ರಿಯಾದ್: ಇಸ್ಲಾಮಿಕ್ ಸಂಘಟನೆಯಾದ ತಬ್ಲಿಘಿ ಜಮಾತ್ ಅನ್ನು ಸೌದಿ ಅರೇಬಿಯಾ ನಿಷೇಧಿಸಿದೆ. “ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ” ಎಂದು ಕರೆದಿರುವ ಈ ಗುಂಪನ್ನು ಕಾರ್ಯನಿರ್ವಹಿಸದಂತೆ ನಿಷೇಧಿಸಿದೆ.
ತಬ್ಲೀಗ್ ಜಮಾಅತ್ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಶುಕ್ರವಾರ ಮಸೀದಿಗಳಲ್ಲಿ ಧರ್ಮೋಪದೇಶವನ್ನು ನೀಡುವಂತೆ ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವರಾದ ಡಾ. ಅಬ್ದುಲ್ಲತೀಫ್ ಆಲ್-ಶೈಖ್ ಈ ಹಿಂದೆ ಸೂಚನೆ ನೀಡಿದ್ದರು.
ತಬ್ಲೀಗ್ ಗುಂಪಿನ ಚಟುವಟಿಕೆಗಳು, ಪ್ರವಾದಿವರ್ಯರ ಆದರ್ಶಕ್ಕೆ ವಿರುದ್ಧವೂ, ಸಮೂಹವನ್ನು ತಪ್ಪುದಾರಿಗೆಳೆಯುತ್ತಿರುವುದೂ, ಅಪಾಯಕಾರಿಯೂ ಆಗಿದೆ. ಇದು ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ ಎಂದು ಸಚಿವಾಲಯ ಹೇಳಿದೆ. ಇಂತಹ ಗುಂಪುಗಳೊಂದಿಗಿನ ಸಂಪರ್ಕವನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
1926 ರಲ್ಲಿ ಭಾರತದ ಮೇವಾತ್ ಪ್ರದೇಶದಲ್ಲಿ, ಮುಹಮ್ಮದ್ ಇಲ್ಯಾಸ್ ಅಲ್-ಕಂಧ್ಲಾವಿ ಎಂಬವರಿಂದ ಸ್ಥಾಪನೆಯಾದ ತಬ್ಲೀಘಿ ಜಮಾಅತ್, ನವೀನ ಸಿದ್ಧಾಂತಗಳ ಇಸ್ಲಾಮಿಕ್ ಮಿಷನರಿ ಚಳುವಳಿಯಾಗಿದೆ. ತನ್ನದ್ದು ಅಹ್ಲೇ ಹದೀಸ್ ಅಥವಾ ಸಲಫಿ ಆದರ್ಶವಾಗಿದೆ ಎಂದು ಅದರ ವಕ್ತಾರರು ವ್ಯಕ್ತಪಡಿಸಿದ್ದರು.
ಭಾರತ ಸಹಿತ ವಿಶ್ವಾದ್ಯಂತವಿರುವ ಸುನ್ನೀ ಉಲಮಾಗಳು ತಬ್ಲೀಗ್ ಜಮಾಅತ್ ನ್ನು ಆರಂಭದಿಂದಲೇ ವಿರೋಧಿಸುತ್ತಾ ಬಂದಿರುವುದು ಗಮನಾರ್ಹ.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ