ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅಂತರ್ರಾಷ್ಟ್ರೀಯ ಸಮಿತಿ ವತಿಯಿಂದ “ಕೋವಿಡ್ ಸಮಯದಲ್ಲಿ ಹಾಗೂ ನಂತರದ ಜೀವನ” ಎಂಬ ವಿಷಯದ ಕುರಿತು ದಿನಾಂಕ 04 ಸೆಪ್ಟೆಂಬರ್ 2020 ಶುಕ್ರವಾರದಂದು Zoom App ನಲ್ಲಿ ಆನ್ಲೈನ್ ಕಾರ್ಯಕ್ರಮವೊಂದು ನಡೆಸಲು ತೀರ್ಮಾನಿಸಿದ್ದು, ಕೇರಳದ ಮರ್ಕಝ್ ನಾಲೇಡ್ಜ್ ಸಿಟಿ ಇದರ ನಿರ್ದೇಶಕರಾದ ಡಾ| ಅಬ್ದುಲ್ ಹಕೀಮ್ ಅಲ್-ಅಝ್’ಹರಿ ಉಸ್ತಾದರು ಉಪನ್ಯಾಸವನ್ನು ನೀಡಲಿದ್ದಾರೆ.
ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಅಲೀ ಮುಸ್ಲಿಯಾರ್ ರವರ ದುಆದೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಂತರ್ರಾಷ್ಟ್ರೀಯ ಸಮಿತಿ ಅಡ್ಮಿನ್ ಇಲಾಖೆಯ ಅಧ್ಯಕ್ಷರಾದ ಡಾ| ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿಯವರು ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿಯವರಾದ ಜನಾಬ್ ಖಮರುದ್ದೀನ್ ಗೂಡಿನಬಳಿಯವರು ಉದ್ಘಾಟಿಸಿ, ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ಹಾಗೂ ಫೈನಾನ್ಷಿಯಲ್ ಕಂಟ್ರೋಲರ್ ಬಹು| ಹಮೀದ್ ಸಅದಿ ಈಶ್ವರಮಂಗಳ ರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಕೋವಿಡ್ ಕಾಲದಲ್ಲಿ ಹಲವರ ಕೆಲಸಗಳು ನಷ್ಟವಾಗಿದ್ದು, ಇನ್ನು ಕೆಲವರು ಆರ್ಥಿಕವಾಗಿ ಬಹುದೊಡ್ಡ ನಷ್ಟದಲ್ಲಿದ್ದಾರೆ. ಇದಕ್ಕೂ ಮಿಗಿಲಾಗಿ ಈ ಕೋವಿಡ್ ಕಾಲದಿಂದ ಹೊರಬಂದ ಮೇಲೆ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಊಹಿಸಲೂ ಸಾಧ್ಯವಿಲ್ಲದ ವಿಷಯವಾಗಿದೆ. ಹೀಗಿರುವಾಗ ನಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದು ಈ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಉಸ್ತಾದರು ನೀಡುವ ಸಲಹೆಗಳು ಉಪಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಲು ಅಡ್ಮಿನ್ ಇಲಾಖೆಯ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ಹಾಗೂ ಇಹ್ಸಾನ್ ಇಲಾಖೆಯ ಕಾರ್ಯದರ್ಶಿ ರಹೀಮ್ ಸಅದಿ ಖತ್ತರ್ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ
ಇರಾನ್ ಜೊತೆಗಿನ ಸಂಧಾನಕ್ಕೆ ಬ್ರೇಕ್? – ಅಮೆರಿಕ ನಿಯೋಗದ ಪ್ರವಾಸ ರದ್ದುಪಡಿಸಿದ ಟ್ರಂಪ್
ಇಸ್ರೇಲ್ ಪ್ರಧಾನಿಗೆ ಕ್ಯಾನ್ಸರ್: ಇರಾನ್ ಭಯದಿಂದ ವಿಷಯ ಮುಚ್ಚಿಟ್ಟಿದ್ದಾಗಿ ಸ್ಪಷ್ಟನೆ
ಇರಾನ್ ಪರ ಗುಂಪುಗಳ ದಾಳಿ ಹಿನ್ನೆಲೆ: ಇರಾಕ್ಗೆ ಸೇರಬೇಕಿದ್ದ 500 ಮಿಲಿಯನ್ ಡಾಲರ್ ನಗದು ಸಾಗಾಟವನ್ನು ತಡೆದ ಅಮೆರಿಕ
ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಮೂರು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ
ನಾಳೆ ಮಾತುಕತೆ: ಒಪ್ಪಂದಕ್ಕೆ ಬಾರದಿದ್ದರೆ ಇರಾನ್ನ ವಿದ್ಯುತ್ ಸ್ಥಾವರ, ಸೇತುವೆಗಳ ಧ್ವಂಸ- ಟ್ರಂಪ್ ಎಚ್ಚರಿಕೆ
ಯುಎಸ್-ಇರಾನ್ ಕದನ ವಿರಾಮ ಅಂತ್ಯಕ್ಕೆ ದಿನಗಣನೆ- ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ