ಸುರಿಬೈಲು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಸುರಿಬೈಲು ರೇಂಜ್ ಇದರ ಅಂಗವಾಗಿ ಕಾರ್ಯಾಚಿಸುತ್ತಿರುವ ಮಿಶನರಿ ವಿಭಾಗ ಗಣರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ ಬುರ್ದಾ ಸ್ಪರ್ಧೆ , ಪ್ರಬಂಧ ಸ್ಪರ್ಧೆ ಹಾಗು ಭಾರತದ ನಕ್ಷೆ ಬಿಡಿಸುವ ಸ್ಪರ್ದೆ ಗಳು ಸುನ್ನೀ ಮಹಲ್ ಕಯ್ಯೂರು ಸಂಸ್ಥೆಯಲ್ಲಿ ಜ.26 ರಂದು ನಡೆಯಿತು.
ರೇಂಜ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಖಾಫಿ ಮಂಚಿ, ಕೊಳ್ನಾಡು ರವರ ನೇತೃತ್ವದಲ್ಲಿ ಧ್ವಜಾರೋಹಣ ದೊಂದಿಗೆ ಆರಂಭಸಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ರಫೀಕ್ ಝುಹ್ರಿ ಮಂಚಿ ರವರು ಸ್ವಾಗತಿಸಿದ ಸಭೆಯನ್ನು ಸುನ್ನೀ ಮಹಲ್ ಸಾರಥಿ ಎಣ್ಮೂರು ಉಸ್ತಾದ್ ಉದ್ಘಾಟನೆ ಮಾಡಿದರು.

ನಂತರ 10 ತಂಡಗಳ ನಡುವೆ ಬುರ್ದಾ ಸ್ಪರ್ಧೆ ನಡೆಯಿತು.ನಂತರ SBS ವಿದ್ಯಾರ್ಥಿಗಳಿಗೆ ಅಕ್ಬರಲಿ ಮದನಿ ಮಂಚಿಬೈಲು ಉತ್ತಮ ಗುಣಮಟ್ಟದ ತರಗತಿ ನಡೆಸಿದರು.ಅಬ್ದಲ್ ಹಕೀಂ ಹನೀಫಿ ನಿಡಿಗಲ್ ನಿರೂಪಿಸಿ ಇಬ್ರಾಹಿಂ ಲತೀಫಿ ಮೋಂತಿಮಾರ್ ವಂದಿಸಿದರು.
ಬುರ್ದಾ ಸ್ಪರ್ಧೆ ಯ ಪ್ರಥಮ ಸ್ಥಾನ ಸುನ್ನೀ ಮಹಲ್ ಕಯ್ಯೂರು ಗಳಿಸಿದರೆ, ದ್ವಿತೀಯ ಸ್ಥಾನ ಸುರಿಬೈಲು ಮದರಸ ವಿದ್ಯಾರ್ಥಿಗಳು ಪಡೆದರು.ತೃತೀಯ ಮತ್ತು ಚತುರ್ಥ ಸ್ಥಾನವನ್ನು ನಿರ್ಬೈಲು ಹಾಗು ಮಂಚಿ ಕೊಳ್ನಾಡು ಮದ್ರಸ ತಮ್ಮದಾಗಿಸಿಕೊಂಡಿತು.

















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್