janadhvani

Kannada Online News Paper

ಎಸ್ಸೆಸ್ಸೆಫ್ ಅಳಕ್ಕೆ ಶಾಖೆಯಿಂದ ಮಾದರಿ ಕಾರ್ಯಾಚರಣೆ- ವ್ಯಾಪಕ ಪ್ರಶಂಸೆ

ಮಳೆನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆಯ ಇಕ್ಕೆಲಗಳಲ್ಲಿ ಮತ್ತು ರಸ್ತೆಯಲ್ಲಿಯೂ ಮಣ್ಣು ತುಂಬಿತ್ತು ಇದರಿಂದ ವಾಹನ ಸವಾರರಿಗೆ ತುಂಬಾ ಕಷ್ಟಕರವಾಗುತ್ತಿತ್ತು ಇನ್ನೊಂದು ಕಡೆ ರಸ್ತೆಯಲ್ಲೇ ನೀರು ನಿಂತು ವಾಹನ ಸಂಚರಿಸುವಾಗ ರಸ್ತೆ ಬದಿ ನಡೆದು ಕೊಂಡು ಹೋಗುತ್ತಿರುವವರ ಮೇಲೆ ಕೆಸರೆರೆಚಾಟವಾಗುತ್ತಿತ್ತು ಇದನ್ನು ಮನಗಂಡು ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ವತಿಯಿಂದ ಮಣ್ಣನ್ನು ತೆರವುಗೊಳಿಸಿ, ನೀರನ್ನು ಪಕ್ಕದ ಚರಂಡಿಗೆ ಹರಿಯುವಂತೆ ಮಾಡಿ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಲಾಯಿತು.

ನಿನ್ನೆ ಮಧ್ಯಾಹ್ನದಿಂದಲೇ ಸಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಪ್ರಶಂಸೆಗಳು ಹರಿದು ಬಂತು SSF ರಾಜ್ಯ ಉಪಾಧ್ಯಕ್ಷರಾದ ಹಾಫಿಳ್ ಸುಫಿಯಾನ್ ಸಖಾಫಿ ಉಸ್ತಾದರು , ಎಸ್ ಎಸ್ ಎಫ್ ಉಪ್ಪಿನಂಗಡಿ ಡಿವಿಝನ್ ಅಧ್ಯಕ್ಷರಾದ ಮಿಸ್ಬಾಹಿ ಉಸ್ತಾದರು ಸೇರಿದಂತೆ ಹಲವು ಸಂಘಟನಾ ನೇತಾರರು ಕಾರ್ಯವೈಖರಿನ್ನು ಮೆಚ್ಚಿ ಶುಭಾಶಯಗಳನ್ನು ಕೋರಿದರು

ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಎಸ್‌ ಎಸ್ ಎಫ್ ಅಳಕ್ಕೆ ಶಾಖೆಯ ಪ್ರಧಾನ ಕಾರ್ಯದರ್ಶಿ ಸಮೀರ್ ಅಳಕ್ಕೆ , ಎಸ್ ಎಸ್‌ ಎಫ್ ಮೂರುಗೋಳಿ ಸೆಕ್ಟರ್ ಎಕ್ಸಿಕ್ಯುಟಿವ್ ಸಾಹುಲ್ ಹಮೀದ್ ಪಿ.ಕೆ, ಸೆಕ್ಟರ್ ತುರ್ತು ಸೇವಾ ತಂಡದ ಸದಸ್ಯರಾದ ನಿಝಾಂ ಅಳಕ್ಕೆ,ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ಕ್ಯಾಂಪಸ್ ಕಾರ್ಯದರ್ಶಿ ಶಾಹಿದ್ ಅಳಕ್ಕೆ , ಎಸ್ ಎಸ್ ಎಫ್ ಅಳಕ್ಕೆ ಶಾಖೆಯ ಕಾರ್ಯಕರ್ತರಾದ ಆಸಿಪ್ , ಹರ್ಷದ್ , ಅನ್ಸಾರ್ , ಸಿನಾನ್ ,ಉಬೈದುಲ್ಲಾ ಪಿ.ಕೆ,ಪವಾಝ್ , ಸಮೀರ್ , ಕಮಾಳ್ ಕೈ ಜೋಡಿಸಿದ್ದರು .