ಮಂಗಳೂರು :ಇತ್ತೀಚೆಗೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಯವರು ಚಾಮರಾಜ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪಾಕಿಸ್ತಾನಿಗಳು ಹುಟ್ಟಿ ಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿ, ಕೇರಳ, ಮಂಗಳೂರು ದೆಹಲಿಯು ಭಯೋತ್ಪಾದನೆ ಕೇಂದ್ರಗಳ ಮೂಲ ಎಂಬಿತ್ಯಾದಿಯಾಗಿ ಶಿಕ್ಷಣ ತವರು ಮಂಗಳೂರು ಅನ್ನು ನಿಂದಿಸಿದ್ದಾರೆ.
ಮತೀಯ ವಿದ್ವೇಶ ಸೃಷ್ಟಿಸುವ ಸರ್ವ ಸಲಕರಣೆಗಳು ತಮ್ಮ ಬತ್ತಳಿಕೆಯಲ್ಲಿ ಖಾಲಿಯಾದಾಗ, ಪರಿವಾರಗಳಿಗಿರುವ ಉಳಿಕೆಯ ಅಸ್ತ್ರ , ಪ್ರಾದೇಶಿಕ ಮತೀಯ ಅಲ್ಪ ಸಂಖ್ಯಾತರನ್ನು ವಿದೇಶಿ ದೇಶಗಳೊಂದಿಗೆ ಸಮೀಕರಿಸಿ, ಈಗಾಗಲೇ ಗುಲಾಮೀಕರಣ ಗೊಳಿಸಿರುವ ಹಿಂದುಳಿದ ವರ್ಗ, ದಲಿತರು ಮತ್ತು ಬುಡಕಟ್ಟು ಜನರು, ತಮ್ಮ ಆಡಳಿತ ವೈಫಲ್ಯ, ಬೆಲೆಯೇರಿಕೆ, ನಿರುದ್ಯೋಗ ಇತ್ಯಾದಿಗಳ ಬಗ್ಗೆ ರೊಚ್ಚಿಗೆ ಏಳದಿರಲಿ ಎಂದು ಅವರ ಒಟ್ಟಾರೆ ಗಮನವನ್ನು ಅನಿವಾರ್ಯವಾಗಿ ಬೇರೆಡೆ ತಿರುಗಿಸುವ ಷಡ್ಯಂತ್ರವಾಗಿದೆ ಕೃಪಾ ಪೋಷಿತ ಲಿಖಿತ ಹೇಳಿಕೆ.
ಆರ್ಯ ಸೃಷ್ಟಿ, ಮುಸ್ಲಿಮ್ ಡಿಫೆನ್ಸ್ ಫೋರ್ಸ್ ಎಂಬ ಸಾಮಾಜಿಕ ಜಾಲ ತಾಣದ ಮೂಲಕ ವಿದ್ವೇಶ ಪ್ರಚಾರಗೊಳಿಸಿ ಆ ಮೂಲಕ ಈಗಾಗಲೇ ಅಸ್ವಸ್ಥಗೊಂಡ ಮಂಗಳೂರಿನಲ್ಲಿ ‘ ಮುತಾಲಿಕ ‘ ನನ್ನು ರಂಗಕ್ಕಿಳಿಸಿ ಮತೀಯ ಗಲಭೆ ಸೃಷ್ಟಿಸುವ ಹುನ್ನಾರ ಆಗಿದೆ. ಈ ಷಡ್ಯಂತ್ರದ ಹಿಂದೆ ಆರ್ಯ ಶಕ್ತಿ ಶ್ರಮವಿದೆ.
ಈ ಜಿಲ್ಲೆಯ ಬಿಲ್ಲವರು,ದಲಿತರು,ಬುಡಕಟ್ಟು ಜನಾಂಗ,ಕ್ರೈಸ್ತರು,ಮುಸ್ಲಿಮರೆಲ್ಲರು ಈ ಆರ್ಯ,ಬನಿಯಾಗಳ ಮಾಹ ಷಡ್ಯಂತ್ರವನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಷ್ಠ ತನಿಖಾ ಸಂಸ್ಥೆಗಳು ಮತ್ತು ಸ್ವತಂತ್ರ ಮಾಧ್ಯಮಗಳು ಈ ‘ ಸಂಘಟನೆಯ ‘ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಈ ಸಂಘಟನೆಯಲ್ಲಿ ಬಳಕೆ ಆಗಿರುವ ‘ ಮುಸ್ಲಿಮ್ ‘ ಪದ ನಕಲಿಯೇ ಎಂದು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ