ಮಂಗಳೂರು: ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯ ಪ್ರಧಾನ ಕಾರ್ಯದರ್ಶಿ, ದಾರುಲ್ ಇರ್ಷಾದ್ ವಿದ್ಯಾ ಸಮುಚ್ಚಯದ ರೂವಾರಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಉಡುಪಿ ಜಿಲ್ಲಾ ಸಂಯುಕ್ತ ಖಾಝಿಯಾಗಿ ಆಯ್ಕೆಯಾಗಿರುವುದು ಅತ್ಯಂತ ಸಂತಸದ ವಿಚಾರ.
ಝೈನುಲ್ ಉಲಮಾ ಎಂಬ ಗೌರವ ನಾಮಕ್ಕೆ ಅನ್ವರ್ಥವಾದ ಅವರ ಅಗಾಧ ಪಾಂಡಿತ್ಯ ಹಾಗೂ ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವದ ಶೈಖುನಾರವರ ಅರ್ಹತೆಗೆ ಸಂದ ಗೌರವ.
ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಸಮಕಾಲೀನ ಸಹಪಾಠಿಯಾಗಿ, ತಾಜುಲ್ ಉಲಮಾರವರ ಆಪ್ತ ಶಿಷ್ಯರಾಗಿ, ನಾಡಿನಾದ್ಯಂತ ನೂರಾರು ಉಲಮಾಗಳ ಗುರುವರ್ಯರಾಗಿರುವ ವಿದ್ವತ್ ಲೋಕದ ಸೌಂದರ್ಯ ಶೈಖುನಾ ಮಾಣಿ ಉಸ್ತಾದ್ ಜಿಲ್ಲಾ ಸಂಯುಕ್ತ ಖಾಝಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದು ಸುನ್ನೀ ಸಾಮ್ರಾಜ್ಯದ ಅಭಿಮಾನವಾಗಿದೆ.
ಪವಿತ್ರ ಇಸ್ಲಾಮಿನ ತತ್ವ ಸಿದ್ಧಾಂತಗಳ ಅಜೇಯ ಪರಂಪರೆಗೆ ಧೀರೋದಾತ್ತ ನಾಯಕತ್ವ ನೀಡಿ ಮುನ್ನಡೆಸಲು ಅಲ್ಲಾಹು ಅನುಗ್ರಹಿಸಲಿ ಆಮೀನ್.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿಯ ಸರ್ವವಿಧ ಗೌರವಾದರಗಳನ್ನು ಸಮರ್ಪಿಸುತ್ತಾ.
ಆತೂರು ಸಅದ್ ಮುಸ್ಲಿಯಾರ್
ಅಧ್ಯಕ್ಷರು SJM ಕರ್ನಾಟಕ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ