ಬಂಟ್ವಾಳ, ನ.9:ದಾರುಲ್ ಮುಸ್ತಫಾ ಮೋರಲ್ ಅಖಾಡಮಿ ನಚ್ಚಬೆಟ್ಟು ಇದರ ವತಿಯಿಂದ ಎಮ್ ಮೀಡಿಯಾ ಡಿಜಿಟಲ್ ಸ್ಟುಡಿಯೋ ಉದ್ಘಾಟನೆ ಹಾಗೂ ತೋಕೆ ಉಸ್ತಾದರು ರಚಿಸಿದ ಅತ್ತಫ್ ಹೀಂ ಲಿ ಮಸಾಇಲಿತ್ತಹ್ಕೀಂ ಎಂಬ ಅರಬಿಕ್ ಗ್ರಂಥ ಬಿಡುಗಡೆ ಕಾರ್ಯಕ್ರಮ ಸಂಸ್ಥೆಯ ಮುಖ್ಯಸ್ಥ ಟಿ.ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಮ್ ಮೀಡಿಯಾ ಡಿಜಿಟಲ್ ಸ್ಟೂಡಿಯೋ ಇದನ್ನು ಉದ್ಘಾಟಿಸಿ ಅಸ್ಸಯ್ಯಿದ್ ಶಿಹಾಬುದ್ದೀನ್ ಮಶ್ ಹೂರ್ ತಂಙಳ್ ತಲಕ್ಕಿ ಮಾತನಾಡಿದರು.
ದಾರುಲ್ ಮುಸ್ತಫಾ ಸಂಸ್ಥೆಯು ಹೊಸತಾಗಿ ಪ್ರಾರಂಭಿಸಿದ ಎಮ್ ಮೀಡಿಯಾ ಮೂಲಕ ದೈನಂದಿನವಾಗಿ ಇಸ್ಲಾಮಿಕ್ ಆದರ್ಶ ಪಸರಣೆ,ಆರೋಗ್ಯಕರ ಚರ್ಚೆ, ಮುಖಾಮುಖಿ, ಆದರ್ಶ ಸಂವಾದ ಮುಂತಾದವುಗಳು ನಡೆಯಲಿದೆ ಎಂದು ಸಂಸ್ಥೆಯ ಸಾರಥಿ ತೋಕೆ ಉಸ್ತಾದ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ ಸಖಾಫಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ/ಎಮ್ಮೆಸ್ಸೆಮ್ ಝೈನಿ ಕಾಮಿಲ್, ಉಮರ್ ಸಖಾಫಿ ಕಂಬಳಬೆಟ್ಟು, ಅಶ್ರಫ್ ಕಿನಾರ ಮುಂತಾದವರು ಮಾತನಾಡಿ ಶುಭ ಹಾರೈಸಿದರು. ತೋಕೆ ಉಸ್ತಾದರು ರಚಿಸಿದ ಅತ್ತಫ್ ಹೀಂ ಲಿ ಮಸಾಇಲಿತ್ತಹ್ಕೀಂ ಎಂಬ ಅರಬಿಕ್ ಗ್ರಂಥ ವನ್ನು ಅಸ್ಸಯ್ಯಿದ್ ಶಿಹಾಬುದ್ದೀನ್ ಮಶ್ ಹೂರ್ ತಂಙಳ್ ತಲಕ್ಕಿ ಬಿಡುಗಡೆ ಮಾಡಿದರು.

ಇದೇ ಸಂಧರ್ಭ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನಿಯ್ಯ ಅರಬಿಕ್ ಕಾಲೇಜಿನಲ್ಲಿ ಕಳೆದ ವರ್ಷ ಕಲಿತು ಪಾಸ್ ಆದ ವಿದ್ಯಾರ್ಥಿಗಳಿಗೆ “ಸುಲ್ತಾನಿ” ಎಂದು ಬಿರುದು ನೀಡುವುದಾಗಿ ಘೋಷಣೆ ಮಾಡಲಾಯಿತು. ಕಾರ್ಯಕ್ರಮವನ್ನು ಬಶೀರ್ ಅಹ್ಸನಿ ತೋಡಾರ್ ಸ್ವಾಗತಿಸಿ, ಮಹ್ ರೂಫ್ ಆತೂರು ವಂದಿಸಿದರು
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್