janadhvani

Kannada Online News Paper

ಸುಬ್ಬಗುಳಿ ಮಸೀದಿಗೆ ರಿಯಾಝ್ ಪರಂಗಿಪೇಟೆ ಭೇಟಿ- ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯ

ಮಂಗಳೂರು: ಇಲ್ಲಿನ ಹೊರವಲಯದ ಬೋಳಿಯಾರ್ ಸುಬ್ಬಗುಳಿ ಎಂಬಲ್ಲಿ ಪ್ಯಾಶಿಷ್ಟ್ ಶಕ್ತಿಗಳಿಂದ ದಾಳಿಗೊಳಗಾದ ಮಸೀದಿಗೆ ಭೇಟಿ ನೀಡಿದ ಎಸ್.ಡಿ.ಪಿ.ಐ.ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ನೇತೃತ್ವದ ನಿಯೋಗವು ಅರೋಪಿಗಳಿಗೆ ಕಠಿಣ ಸೆಕ್ಷನ್ ಹಾಕಿ ಶಿಕ್ಷಿಸಬೇಕು ಇಲ್ಲದಿದ್ದರೆ ಎಸ್.ಡಿ.ಪಿ.ಐ.ಪಕ್ಷದ ವತಿಯಿಂದ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಜಮಾಅತ್ ಅಧ್ಯಕ್ಷರಾದ ಇಬ್ರಾಹಿಂ ಸುಬ್ಬಗುಳಿ, ಮಸೀದಿಯ ಖತೀಬರು ಮತ್ತು ಕ್ಷೇತ್ರದ ನಾಯಕರಾದ ಝಾಹಿದ್ ಮಲಾರ್,ಉಬೈದ್ ಅಮ್ಮೆಂಬಳ,ಅಶ್ರಫ್ ಮಂಚಿ,ಫಯಾಝ್ ದೊಡ್ಡಮನೆ,ಅಶ್ರಫ್ ಮೋನು ಬೋಳಿಯಾರ್, ಗ್ರಾಮ ಪಂಚಾಯತ್ ಸದಸ್ಯರಾದ ಹನೀಪ್ ರಂತಡ್ಕ ಗ್ರಾಮ ಸಮಿತಿ ಅಧ್ಯಕ್ಷರಾದ ಶರೀಫ್ ರಂತಡ್ಕ ಉಪಸ್ಥಿತರಿದ್ದರು.

ಇದನ್ನೂ ಓದಿರಿ...