ಸೌದಿ ಅರೇಬಿಯಾ: ಶಿವಮೊಗ್ಗ ಜಿಲ್ಲೆಯ ಸಾಗರದ ನಿವಾಸಿ ಮುಹೀಬುಲ್ಲಾ ಎಂಬವರು ದಮ್ಮಾಮ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ವರ್ಷ ಹಠಾತ್ ಕಾಣಿಸಿಕೊಂಡ ರೋಗವೊಂದು ಉಲ್ಬಣಗೊಂಡು ಕೋಮಾ ಸ್ಥಿತಿಗೆ ಜಾರಿದ್ದರು. ನಂತರ ಇವರನ್ನು ಕಿಂಗ್ ಫಹಾದ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ವಿದೇಶದಿಂದ ಇಂತಹ ರೋಗಿಯನ್ನು ತಾಯ್ನಾಡಿಗೆ ಮರಳಿ ಕಳುಹಿಸುವುದು ದೊಡ್ಡ ಸವಾಲಾಗಿದೆ.

ತೀರ್ಥಹಳ್ಳಿ ಮೂಲದ ನೂರ್ ಎಂಬವರು ಈ ವಿಚಾರವನ್ನು ಕೆ.ಸಿ.ಎಫ್ ಬಳಿ ಮುಹೀಬುಲ್ಲಾರನ್ನು ತಾಯ್ನಾಡಿಗೆ ಕಳುಹಿಸಿ ಕೊಡುವ ಬಗ್ಗೆ ಸಹಕಾರ ನೀಡುವಂತೆ ಕೇಳಿಕೊಂಡಾಗ ಕೆಸಿಎಫ್ ಸಾಂತ್ವನ ವಿಂಗ್ ನಾಯಕರಾದ ಭಾಷಾ ಗಂಗಾವಳಿ ಹಾಗೂ ಮುಹಮ್ಮದ್ ಮಲೆಬೆಟ್ಟು ರವರ ನೇತೃತ್ವದಲ್ಲಿ ಸಂಘಟನೆಯ ಇತರ ಸ್ವಯಂಸೇವಕರೊಂದಿಗೆ ಭೇಟಿ ನೀಡಿ ರೋಗಿಗೆ ಅವರ ಮೂಲಭೂತ ಅಗತ್ಯಗಳನ್ನು ಪೂರೈಸಿದೆ. ಕೆ.ಸಿ.ಎಫ್ ಜೊತೆಗೆ ಮಲನಾಡ್ ಗಲ್ಫ್ ಕಮೀಟಿ ಮುಖಂಡರಾಗಿರುವ ಅಬ್ದುಲ್ ಸತ್ತಾರ್ ಮತ್ತು ಅನ್ಸಾರ್ ಮತ್ತವರ ಸಂಗಡಿಗರು ಸಹಕಾರ ನೀಡಿರುತ್ತಾರೆ.

ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿಯೊಂದಿಗಿನ ನಿರಂತರ ಸಂಪರ್ಕದ ಪರಿಣಾಮವಾಗಿ ಡಿಸೆಂಬರ್ 02 ರಂದು ಕೆಸಿಎಫ್ ಮುಹಿಬ್ಬುಲ್ಲಾರವರನ್ನು ಮರಳಿಸುವ ಎಲ್ಲಾ ಕಡತಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಊರಿಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಯಿತು. ಕೇರಳದ ತಿರುವನಂತಪುರಂ ತಲುಪಿದ ಮುಹಿಬ್ಬುಲ್ಲಾರವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದ ‘ಸಹಾಯ್’ ತಂಡ ರೋಗಿಯನ್ನು ಆಂಬುಲನ್ಸ್ ಮುಖಾಂತರ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ತಲುಪಿಸಿತು. ಪ್ರಸ್ತುತ ಅವರು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಾನವೀಯ ಕಾರ್ಯಾಚರಣೆಯಲ್ಲಿ ಕೆಸಿಎಫ್ ಸಾಂತ್ವನ ವಿಭಾಗದೊಂದಿಗೆ ಬೆನ್ನೆಲುಬಾಗಿ ನಿಂತ ದಮ್ಮಾಮ್ ಝೋನ್ ಕ್ಯಾಬಿನೆಟ್ ಸಮಿತಿ ಮತ್ತು ಕಾರ್ಯಕಾರಿ ಸದಸ್ಯರಿಗೆ ಹಾಗೂ ಇತರೆ ಸಂಘ ಸಂಸ್ಥೆಗಳ ನಾಯಕರಿಗೆ ಕೆಸಿಎಫ್ ಕೃತಜ್ಞತೆ ಸಲ್ಲಿಸಿದೆ.
~ ಸಾಂತ್ವನ ವಿಭಾಗ ~
ಕರ್ನಾಟಕ ಕಲ್ಚರಲ್ ಫೌಂಡೇಶನ್ –
ಕೆಸಿಎಫ್ ದಮ್ಮಾಮ್ ಝೋನ್.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ