ಮಂಗಳೂರು: ಭಾರತದ ಪಶ್ಚಿಮ ಕರಾವಳಿಯ ಪ್ರಥಮ ಮಹಿಳಾ ಕಾಲೇಜು ಮತ್ತು ದೇಶದ ಮೊದಲ ಕ್ಯಾಥೋಲಿಕ್ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 100 ವರ್ಷ ಹಳೆಯದಾದ ಸೈಂಟ್ ಆಗ್ನೆಸ್ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಹುಡುಗರಿಗೂ ಕಾಲೇಜಿಗೆ ಪ್ರವೇಶ ನೀಡಲಿದೆ.
ಖಾಸಗಿ ಆಡಳಿತದ ಅಡಿಯಲ್ಲಿ 100 ವರ್ಷಗಳ ಅಸ್ತಿತ್ವ ಪೂರ್ಣಗೊಳಿಸಿರುವ ದೇಶದ ಪ್ರಥಮ ಕಾಲೇಜು ಕೂಡ ಆಗಿರುವ ಸೈಂಟ್ ಆಗ್ನೆಸ್, ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸಹ -ಶಿಕ್ಷಣ ಆರಂಭಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಧನಾತ್ಮಕ ಪ್ರತಿಕ್ರಿಯೆ
3ನೇ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಈ ವಿಷಯ ಮಂಡಿಸಲಾಯಿತು. ವಿಶ್ವವಿದ್ಯಾಲಯದ ಉಪ ಕುಲಪತಿ ಪಿ ಎಸ್ ಯಡಪಡಿತ್ತಾಯ ಮಾತನಾಡಿ, ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯ ಯಾವುದೇ ಆಕ್ಷೇಪ ಹೊಂದಿಲ್ಲ ಮತ್ತು ಕಾಲೇಜಿನ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಪರಿಗಣನೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಪೋಷಕರು, ಸಿಬ್ಬಂದಿ, ವಿದ್ಯಾರ್ಥಿನಿಯರು ಮತ್ತು ಹಳೆ ವಿದ್ಯಾರ್ಥಿಗಳಿಂದ ಧನಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದ ಬಳಿಕ ಹುಡುಗರನ್ನು ಸೇರಿಸಿಕೊಳ್ಳುವ ನಿರ್ಧಾರ ಮಾಡಲಾಗಿದೆ ಎಂದು ಕಾಲೇಜು ಹೇಳಿದೆ” ಎಂದು ಪಿ ಎಸ್ ಯಡಪಡಿತ್ತಾಯ ತಿಳಿಸಿದ್ದಾರೆ. ಸೈಂಟ್ ಆಗ್ನೇಸ್ ಕಾಲೇಜಿನ ದಾಖಲಾತಿ ಸಂಖ್ಯೆ ಕಡಿಮೆ ಆಗಿರುವುದರಿಂದ, ಕಾಲೇಜಿನಲ್ಲಿ ಸಹ -ಶಿಕ್ಷಣ ಆರಂಭಿಸುವಂತಹ ದೊಡ್ಡ ಕ್ರಮದ ನಿರ್ಧಾರಕ್ಕೆ ಮುಂದಾಗಲು, ಕಾಲೇಜಿನ ಒಬ್ಬ ಮಾಜಿ ಪ್ರಾಂಶುಪಾಲರು ಕಾರಣರಾಗಿದ್ದಾರೆ.
3 ವರ್ಷಗಳ ಹಿಂದೆ ಪ್ರಸ್ತಾವನೆ
“ಕೆಲವು ವರ್ಷಗಳಿಂದ ದಾಖಲಾತಿ ತುಂಬಾ ಕಡಿಮೆ ಇದೆ ಮತ್ತು ಕೆಲವು ಕೋರ್ಸ್‍ಗಳನ್ನು ಹೊರತುಪಡಿಸಿ, ಹೆಚ್ಚಿನ ಸೀಟುಗಳು ಖಾಲಿಯಾಗಿ ಉಳಿದಿವೆ. ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಒಂದು ಬದಲಾವಣೆ ತರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪ್ರಸ್ತಾವನೆಯನ್ನು 3 ವರ್ಷಗಳ ಹಿಂದೆ ಮಾಡಲಾಗಿತ್ತು ಮತ್ತು ಅಂತಿಮವಾಗಿ ಅದು ವಾಸ್ತವಕ್ಕೆ ಬದಲಾಗುತ್ತಿರುವುದನ್ನು ಕಂಡು ನನಗೆ ಖುಷಿ ಆಗಿದೆ” ಎಂದು ಆ ಕಾಲೇಜಿನ ಮಾಜಿ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.
1986ರಲ್ಲಿಹೆಣ್ಣು ಮಕ್ಕಳಿಗೆ ದಾಖಲಾತಿ
A+ NAAC ಗ್ರೇಡ್ ಹೊಂದಿರುವ ಸೇಂಟ್ ಆಗ್ನೇಸ್ ಸಂಸ್ಥೆ 15 ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿಯಲ್ಲಿ ಸಹ-ಶಿಕ್ಷಣ ಆರಂಭಿಸಿತ್ತು. 2007-2008ರಲ್ಲಿ ವಿಶ್ವ ವಿದ್ಯಾನಿಲಯದ ಅನುದಾನ ಆಯೋಗವು ಸ್ವಾಯತ್ತ ಸ್ಥಾನಮಾನ ನೀಡಿತ್ತು. ವಿಶೇಷವಾಗಿ ಹುಡುಗರಿಗೆಂದೇ ಆರಂಭಿಸಲಾಗಿದ್ದ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು 1986ರಲ್ಲಿ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ದಾಖಲಾತಿ ನೀಡಿತ್ತು ಮತ್ತು ಈ ವರ್ಷ ಅದು 35 ವರ್ಷಗಳನ್ನು ಪೂರೈಸುತ್ತಿದೆ.
ಪ್ರಥಮ ಬ್ಯಾಚಿನಲ್ಲಿ ಕೇವಲ 14 ಹುಡುಗಿಯರು
ಸೈಂಟ್ ಆಗ್ನೇಸ್ ಕಾಲೇಜು, ಸಹ- ಶಿಕ್ಷಣದ ಬಗ್ಗೆ ಪ್ರಸ್ತಾವನೆ ಕಳುಹಿಸಿರುವ ಕುರಿತು, ಆ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ವೆನೆಸ್ಸಾರನ್ನು ಕೇಳಿದಾಗ, “ ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟನೆ ಸಿಕ್ಕಿದ ಬಳಿಕವಷ್ಟೇ ನಾವು ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುತ್ತದೆ. ಪ್ರಸ್ತುತ ಅದು ಆರಂಭಿಕ ಹಂತದಲ್ಲಿ ಇದೆ” ಎಂದು ಉತ್ತರಿಸಿದ್ದಾರೆ. ಸೈಂಟ್ ಆಗ್ನೆಸ್ ಕಾಲೇಜು ಆರಂಭವಾದಾಗ, ಕಾಲೇಜಿನ ಪ್ರಥಮ ಬ್ಯಾಚಿನಲ್ಲಿ ಕೇವಲ 14 ಹುಡುಗಿಯರು ಮಾತ್ರ ಇದ್ದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ