janadhvani

Kannada Online News Paper

ದ್ವಿತೀಯ ಪಿಯುಸಿ – ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಕಾಲೇಜಿಗೆ ಗೌರವ ತಂದುಕೊಟ್ಟ ಅಸ್ಮತ್ ಸನಾ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 536 ಅಂಕಗಳೊಂದಿಗೆ 90 ಶೇಕಡಾ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ತಾನು ವ್ಯಾಸಂಗ ಮಾಡುತ್ತಿರುವ ಏನೆಪೋಯಾ ಪಿಯು ಕಾಲೇಜಿಗೆ ಮತ್ತು ತನ್ನ ಹೆತ್ತವರಿಗೆ ಗೌರವ ತಂದುಕೊಟ್ಟಿದ್ದಾಳೆ ವಿದ್ಯಾರ್ಥಿನಿ ಅಸ್ಮತ್ ಸನಾ.

ಈಕೆ ಸುಭಾಷ್ ನಗರದ ಮುನೀರ್ ಅಹ್ಮದ್ ಮತ್ತು ರುಕ್ಷಾನ ಫಾತಿಮಾ ದಂಪತಿಗಳ ಸುಪುತ್ರಿ. ಅರ್ಥಶಾಸ್ತ್ರ, ಬ್ಯುಸಿನೆಸ್ ಸ್ಟಡಿ, ಅಕೌಂಟನ್ಸಿ ಯಲ್ಲಿ ಕ್ರಮವಾಗಿ 95,98 ಮತ್ತು 95 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಜನಧ್ವನಿ ಬಳಗವು ವಿದ್ಯಾರ್ಥಿನಿಯ ಭವಿಷ್ಯವು ಉನ್ನತವಾಗಲೆಂದು ಹಾರೈಸುತ್ತದೆ.