janadhvani

Kannada Online News Paper

ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರಿಂದ ಪೇರಿಮಾರ್ ಯುನಿಟ್ ಸಂದರ್ಶನ

ಪುದು: ಉತ್ತರ ಕರ್ನಾಟಕದ ಗದಗ ಜಿಲ್ಲೆಯ ದೂದು ನಾನಾ ದರ್ಗಾ ವಠಾರದಲ್ಲಿ ‘ಇಂತಿಝಾಂ’ ಎಂಬ ಹೆಸರಿನಲ್ಲಿ ನಡೆಯಲಿರುವ ರಾಜ್ಯ ಪ್ರತಿನಿಧಿ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ, ಇತ್ತೀಚೆಗೆ ಉದ್ಘಾಟನೆಗೊಂಡ SYS- SSF ಪೇರಿಮಾರ್ ಕಛೇರಿಗೆ SSF ರಾಷ್ಟ್ರ ನಾಯಕರು ಭೇಟಿ ನೀಡಿದರು.

ನಾಯಕರಾದ ಡಾ:ಫಾರೂಕ್ ನಈಮಿ ಕೊಲ್ಲಂ (ಅಧ್ಯಕ್ಷರು ಎಸ್ ಎಸ್ ಎಫ್ ರಾಷ್ಟ್ರೀಯ ಸಮಿತಿ ), ಉಬೈದುಲ್ಲಾ ಸಖಾಫಿ ( ಉಪಾಧ್ಯಕ್ಷರು ಎಸ್ ಎಸ್ ಎಫ್ ರಾಷ್ಟ್ರೀಯ ಸಮಿತಿ ), ಶರೀಫ್ ನಿಝಾಮಿ ಕೇರಳ ( ಕಾರ್ಯದರ್ಶಿ ಎಸ್. ಎಸ್. ಎಫ್ ರಾಷ್ಟ್ರೀಯ ಸಮಿತಿ), ಸುಫಿಯಾನ್ ಸಖಾಫಿ ಕಾವಳಕಟ್ಟೆ (ಕೋಶಾಧಿಕಾರಿ SSF ಕರ್ನಾಟಕ), ಸಿದ್ದೀಕ್ ಸಖಾಫಿ ಬಾಜಾರ್ (ಜನರಲ್ ಮ್ಯಾನೇಜರ್ ಮಸ್ದರ್ ಎಜ್ಯು& ಚಾರಿಟಿ), ಮತ್ತಿತರ ನಾಯಕರು ಜೊತೆಗಿದ್ದರು.

ಸಂದರ್ಭದಲ್ಲಿ ಎಸ್. ಜೆ. ಎಂ. ಬಂಟ್ವಾಳ ಝೋನ್ ಕಾರ್ಯದರ್ಶಿ ರಫೀಕ್ ಸಅದಿ ಅಲ್ ಅಫ್ಳಲಿ, ಗದಗ್ ಮಿಶನ್ ಪ್ರೊಮೋಶನ್ ಕೌನ್ಸಿಲ್( GPC) ಗ್ಲೋಬಲ್ ಇದರ ಕೋಶಾಧಿಕಾರಿ ಹನೀಫ್ ಇಂಜಿನಿಯರ್ ಫ್ರಾನ್ಸ್ , SSF ಪೇರಿಮಾರ್ ಯುನಿಟ್ ಪ್ರಧಾನ ಕಾರ್ಯದರ್ಶಿ ಉನೈಸ್ ಪೇರಿಮಾರ್,ಪಬ್ಲಿಕೇಶನ್ ಕಾರ್ಯದರ್ಶಿ ಅಮೀನ್ ಮಾಲಿಕ್, ಸದಸ್ಯರಾದ ಅಬ್ದುಲ್ ಸಮದ್, ತಬ್ಶೀರ್ ಹನೀಫಿ,ಹುಸೈನ್.ಬಿ (ಉಪಾಧ್ಯಕ್ಷರು ಮಸ್ಜಿದುಲ್ ಖಿಳರ್ ಪೇರಿಮಾರ್ ) ಪುದು ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ಮುಂತಾದವರು ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವುದರೊಂದಿಗೆ ಕಛೇರಿಗೆ ಬರಮಾಡಿಕೊಂಡರು.

error: Content is protected !! Not allowed copy content from janadhvani.com