ದುಬೈ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ರನ್ ವೇಯನ್ನು ದುರಸ್ತಿಗಾಗಿ ಮುಂದಿನ ತಿಂಗಳು ಮುಚ್ಚಲಾಗುವುದು. ಮೇ 9 ರಿಂದ ಜೂನ್ 22 ರವರೆಗೆ 45 ದಿನಗಳ ಕಾಲ ದುರಸ್ತಿಗೆ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ, ಸಾವಿರಾರು ವಿಮಾನಗಳನ್ನು ದುಬೈನ ಎರಡನೇ ವಿಮಾನ ನಿಲ್ದಾಣವಾದ ದುಬೈ ವರ್ಲ್ಡ್ ಸೆಂಟ್ರಲ್‌ಗೆ ತಿರುಗಿಸಲಾಗುತ್ತದೆ.
ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರನ್‌ವೇ ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ ಎಂದು ದುಬೈ ವಿಮಾನ ನಿಲ್ದಾಣದ ಸಿಇಒ ಪಾಲ್ ಗ್ರಿಫಿತ್ಸ್ ಹೇಳಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೇವೆಗಳನ್ನು ದುಬೈ ವರ್ಲ್ಡ್ ಸೆಂಟ್ರಲ್‌ಗೆ ಸ್ಥಳಾಂತರಿಸಲಾಗುವುದು. ಈ ಕಾಲಾವಧಿಯಲ್ಲಿ ಪ್ರಯಾಣಿಕರು ತಮ್ಮ ಆಗಮನ ಮತ್ತು ನಿರ್ಗಮನ ವಿಮಾನ ನಿಲ್ದಾಣ ಯಾವುದು ಎಂಬುದನ್ನು ವಿಮಾನಯಾನ ಸಂಸ್ಥೆಗಳಿಂದ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.
ಹಬ್ಬದ ಸಂಭ್ರಮ ಮುಗಿದ ಬಳಿಕ ದುರಸ್ತಿ ಕಾರ್ಯ ಆರಂಭಿಸಿ ಬೇಸಿಗೆ ರಜೆಗೂ ಮುನ್ನ ಪೂರ್ಣಗೊಳಿಸುವ ಪ್ರಯತ್ನ ನಡೆಸಲಾಗಿದೆ. ಚಟುವಟಿಕೆಗಳಿಗೆ ತುಲನಾತ್ಮಕವಾಗಿ ಕಡಿಮೆ ಜನದಟ್ಟಣೆಯ ಸಮಯವನ್ನು ಆಯ್ಕೆ ಮಾಡಲಾಗಿದೆ. ಉತ್ತರ ರನ್‌ವೇ 2014 ರಲ್ಲಿ ಸುದೀರ್ಘ ದುರಸ್ತಿಗೆ ಒಳಗಾಗಿತ್ತು. 2019 ರಲ್ಲಿ ದಕ್ಷಿಣ ರನ್‌ವೇಯನ್ನು ಅದೇ ರೀತಿಯಲ್ಲಿ ಮುಚ್ಚಲಾಯಿತು ಮತ್ತು ದುರಸ್ತಿ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ