ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಹಿಜಾಬ್ ವಿವಾದವನ್ನು ರಾಜ್ಯದ ಹೈಕೋರ್ಟ್ ಸಂವಿಧಾನಬದ್ಧವಾಗಿ ಇತ್ಯರ್ಥಪಡಿಸುವ ಭರವಸೆ ಇದೆಯೆಂದು ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ರಾಜ್ಯಾಧ್ಯಕ್ಷ ಲತೀಫ್ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಿಜಾಬ್ ಎಂಬ ಶಿರವಸ್ತ್ರವನ್ನು ಯಾರದೋ ಸಡ್ಡಿಗೋ ಜಿದ್ದಿಗೋ ಧರಿಸಲು ಆರಂಭಿಸಿದ್ದಲ್ಲ. ಮುಸ್ಲಿಂ ಮಹಿಳೆಯರ ಧಾರ್ಮಿಕ-ಸಾಂಸ್ಕೃತಿಕ ಉಡುಗೆಯಾಗಿದೆ ಹಿಜಾಬ್. ಹಿಜಾಬ್ ನಿಂದ ಯಾವುದೇ ವಿಧದದಲ್ಲಿ ಕಲಿಕೆಗೆ ಅಡ್ಡಿಯೂ ಇಲ್ಲ. ಇತರರ ಧಾರ್ಮಿಕ ಉಡುಗೆ ತೊಡುಗೆಗಳಿಗೆ ಕಾಲೇಜುಗಳಲ್ಲಿ ಅವಕಾಶ ನೀಡುವುದಕ್ಕೂ ಮುಸ್ಲಿಂ ವಿದ್ಯಾರ್ಥಿನಿಯರಾರೂ ಆಕ್ಷೇಪವೂ ಎತ್ತಿಲ್ಲ. ಹಾಗಿರುವಾಗ ಹಿಜಾಬ್ ಗೆ ಅವಕಾಶ ಕೊಡುವ ಮೂಲಕ ಘನವೆತ್ತ ಸಂವಿಧಾನವು ನೀಡಿರುವ ಮೂಲಭೂತ ಹಕ್ಕನ್ನು ರಾಜ್ಯದ ಹೈಕೋರ್ಟ್ ಸಂರಕ್ಷಿಸುತ್ತದೆ ಎಂದು ಅವರು ಪತ್ರಿಕಾಪ್ರಕಟನೆಯಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ








Of course