯ ಇಂದು ಇಂತಹ ಕೃತ್ಯಕ್ಕೆ ಇಳಿದರೆ ಮುಂದೊಂದು ದಿನ ದ್ರಾವಿಡ ಜನತೆಯನ್ನು ನಕ್ಸಲ್ ಎಂದು ಬಿಂಬಿಸಿದಂತೆ, ಈ ಜನಾಂಗವನ್ನು ಬಿಂಬಿಸುವುದರಲ್ಲಿ ಸಂಶಯವಿಲ್ಲ. ಸ್ವಾಮಿ ನಾರಾಯಣ ಗುರುಗಳ ಅನುಯಾಯಿಗಳಾದ ಬಿಲ್ಲವ ಮತ್ತು ಈಡಿಗ ಸಮುದಾಯ ಪ್ರಸ್ತುತ ತನ್ನ ಅಸ್ತಿತ್ವ ಉಳಿಸುವ ಆಯ್ಕೆಯನ್ನೇ ಕಳೆದು ಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ನಿರಾಕರಣೆ, ಮಂಗಳೂರಿನ ವೃತ್ತಕೆ ತೋರಿಕೆಯ ನಾಮಕರಣ, ಶೈಕ್ಷಣಿಕ ಪಠ್ಯದಿಂದ ನಾರಾಯಣ ಗುರುಗಳ ಆದರ್ಶ ಪ್ರತಿಪಾದನೆಯ ಅಂಶಗಳನ್ನು ತೆರವು ಗೊಳಿಸಿದ ರಾಜ್ಯ ಸರಕಾರದ ನಡೆ ತೀವ್ರ ಖಂಡನೀಯ, ಈ ಬಗ್ಗೆ ಬಿಲ್ಲವ ಸಮುದಾಯದ ಹಾಲಿ ನಾಯಕರು ಎಚ್ಚೆತ್ತು ಕೊಂಡು ಜಾಗೃತರಾಗಿ ಪ್ರತಿ ಭಟಿಸುವುದು ಅತೀ ಅಗತ್ಯ. ಆಧುನಿಕ ಶತಕದಲ್ಲಿ ಜಗತ್ತಿಗೆ ಒಂದೇ ಕುಲ,ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ದ್ರಾವಿಡ ಬಿಲ್ಲವ ಕುಲ ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಆದರ್ಶ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ವಾಗಿದೆ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ