ಕುವೈತ್ ಸಿಟಿ: ಕುವೈತ್ನಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ, ಪದವಿ ಇಲ್ಲದ ವಿದೇಶಿಯರಿಗೆ ಕಠಿಣ ಷರತ್ತುಗಳೊಂದಿಗೆ ಇಕಾಮಾವನ್ನು ನವೀಕರಿಸಲಾಗುವುದು. ವಾರ್ಷಿಕ 2,000 ದಿನಾರ್ ಶುಲ್ಕ ಮತ್ತು ಆರೋಗ್ಯ ವಿಮಾ ರಕ್ಷಣೆಯೊಂದಿಗೆ ನಿವಾಸ ಪರವಾನಗಿಯನ್ನು ನವೀಕರಿಸಲು ತೀರ್ಮಾನಿಸಲಾಗಿದೆ.
60 ವರ್ಷ ದಾಟಿದ ಪದವಿ ಇಲ್ಲದ ವಿದೇಶಿಯರು ವಾರ್ಷಿಕ 2,000 ದಿನಾರ್ ಶುಲ್ಕ ಪಾವತಿಸಿ ಕೆಲಸದ ಪರವಾನಗಿಯನ್ನು ನವೀಕರಿಸಲು ಮಾನವಶಕ್ತಿ ಪ್ರಾಧಿಕಾರದ ನಿರ್ದೇಶಕರ ಮಂಡಳಿಯು ಅನುಮೋದಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇಕಾಮಾವನ್ನು ನವೀಕರಿಸುವಾಗ ಆರೋಗ್ಯ ವಿಮೆಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಿದೆ.ವಿಮಾ ಪ್ರೀಮಿಯಂ ಕುರಿತು ಮಾಹಿತಿ ಲಭ್ಯವಿಲ್ಲ.
ಕಳೆದ ಜನವರಿಯಲ್ಲಿ, ಮಾನವಶಕ್ತಿ ಪ್ರಾಧಿಕಾರವು ಕೌಶಲ್ಯರಹಿತ ಕಾರ್ಮಿಕರನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಜನಸಂಖ್ಯಾ ಸಮತೋಲನವನ್ನು ಸಾಧಿಸುವ ಉದ್ದೇಶದಿಂದ ವಯಸ್ಸಿನ ಮಿತಿಯನ್ನು ಜಾರಿಗೆ ತಂದಿದೆ. ಈ ನಿಯಮದಿಂದಾಗಿ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ ಎಂದು ಉದ್ಯಮಿಗಳು ದೂರಿದ ಕಾರಣ, ಷರತ್ತುಗಳೊಂದಿಗೆ ಇಖಾಮಾ ನವೀಕರಿಸಬಹುದು ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ.
ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕುವೈತ್ ಸಂಪುಟ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಿಗೆ ಸೂಚನೆ ನೀಡಿತ್ತು.ಸಚಿವರ ಶಿಫಾರಸನ್ನು ಆಧರಿಸಿ ಮಾನವಶಕ್ತಿ ಪ್ರಾಧಿಕಾರವು ಈ ನಿರ್ಧಾರಕ್ಕೆ ಬಂದಿದೆ.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ