janadhvani

Kannada Online News Paper

ಹೈಕೋರ್ಟ್ ಹಿಜಾಬ್ ತೀರ್ಪು ಖೇದಕರ- ಎಸ್ಸೆಸ್ಸೆಫ್

ಪ್ರಾಯಪ್ರಬುದ್ಧಳಾದ ಮುಸ್ಲಿಂ ಹೆಣ್ಮಕ್ಕಳಿಗೆ ಹಿಜಾಬ್ ಕಡ್ಡಾಯವಾಗಿದ್ದು, ಸ್ವತಃ ಹೆಣ್ಮಕ್ಕಳು ಅದನ್ನು ಸ್ವಯಂಪ್ರೇರಣೆಯಿಂದ ಧರಿಸಲು ಬಯಸುತ್ತಿದ್ದಾರೆ.

ಶಿವಮೊಗ್ಗ : ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂಬ ನಿಲುವಿನೊಂದಿಗೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪು ಖೇದಕರ. ಅದು ಇಸ್ಲಾಮಿನ ಆಚಾರ ವಿಚಾರಗಳಿಗೆ ವಿರುದ್ದವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಪ್ರಾಯಪ್ರಬುದ್ಧಳಾದ ಮುಸ್ಲಿಂ ಹೆಣ್ಮಕ್ಕಳಿಗೆ ಹಿಜಾಬ್ ಕಡ್ಡಾಯವಾಗಿದ್ದು, ಸ್ವತಃ ಹೆಣ್ಮಕ್ಕಳು ಅದನ್ನು ಸ್ವಯಂಪ್ರೇರಣೆಯಿಂದ ಧರಿಸಲು ಬಯಸುತ್ತಿದ್ದಾರೆ. ಹಿಜಾಬ್ ಧರಿಸುವುದರಿಂದ ಇತರ ಯಾರಿಗೂ ಯಾವುದೇ ವಿಧದಲ್ಲಿ ತೊಂದರಯುಂಟು ಮಾಡುವುದಿಲ್ಲ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಪ್ರಕಟನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.