ಚಂಡೀಗಢ: ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಬಾಲಕಿಗೆ ತಾನು ಇಷ್ಟಪಡುವ ಹುಡುಗನನ್ನು ಮದುವೆಯಾಗುವ ಮುಕ್ತ ಸ್ವಾತಂತ್ರ್ಯ ಇದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ. ಕುಟುಂಬದವರ ವಿರೋಧದ ನಡುವೆಯೂ 33 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾದ 17 ವರ್ಷದ ಮುಸ್ಲಿಂ ಯುವತಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶಿಸಿದ ಕೋರ್ಟ್, ಇಂತಹದ್ದೊಂದು ತೀರ್ಪು ಪ್ರಕಟಿಸಿತು.
ಮುಸ್ಲಿಂ ವಿಧಿ ವಿಧಾನದ ಪ್ರಕಾರ ಮದುವೆಯಾಗಿರುವ ಈ ಜೋಡಿಗೆ ಹುಡುಗಿಯ ಮನೆಯವರಿಂದ ಬೆದರಿಕೆ ಎದುರಾಗಿತ್ತು. ರಕ್ಷಣೆ ಬಯಸಿ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ”ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಇವರ ಮದುವೆ ಸರಿಯಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯಾಗಲು ಬಯಸುವ ಹುಡುಗಿಗೆ 15 ವರ್ಷ ತುಂಬಿದ್ದರೆ ಸಾಕಾಗುತ್ತದೆ. 15ರ ಪ್ರಾಯವನ್ನು ಪ್ರೌಢಾವಸ್ಥೆ ಎಂದು ಮುಸ್ಲಿಂ ಕಾನೂನು ಗುರುತಿಸಿದೆ.
ಇಲ್ಲಿ ಹುಡುಗಿಗೆ 17 ವರ್ಷ ತುಂಬಿದೆ. ಇನ್ನು ಹುಡುಗನ ವಯಸ್ಸು ಕೂಡ ಪ್ರೌಢಾವಸ್ಥೆ ದಾಟಿದೆ. ಈ ಪ್ರಕರಣದಲ್ಲಿ ಮುಸ್ಲಿಂ ಕಾನೂನಿನ ಆಶಯಗಳು ಸಂಪೂರ್ಣ ಈಡೇರಿವೆ. ಇದಕ್ಕೆ ವಿರೋಧ ಮಾಡುವ ಯಾವುದೇ ಹಕ್ಕು ಮನೆಯವರಿಗೆ ಇಲ್ಲ. ತಮ್ಮ ಮರ್ಜಿ ಪಾಲನೆಯಾಗಿಲ್ಲ ಎನ್ನುವ ಕಾರಣ ಅವರು ವಿರೋಧ ಮಾಡುವುದನ್ನು ಕೋರ್ಟ್ ಒಪ್ಪುವುದಿಲ್ಲ,” ಎಂದು ನ್ಯಾಯಪೀಠ ಹೇಳಿತು.
ಮುಸ್ಲಿಂ ಬಾಲಕಿಯರು ಋತುಮತಿಯಾಗುತ್ತಲೇ ವಿವಾಹಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ. ಅವರಿಗೆ 18 ವರ್ಷ ತುಂಬಬೇಕು ಎನ್ನುವ ನಿಯಮ ಅನ್ವಯವಾಗುವುದಿಲ್ಲ ಎನ್ನುವ ಮಹತ್ವದ ತೀರ್ಪನ್ನು ಪಂಬಾಜ್ ಹಾಗೂ ಹರ್ಯಾಣ ಹೈ ಕೋರ್ಟ್ ಈ ಹಿಂದೆ ನೀಡಿತ್ತು. ಋತುಮತಿಯಾದ ಮುಸ್ಲಿ ಬಾಲಕಿಯರು, ತಮಗೆ 18 ವಯಸ್ಸು ತುಂಬುವುದಕ್ಕೆ ಮುಂಚೆ ವಿವಾಹವಾದರೆ ಆ ಮದುವೆ ಮುಸ್ಲಿಮ್ ವೈಯಕ್ತಿಕ ಕಾನೂನು (ಮಹಮ್ಮದನ್ ಲಾ) ಅಡಿ ಸಿಂಧುವಾಗಲಿದೆ ಎಂದು ಕೋರ್ಟ್, ಅರ್ಜಿಯೊಂದರ ವಿಚಾರಣೆ ಸಂದರ್ಭ ಹೇಳಿದೆ .
















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ