ಕೊಯಂಬತ್ತೂರ್:ಬಿಜೆಪಿ ಮುಖಂಡನೋರ್ವ ಸೇಲಂನಲ್ಲಿ ‘ಮೋದಿ ಇಡ್ಲಿ’ ಮಾರಾಟಕ್ಕೆ ಮುಂದಾಗಿದ್ದಾರೆ. ಇಡ್ಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಇಟ್ಟಿರುವ ಅವರು, 10 ರೂಪಾಯಿಗೆ 4 ಇಡ್ಲಿ ನೀಡುವುದಾಗಿ ತಿಳಿಸಿದ್ದಾರೆ.
ಇದು ತಮಿಳುನಾಡಿನ ಬಿಜೆಪಿ ಪ್ರಚಾರ ಘಟಕದ ಉಪಾಧ್ಯಕ್ಷ ಮಹೇಶ್ ಅವರ ಯೋಜನೆಯಾಗಿದ್ದು, ಮೋದಿ ಇಡ್ಲಿ ಸಂಬಂಧಪಟ್ಟ ಪೋಸ್ಟರ್ಗಳು ಸೇಲಂನಲ್ಲಿ ಎಲ್ಲ ಕಡೆ ರಾರಾಜಿಸುತ್ತಿವೆ. ಪೋಸ್ಟರ್ನಲ್ಲಿ ಎಡಗಡೆ ಪ್ರಧಾನಿ ಮೋದಿಯವರ ಫೋಟೋ ಇದೆ..ಬಲಗಡೆ ಮಹೇಶ್ ಚಿತ್ರವಿದೆ. ಹಾಗೇ ಇಡ್ಲಿ, ಸಾಂಬಾರ್ ಚಿತ್ರಗಳನ್ನೂ ಹಾಕಲಾಗಿದ್ದು, 10 ರೂಪಾಯಿಗೆ ನಾಲ್ಕು ಇಡ್ಲಿಗಳು ಎಂದು ಮಧ್ಯದಲ್ಲಿ ಬರೆಯಲಾಗಿದೆ.
ತಮಿಳುನಾಡಿನಲ್ಲಿ ಅಮ್ಮ ಉಣವುಗಂ (ಕ್ಯಾಂಟೀನ್) ಫೇಮಸ್. ಕಡಿಮೆ ಬೆಲೆಗೆ ಹೆಚ್ಚು ಹಾಗೂ ಉತ್ತಮ ಗುಣಮಟ್ಟದ ಆಹಾರ ಸಿಗುತ್ತದೆ. ಜಯಲಲಿತಾ ಅವರು 2013ರಲ್ಲಿ ಇದನ್ನು ಪ್ರಾರಂಭಿಸುವ ಮೂಲಕ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದರು.