ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಸುಳ್ಯ ಡಿವಿಷನ್ ಸಮಿತಿಯ ಅರ್ಧವಾರ್ಷಿಕ ಕೌನ್ಸಿಲ್ ‘ರಿವ್ಯೂ’ ಡಿವಿಷನ್ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್ರಿ ಕಲ್ಲುಗುಂಡಿಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5 ರವಿವಾರ, ಪೈಂಬೆಚ್ಚಾಲು ಎಚ್ಐ ಮದ್ರಸ ವಠಾರದಲ್ಲಿ ನಡೆಯಿತು.
ಅಧ್ಯಕ್ಷರ ಪ್ರಾರ್ಥನೆಯೊಂದಿಗೆ ಚಾಲನೆಗೊಂಡ ಸಭೆಯನ್ನು ಪೈಂಬೆಚ್ಚಾಲು ಜಮಾಅತ್ ಪ್ರ.ಕಾರ್ಯದರ್ಶಿ ಬಿ.ಎಂ.ಇಸ್ಮಾಯಿಲ್ ಸಖಾಫಿ ಉದ್ಘಾಟಿಸಿದರು.ಪ್ರ.ಕಾರ್ಯದರ್ಶಿ ಹಸೈನಾರ್ ನೆಕ್ಕಿಲ ಅರ್ಧವಾರ್ಷಿಕ ವರದಿ ಹಾಗು ಕೋಶಾಧಿಕಾರಿ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ಲೆಕ್ಕಪತ್ರ ಮಂಡಿಸಿದರು.
ಜಿಲ್ಲಾ ಪ್ರ.ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಸಂಘಟನಾ ತರಬೇತಿ ನೀಡಿದರು. ಡಿವಿಷನ್ ಡಿ.ಒ. ಶಫೀಖ್ ಮಾಸ್ಟರ್ ತಿಂಗಳಾಡಿ ಚರ್ಚಾ ಕಾರ್ಯಕ್ರಮಕ್ಕೆ ನಾಯಕತ್ವ ನೀಡಿದರು.
ಜಿಲ್ಲಾ ಅಧ್ಯಕ್ಷರಾದ ಜೆ.ಕೆ.ಇಬ್ರಾಹಿಂ ಅಮ್ಜದಿ, ಪೈಂಬೆಚ್ಚಾಲು ಜಮಾಅತ್ ಖತೀಬರಾದ ಅಬ್ದುಲ್ ನಾಸಿರ್ ಸುಖೈಫಿ, ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್, ಪೈಂಬಚ್ಚಾಲು, ಎಸ್ ವೈಎಸ್ ಅಧ್ಯಕ್ಷರಾದ ನ್ಯಾಯವಾದಿ ಮೂಸಾ ಪಿ.ಎಂ. ಮುಖ್ಯಾತಿಥಿಗಳಾಗಿ ಶುಭ ಹಾರೈಸಿದರು.

ಸಭೆಯಲ್ಲಿ ಜಿಲ್ಲಾ ನಾಯಕರಾದ ಹಕೀಂ ಕಳಂಜಬೈಲು, ಇಮ್ರಾನ್ ರೆಂಜಲಾಡಿ, ಶರೀಫ್ ಬೆಳ್ತಂಗಡಿ, ರಶೀದ್ ಮಾಸ್ಟರ್ ಮಡಂತ್ಯಾರ್, ಸಿದ್ದೀಖ್ ಗೂನಡ್ಕ ಗೌರವ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಕ್ಯೂಡಿ ಕಾರ್ಯದರ್ಶಿ ಸಿರಾಜುದ್ದೀನ್ ಹಿಮಮಿ ಕುಂಬಕ್ಕೋಡು ಸ್ವಾಗತಿಸಿ, ನೂತನ ಪ್ರ.ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ಧನ್ಯವಾದವಿತ್ತರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ