ಪ್ರತಿಷ್ಠಿತ ಮಹಿಳಾ ವಿದ್ಯಾ ಕೇಂದ್ರ ಪುತ್ತೂರು, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ನೂತನ ಸಾಲಿನ ಅಧ್ಯಕ್ಷರಾಗಿ ಸಯ್ಯಿದ್ ಇಸ್ಮಾಯಿಲ್ ಹಾದಿ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಪುನರಾಯ್ಕೆಯಾಗಿದ್ದು ನೂತನ ಕೋಶಾಧಿಕಾರಿಯಾಗಿ ಹಾಜಿ ಸಿ. ಅಬ್ದುಲ್ ಕರೀಂ ಚೆನ್ನಾರ್ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಮುಖ್ಯ ಪೋಷಕರಾದ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಅಧ್ಯಕ್ಷತೆಯಲ್ಲಿ ಕಾರಂದೂರು ಮರ್ಕಝ್ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು,
ಕಾರ್ಯಾಧ್ಯಕ್ಷರಾಗಿ ಹಾಜಿ ಪಿ.ಎಂ.ಅಬ್ದುಲ್ ರಹ್ಮಾನ್ ಅರಿಯಡ್ಕ, ಉಪಾಧ್ಯಕ್ಷರಾಗಿ ಹಾಜಿ ಕೆ.ಎಸ್. ಅಬೂಬಕರ್ ಸಅದಿ ಮಜೂರು, ಸಹ ಕಾರ್ಯದರ್ಶಿಯಾಗಿ ಮುಹಮ್ಮದ್ ಬಶೀರ್ ಇಂದ್ರಾಜೆ, ಆಡಳಿತಾಧಿಕಾರಿಯಾಗಿ ಬಿ.ಕೆ.ರಶೀದ್ ಸಂಪ್ಯ,ಲೆಕ್ಕ ಪರಿಶೋಧಕರಾಗಿ ಹಾಜಿ ಜಿ.ಎಂ.ಅನ್ವರ್ ಹುಸೈನ್ ಗೂಡಿನಬಳಿ.ಹಾಗೂ ಸಂಸ್ಥೆಯ ಇಪ್ಪತ್ತೈದನೆಯ ವಾರ್ಷಿಕದ ಸಿಧ್ದತೆಯ ಭಾಗವಾಗಿ ಮುಂದಿನ ಐದು ವರ್ಷಗಳ ಕಾಲ ‘ಸಿಲ್ವರಿಯಂ’ ಎಂಬ ಹೆಸರಿನಲ್ಲಿ ಅಭಿಯಾನ ನಡೆಯಲಿದ್ದು, ಅದರ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಪ್ರಧಾನ ಸಂಚಾಲಕರಾಗಿ ಮುಹಮ್ಮದ್ ಇಖ್ಬಾಲ್ ಬಪ್ಪಳಿಗೆ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಸುಳ್ಯ ಅವರನ್ನು ಆರಿಸಲಾಗಿದೆ.
ಸಂಸ್ಥೆಗೆ ಶಿಲಾನ್ಯಾಸ ನಡೆದ ಜನವರಿ ಇಪ್ಪತ್ತಾರನೇ ದಿನವನ್ನು ಫೌಂಡೇಶನ್ ಡೇಯಾಗಿ ಆಚರಿಸುವಂತೆ, ಸಂಸ್ಥೆಯ ಉದ್ಘಾಟನೆ ನಡೆದ ಆಗಸ್ಟ್ ಇಪ್ಪತ್ತನ್ನು ಎಜುಕೇಶನ್ ಡೇಯಾಗಿ ಆಚರಿಸಲು ನಿರ್ಧರಿಸಲಾಯಿತು. ಇದೇ ಆಗಸ್ಟ್ ಇಪ್ಪತ್ತರಂದು ಪ್ರಥಮ ‘ಎಜುಕೇಶನ್ ಡೇ’ ಜತೆಗೆ ‘ಸಿಲ್ವರಿಯಂ’ ಅಭಿಯಾನದ ಉದ್ಘಾಟನೆ ನಡೆಯಲಿರುವುದು.
ಸಿಲ್ವರಿಯಂ ಅಭಿಯಾನದ ಅಂಗವಾಗಿ ಮುಂದಿನ ವರ್ಷ ಗರ್ಲ್ಸ್ ಹೈಸ್ಕೂಲ್ ಸೇರಿದಂತೆ
ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎಜುಕೇಶನ್ ದಿನದ ಪ್ರಯುಕ್ತ ‘ಮಾಹಿರಾ’ ಪದವೀಧರರಿಗಾಗಿ ಪ್ರಬಂಧ ಸ್ಪರ್ಧೆ ನಡೆಸಲಾಗುವುದು.ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನೀ ಸ್ವಾಗತಿಸಿ ಕೋಶಾಧಿಕಾರಿ ಕರೀಂ ಹಾಜಿ ಚೆನ್ನಾರ್ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ