janadhvani

Kannada Online News Paper

ಎಸ್ ವೈ ಎಸ್ ಹಿರೆಬಂಡಾಡಿ ಬ್ರಾಂಚ್- ನೂತನ ಸಾರಥಿಗಳು

ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಹಿರೆಬಂಡಾಡಿ ಬ್ರಾಂಚ್ ಇದರ 2021-22 ನೇ ಸಾಲಿನ ಮಹಾಸಭೆಯು ದಿನಾಂಕ 28/12/2021 ನೇ ಮಂಗಳವಾರ ಮಗ್ರಿಬ್ ನಮಾಜಿನ ನಂತರ ಎಸ್ ವೈ ಎಸ್ ಉಪ್ಪಿನಂಗಡಿ ಬ್ರಾಂಚ್ ಅಧ್ಯಕ್ಷರಾದ ಜನಾಬ್ ಬದ್ರುದ್ದೀನ್ ಅಹ್ಸನಿ, ಅಲ್ ಕಾಮಿಲ್ ಇವರ ಘನ ಅಧ್ಯಕ್ಷತೆಯಲ್ಲಿ ಹಿರೆಬಂಡಾಡಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದುವಾ ಮಜ್ಲಿಸ್ ನೊಂದಿಗೆ ಹಾಜಿ ಕಾಸಿಂ ಮುಸ್ಲಿಯಾರ್ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಎಸ್ ವೈ ಎಸ್ ಹಿರೆಬಂಡಾಡಿ ಬ್ರಾಂಚ್ ನಡೆದು ಬಂದ ರೀತಿಯನ್ನು ಸಭೆಯಲ್ಲಿ ವಿವರಿಸಿದರು ಜೊತೆಗೆ ಚುಟುಕಾಗಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯದರ್ಶಿಗಳಾದ ಅಹ್ಮದ್ ಬಂಡಾಡಿ ಸವಿಸ್ತಾರವಾದ ಲೆಕ್ಕ ಪತ್ರಗಳನ್ನು ಮಂಡಿಸಿದರು.

2021- 22 ನೇ ಸಾಲಿನ ಸಾರಥಿಗಳು
ಅಧ್ಯಕ್ಷರು- ಬಿ.ಟಿ.ಎಂ ಅಬ್ದುಲ್ ಖಾದರ್
ಉಪಾಧ್ಯಕ್ಷರು-ಬಿ.ಎಸ್. ಇಲ್ಯಾಸ್ ಮದನಿ
ಪ್ರಧಾನ ಕಾರ್ಯದರ್ಶಿ-ಎ.ಎಚ್. ನಾಸಿರ್ ಮಾಸ್ತರ್.
ಸಂಘಟನಾ ಕಾರ್ಯದರ್ಶಿ- ಅಹ್ಮದ್ ಬಂಡಾಡಿ.
ಇಸಾಬ ಕಾರ್ಯದರ್ಶಿ- ಹನೀಫ್. ಕೆ
ಸಾಮಾಜಿಕ ಕಾರ್ಯದರ್ಶಿ-ಹನೀಫ್ ಪುತ್ತಿಲ
ಕೋಶಾಧಿಕಾರಿ -ಆದಂ ಎರ್ಪೆ.

ಕಾರ್ಯಕಾರಿ ಸದಸ್ಯರು: ಬಿ.ಟಿ. ಅಬ್ಬಾಸ್ ಮದನಿ, ಸಲೀಂ ಮುರ, ಕಾಸಿಂ ಮುಸ್ಲಿಯಾರ್,
ಹಸನಬ್ಬ ಎಂ.ಜಿ, ಪುತ್ತುಮೋನು ಬೆರೆಡೇಲು, ರಫೀಕ್ ಪಾಪ್ಯೂಲರ್, ಸುಲೈಮಾನ್ ಬಂಡಾಡಿ, ಬಿ.ಟಿ ಅಬೂಬಕ್ಕರ್, ಚೆರೆಮೋನು ಎಂ.ಜಿ, ಯಅಕೂಬ್ ಬೆರೆಡೇಲು, ಸುಲೈಮಾನ್ ಅಲ್ ಸಫಾ, ಬಶೀರ್ ಬಿ.ಟಿ, ಮತ್ತು ಸಲಹೆಗಾರರಾಗಿ ಹಾಜಿ ಬಿ.ಟಿ.ಎಂ ಮೊಹಮ್ಮದ್, ಹಾಜಿ ಇಸ್ಮಾಯಿಲ್ ಅಂಗಡಿ ಹಾಗೂ ಲೆಕ್ಕ ಪರಿಶೋಧಕರಾಗಿ ನೌಫಾಲ್ ಅಂಗಡಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಲೀಂ ಮುರ ಸ್ವಾಗತಿಸಿ, ಅಹ್ಮದ್ ಬಂಡಾಡಿ ಧನ್ಯವಾದಗೈದರು.