ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ರಾಷ್ಟೀಯ ಸಮಿತಿಯ ಮಹಾಸಭೆಯು ದಿನಾಂಕ 25/03/2022 ಶುಕ್ರವಾರ ಜುಮಾ ನಮಾಝಿನ ಬಳಿಕ ಬಹರೈನ್ ದಿ ಎಂ ಸೂಟ್ ಹಾಲ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ರವರ ಅಧ್ಯಕ್ಷತೆಯಲ್ಲಿ, ಅಂತರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ರವರ ದುಆ ದೊಂದಿಗೆ ಆರಂಭಗೊಂಡಿತು. ದರ್ವೇಶ್ ಮುಹಮ್ಮದ್ ಅಲಿ ರವರು ಕಾರ್ಯಕ್ರಮದಲ್ಲಿ ಖಿರಾಅತ್ ಪಾರಾಯಣ ಮಾಡಿದರು.

ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸ್ವಾಗತ ಭಾಷಣವನ್ನು ಮಾಡಿದ ಕಾರ್ಯಕ್ರಮವನ್ನು ಬಹು|ಅಲಿ ಮುಸ್ಲಿಯಾರ್ ರವರು ಉದ್ಘಾಟಿಸಿದರು.


2019-2022 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಸೂಫೀ ಪೈಂಬಚ್ಚಾಲ್ ರವರು ಮಂಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ರವರು ಕೆಸಿಎಫ್ ಕಳೆದ ಎಂಟು ವರ್ಷಗಳ ಕಾಲ ಮಾಡಿರುವ ಸಾಧನೆಗಳನ್ನು ವಿವರಿಸಿ, ಕೆಸಿಎಫ್ ಬಹರೈನಿನ ಉನ್ನತಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.


ನಂತರ 2019 -21 ನೇ ಸಾಲಿನ ಸಮಿತಿಯನ್ನು ಬರ್ಕಾಸ್ತುಗೊಳಿಸಿ, 2022-23 ನೇ ಸಾಲಿನ ಹೊಸ ಸಮಿತಿಯ ಪಧಾಧಿಕಾರಿಗಳನ್ನು ಅಂತರಾಷ್ಟ್ರೀಯ ಸಮಿತಿಯಿಂದ ರಿಟರ್ನಿಂಗ್ ಆಫೀಸರ್ ಆಗಿ ಬಂದ ಹಾಜಿ ಅಬೂಬಕ್ಕರ್ ರೈಸ್ಕೊರವರ ನೇತ್ರತ್ವದಲ್ಲಿ ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಜಮಾಲುದ್ದೀನ್ ವಿಟ್ಲ
ಪ್ರ.ಕಾರ್ಯದರ್ಶಿ: ಹಾರಿಸ್ ಸಂಪ್ಯ
ಕೋಶಾಧಿಕಾರಿ: ಸೂಫಿ ಪೈಂಬಚ್ಚಾಲ್
ಸಂಘಟನಾ ಇಲಾಖೆ
ಅಧ್ಯಕ್ಷರು: ಕಲಂದರ್ ಮುಸ್ಲಿಯಾರ್ ಕಕ್ಕೆಪದವು
ಕಾರ್ಯದರ್ಶಿ: ಮನ್ಸೂರ್ ಬೆಳ್ಮ
ಶಿಕ್ಷಣ ಇಲಾಖೆ
ಅಧ್ಯಕ್ಷರು: ಸಿದ್ದೀಕ್ ಉಸ್ತಾದ್
ಕಾರ್ಯದರ್ಶಿ: ಅಶ್ರಫ್ ರೆಂಜಾಡಿ
ಸಾಂತ್ವನ ಇಲಾಖೆ
ಅಧ್ಯಕ್ಷರು: ಹನೀಫ್ ಗುರುವಾಯನಕೆರೆ
ಕಾರ್ಯದರ್ಶಿ: ಅನ್ಸಾರ್ ಬಜ್ಪೆ
ಆಡಳಿತ ಇಲಾಖೆ
ಅಧ್ಯಕ್ಷರು: ಸವಾದ್ ಉಳ್ಳಾಲ್
ಕಾರ್ಯದರ್ಶಿ: ತೌಫೀಕ್ ಬೆಳ್ತಂಗಡಿ
ಇಹ್ಸಾನ್ ಇಲಾಖೆ
ಅಧ್ಯಕ್ಷರು: ಶಾಫಿ ಮಾದಾಪುರ
ಕಾರ್ಯದರ್ಶಿ: ಸಮದ್ ಉಜಿರೆಬೆಟ್ಟು
ಪಬ್ಲಿಕೇಷನ್ ಇಲಾಖೆ
ಅಧ್ಯಕ್ಷರು: ಲತೀಫ್ ಪೆರೋಲಿ
ಕಾರ್ಯದರ್ಶಿ: ಹನೀಫ್ ಕೀನ್ಯಾ
ಹಾಗೂ 22 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯ್ತು.


ಅಂತರಾಷ್ಟ್ರೀಯ ಸಮಿತಿ ಕೌನ್ಸಿಲರ್ ಗಳಾಗಿ ಅಲೀ ಮುಸ್ಲಿಯಾರ್, ಜಮಾಲುದ್ದೀನ್ ವಿಟ್ಲ, ಫಾರೂಕ್ ಎಸ್.ಎಂ, ಬಶೀರ್ ಕಾರ್ಲೆ, ಹಾರಿಸ್ ಸಂಪ್ಯ, ಸೂಫಿ ಪಯಂಬಚಾಲ್, ಕಲಂದರ್ ಮುಸ್ಲಿಯಾರ್ ಕಕ್ಕೆಪದವು ರವರನ್ನು ನೇಮಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅಲ್ ಖಾದಿಸ ಚೇರ್ಮಾನ್ ಹಝ್ರತ್ ಮುಹಮ್ಮದ್ ಪಾಝಿಲ್ ರಝ್ವಿ ಕಾವಲ್ಕಟ್ಟೆಯವರು ಕಾರ್ಯಕರ್ತರಿಗೆ ಹಿತೋಪದೇಶವನ್ನು ನೀಡಿದರು. ಅಂತರಾಷ್ಟ್ರೀಯ ಸಮಿತಿ ಕೌನ್ಸಿಲರ್ ಬಶೀರ್ ಕಾರ್ಲೆ ನೂತನ ಸಮಿತಿಗೆ ಶುಭವನ್ನುಕೋರಿದರು. ಸಂಘಟನಾ ಇಲಾಖೆಯ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ಕಕ್ಕೆಪದವು ನಿರೂಪಿಸಿದ ಕಾರ್ಯಕ್ರಮದಲ್ಲಿ ಪಬ್ಲಿಕೇಶನ್ ಇಲಾಖೆಯ ಅಧ್ಯಕ್ಷರಾದ ಲತೀಫ್ ಪೇರೋಲಿ ಧನ್ಯವಾದ ಹೇಳಿದರು.


















ಇನ್ನಷ್ಟು ಸುದ್ದಿಗಳು
ಮಕ್ಕಾದಲ್ಲಿ ಪೊಲೀಸರ ಮಿಂಚಿನ ದಾಳಿ: ನಕಲಿ ದಾಖಲೆ ತಯಾರಿಸುತ್ತಿದ್ದ 18 ಜನರ ತಂಡ ಬಂಧನ
ಸೌದಿ ಅರೇಬಿಯಾ: ವಾಹನಕ್ಕೆ ಆಕಸ್ಮಿಕ ಬೆಂಕಿ – ಯುವಕನಿಗೆ ದಾರುಣ ಅಂತ್ಯ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ