ಆ ಕಾರು ಇವರ ಹೆಸರಿನಲ್ಲಿ ನೊಂದಾವಣೆ ಆಗಿರುವುದರಿಂದ ಕಾನೂನಿನ ಮುಂದೆ ಇವರು ತಪ್ಪಿತಸ್ಥರಾಗುತ್ತಾರೆ.
ಮಾಲಿಕನು ಮಾಡಿದ ಈ ವಂಚನೆಯಿಂದಾಗಿ ಸರಿಸುಮಾರು 27,000 ರಿಯಾಲ್ (5 ಲಕ್ಷ ರೂಪಾಯಿ) ನಷ್ಟು ದಂಡ ಕಟ್ಟ ಬೇಕಾದ ಸನ್ನಿವೇಶ ಎದುರಾಗಿತ್ತು.ಹಲವರಲ್ಲಿ ಈ ವಿಷಯ ಪ್ರಸ್ತಾಪ ಮಾಡಿದರೂ ಏನೂ ಪ್ರಯೋಜನವಾಗಿಲ್ಲ.
ಕೊನೆಗೆ ಈ ವಿಷಯ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ರವರ ಗಮನಕ್ಕೆ ಬಂದು ಇದನ್ನು ಕೆಸಿಎಫ್ ದಮ್ಮಾಮ್ ಝೋನಲ್ ಅಧೀನದಲ್ಲಿರುವ ಕೆಸಿಎಫ್ ಜುಬೈಲ್ ಸೆಕ್ಟರ್ ನೇತಾರರಿಗೆ ತಿಳಿಸುತ್ತಾರೆ.
ನಂತರ ಮುಹಮ್ಮದ್ ಮಲೆಬೆಟ್ಟು, ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷ ಫೈಸಲ್ ಕೃಷ್ಣಾಪುರ, ಜುಬೈಲ್ ಸೆಕ್ಟರ್ ನೇತಾರಾದ ನೌಫಲ್ ಮುಲ್ಕಿ, ಅಬ್ದುಲ್ ರಹ್ಮಾನ್ ಕೆಮ್ಮಾರ ಹಾಗೂ ಜುಬೈಲ್ ನಲ್ಲಿರುವ ಕೆಸಿಎಫ್ ಹಿತೈಷಿಗಳಾದ ಇಬ್ರಾಹಿಮ್ ಬಜ್ಪೆ (ಇಬ್ಬ) ರವರು ಈ ವಿಷಯವಾಗಿ ಜುಬೈಲ್ ನಲ್ಲಿ ಇರುವ ದಾನಿಗಳನ್ನು ಭೇಟಿಯಾಗಿ ಇದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿದರು.ಬಳಿಕ ಮುಹಮ್ಮದ್ ಮಲೆಬೆಟ್ಟು ರವರ ನೇತ್ರತ್ವದಲ್ಲಿ ಅಗತ್ಯ ದಾಖಲೆಗಳನ್ನೆಲ್ಲಾ ಸರಿಪಡಿಸಿ ಅವರ ಮೇಲೆ ಮಾಡಲಾಗಿದ್ದ ಆರೋಪದಿಂದ ಅವರನ್ನು ಮುಕ್ತಗೊಳಿಸಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ನೇತಾರರು, ದಮ್ಮಾಮ್ ಝೋನಲ್ ಸಾಂತ್ವನ ಇಲಾಖೆಯ ಅಧ್ಯಕ್ಷ ಬಾಷಾ ಗಂಗಾವಳಿ ಸಹಿತ ಇತರ ನೇತಾರರು, ಜುಬೈಲ್ ಸೆಕ್ಟರ್ ನೇತಾರರು ಹಾಗೂ ದಾನಿಗಳ ಸಹಾಯದ ಕಾರಣದಿಂದಾಗಿ ಅಬ್ದುಲ್ ರಝ್ಝಾಕ್ ರವರು ಆಗಸ್ಟ್ 04ರಂದು ಬೆಳಿಗ್ಗೆ ಊರಿಗೆ ತಲುಪಿದ್ದಾರೆ. ಈ ಮಹತ್ಕಾರ್ಯಕ್ಕೆ ನೆರವಾದ ಎಲ್ಲರಿಗೂ ಕೆ,ಸಿ.ಎಫ್ ರಾಷ್ಟ್ರೀಯ ಸಮಿತಿ ಅಬಿನಂಧನೆ ಸಲ್ಲಿಸಿದೆ.
















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ